ಕಲುಷಿತ ನೀರು ಸೇವನೆ| ನಾಲ್ವರು ಸಾವು

ವಿಜಯಪುರ : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಬೋರ್ ವೆಲ್ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದ್ದರಿಂದಾಗಿ, ಕಲುಷಿತ ನೀರು ಸೇವಿಸಿದಂತ ಗ್ರಾಮದ ಅನೇಕರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಂತ ಗ್ರಾಮಸ್ಥರಲ್ಲಿ 10 ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Ad Widget ... ..

ವಿಜಯಪುರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದೆ. ಇದೇ ನೀರನ್ನು ಗ್ರಾಮದ ಜನರಿಗೆ ಕುಡಿಯಲು ಬಿಟ್ಟ ಕಾರಣ, ಗ್ರಾಮದಲ್ಲಿನ ಅನೇಕರಿಗೆ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದೆ.

Ad Widget

ಅಸ್ವಸ್ಥರಾದ ಮಕರಬ್ಬಿ ಗ್ರಾಮದ ಜನರನ್ನು ದಾವಣಗೆರೆ, ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿತ್ತು. ಹೀಗೆ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಲ್ವರು 10 ದಿನಗಳಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *