Ad Widget .

ಪುತ್ರನ ಕುರಿತು ಶಾರೂಕ್ ಹೇಳಿದ ಆ ಮಾತು ವೈರಲ್| ‘ನಮ್ಮ ಮಗ ಬೇಕಾದ್ದು ಮಾಡಲಿ’ ಎಂದು ಹೇಳಿದ್ದ ಖಾನ್ ದಂಪತಿ

Ad Widget . Ad Widget .

ಮುಂಬೈ: ‘ತಮ್ಮ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವಿಸಲಿ, ಮನಬಂದಷ್ಟು ಸಿಗರೇಟ್​ ಸೇದಲಿ, ಬೇಕಾದರೆ ಹುಡುಗಿಯರ ಹಿಂದೆಯೂ ಹೋಗಲಿ’ ಎಂದು ಶಾರುಖ್​ ಖಾನ್​ ಹೇಳಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ.
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2ರ ರಾತ್ರಿ ರೇವ್​ ಪಾರ್ಟಿ ಆಯೋಜಿಸಲಾಗಿತ್ತು.
ಅದರಲ್ಲಿ ಬಾಲಿವುಡ್​ನ ಸ್ಟಾರ್​ ನಟ ಶಾರುಖ್​ ಖಾನ್ ಪುತ್ರ ಆರ್ಯನ್​ ಖಾನ್​ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಶಾರುಖ್​ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಅಚ್ಚರಿ ಏನೆಂದರೆ, ಹಲವು ವರ್ಷಗಳ ಹಿಂದೆಯೇ ಶಾರುಖ್​ ಖಾನ್​ ಅವರು ಮಗನ ಬಗ್ಗೆ ಮಾತನಾಡಿದ್ದರು. ತಮ್ಮ ಪುತ್ರ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಬೇಕಾದರೂ ಹೋಗಲಿ ಎಂದು ಅವರು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Ad Widget . Ad Widget .

ಅದು 1997ರಲ್ಲಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಜೊತೆಯಾಗಿ ನೀಡಿದ್ದ ಸಂದರ್ಶನ. ಅದರಲ್ಲಿ ಅವರು ತಮ್ಮ ಪುತ್ರ ಆರ್ಯನ್​ ಖಾನ್​ ಬಗ್ಗೆ ಮಾತನಾಡಿದ್ದರು. ‘ಆರ್ಯನ್​ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್​ ಸೇವಿಸಬಹುದು ಮತ್ತು ಸೆ*ಕ್ಸ್​ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್​ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್​ ಎಂಜಾಯ್​ ಮಾಡಲಿ’ ಎಂದು ಶಾರುಖ್​ ಹೇಳಿದ್ದರು.

ಪಕ್ಕದಲ್ಲೇ ಕುಳಿತು ಇದನ್ನೆಲ್ಲ ಕೇಳಿಸಿಕೊಂಡಿದ್ದ ಗೌರಿ ಖಾನ್​ ಕಿಸಿಕಿಸಿ ನಕ್ಕಿದ್ದರು. ಆ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗೆ ಬೆಳೆಸಿದ್ದರ ಪರಿಣಾಮವಾಗಿಯೇ ಆರ್ಯನ್ ಖಾನ್​ ಇಂದು ಹಾದಿ ತಪ್ಪಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ, ಈ ಎಲ್ಲ ಮಾತುಗಳನ್ನು ಶಾರುಖ್​ ಖಾನ್​ ಅವರು ತಮಾಷೆಗೆ ಹೇಳಿರಬಹುದು. ಆದರೆ ಅದೆಲ್ಲವೂ ಇಂದು ನಿಜವಾಗಿದೆ. ಹಾಗಾಗಿ ಶಾರುಖ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಈಗ ಆರ್ಯನ್​ ಖಾನ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Leave a Comment

Your email address will not be published. Required fields are marked *