Ad Widget .

ಸುಳ್ಯ: ಗೆಲ್ಲು ಕಡಿಯುತ್ತಿದ್ದ ವೇಳೆ ಬಳ್ಳಿ ಸಿಲುಕಿ ಮೃತ್ಯು

ಸುಳ್ಯ: ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿ ಇದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೇವಳದಲ್ಲಿ ನಡೆದಿದೆ. ಮೃತಪಟ್ಟವರನ್ನು ಕೇವಳದ ಹೂವಪ್ಪ ಗೌಡ ಎಂದು ಗುರುತಿಸಲಾಗಿದೆ.

Ad Widget . Ad Widget .

ಹೂವಪ್ಪ ಗೌಡರವರು ಮಧ್ಯಾಹ್ನ ಒಂದೂವರೆ ಗಂಟೆಯ ಸಮಯದಲ್ಲಿ ತನ್ನ ಮನೆಯ ಎದುರಿನ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭದಲ್ಲಿ ಮರದಲ್ಲಿದ್ದ ಬಿಳಲು ಬಳ್ಳಿಗೆ ಅವರು ಸಿಲುಕಿದರೆನ್ನಲಾಗಿದೆ. ಬಳ್ಳಿ ಅವರ ದೇಹಕ್ಕೆ ಸಿಲುಕಿ ಬಿಗಿದಿದ್ದು ಇದನ್ನು ಕಂಡ ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಅವರನ್ನು ಕೆಳಗಿಳಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದರಾದರೂ, ಅದಾಗಲೇ ಅವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *