Ad Widget .

ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತೀರ್ಮಾನ| ಇನ್ಮುಂದೆ ಬೇಕಾಬಿಟ್ಟಿ ದೇಗುಲ ಪ್ರವೇಶಿಸುವಂತಿಲ್ಲ|

ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲು ಧಾರ್ಮಿಕ ಪರಿಷತ್ ತೀರ್ಮಾನಿಸಿದೆ. ಧಾರ್ಮಿಕ ಕೇಂದ್ರಗಳಲ್ಲಿ ಬರ್ಮುಡಾ, ತುಂಡುಡುಗೆಗಳನ್ನು ನಿಷೇಧಿಸಲಾಗಿದ್ದು, ಭಕ್ತರು ತಮಗೆ ಬೇಕಾದಂತೆ ದೇವಾಲಯ ಪ್ರವೇಶಿಸುವಂತಿಲ್ಲ. ಮೊದಲ ಹಂತದಲ್ಲಿ 216 ದೇವಾಲಯಗಳಲ್ಲಿ ನಿಯಮ ಜಾರಿಗೆ ಬರಲಿದೆ.

Ad Widget . Ad Widget .

ಎ ಗ್ರೇಡ್ ದೇವಾಲಯಗಳಲ್ಲಿ ಹಂತಹಂತವಾಗಿ ವಸ್ತ್ರಸಂಹಿತೆ ಜಾರಿ ಮಾಡಲಾಗುವುದು. ನಂತರ ಉಳಿದ ದೇವಾಲಯಗಳಿಗೂ ವಿಸ್ತರಣೆ ಮಾಡಲು ಪರಿಷತ್ ನಿರ್ಧರಿಸಲಾಗಿದೆ.

Ad Widget . Ad Widget .

ದ.ಕ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಅಕ್ಟೋಬರ್ 3 ರಿಂದ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಬರಲಿದೆ. ಈಗಾಗಲೇ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ. ಬರ್ಮುಡಾ, ತುಂಡುಡುಗೆಗಳನ್ನು ಧರಿಸಿ ದೇವಾಲಯಕ್ಕೆ ಬರುವಂತಿಲ್ಲ.

ದೇವಸ್ಥಾನಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ವಸ್ತ್ರಸಂಹಿತೆ ಪಾಲಿಸಲಾಗುತ್ತದೆ. ರಾಜ್ಯದ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ದೇಗುಲಕ್ಕೆ ಬರುವಾಗ ಸಾಂಪ್ರದಾಯಕ ಉಡುಗೆ ಧರಿಸಿ ಬರುವಂತೆ ತಿಳಿಸಲಾಗಿದೆ.

ಇದೂ ಓದಿರಿ…..

Leave a Comment

Your email address will not be published. Required fields are marked *