Ad Widget .

ಕಾಂಗ್ರೇಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಗೆ ಜೀವ ಬೆದರಿಕೆ – ಆರೋಪಿ ಬಂಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ

Ad Widget . Ad Widget .

ಬೆಂಗಳೂರು: ಮಂಗಳೂರಿನ ಸ್ಥಳೀಯ ನ್ಯೂಸ್ ಚಾನೆಲ್ ಒಂದರಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಚರ್ಚಾ ಕಾರ್ಯಾಕ್ರಮದಲ್ಲಿ ಪೋನ್ ಮೂಲಕ ಕಾಂಗ್ರೇಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರಿಗೆ ಬೆದರಿಕೆ ಒಡ್ಡಿದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರು ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದ್ದಾರೆ.

Ad Widget . Ad Widget .

ಈ ಕುರಿತಂತೆ ಟ್ವಿಟ್ ಮಾಡಿರುವ ಅವರು ಮಂಗಳೂರಿನ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೇಸ್ ಪಕ್ಷದ ವಕ್ತಾರೆ ಲಾವಣ್ಯ ಬಲ್ಲಾಳ್ ಮತ್ತು ಅವರ ಕುಟುಂಬದವರಿಗೆ ಹಲ್ಲೆಯ ಬೆದರಿಕೆಯೊಡ್ಡಿರುವುದು ಖಂಡನೀಯ, ಮಂಗಳೂರು ಪೊಲೀಸ್ ಆಯುಕ್ತರು ತಕ್ಷಣ ಸಂಘ ಪರಿವಾರಕ್ಕೆ ಸೇರಿದವನ್ನೆಲ್ಲಾದ ಈ ದುಷ್ಕರ್ಮಿಯನ್ನು ಬಂಧಿಸಿ ವಿಚಾರಣಗೊಳಪಡಿಸಬೇಕೆಂದು ಟ್ವಿಟ್ ಮಾಡಿದ್ದಾರೆ. ಈಗಾಗಲೇ ಕಾಂಗ್ರೇಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರ ಪರ ಇಡೀ ಕಾಂಗ್ರೇಸ್ ಪಕ್ಷ ನಿಂತಿದ್ದು, ಆರೋಪಿ ಬಂಧನಕ್ಕೆ ಆಗ್ರಸಿದೆ.

ಸೆಪ್ಟೆಂಬರ್ 30 ರಂದು ನಡೆದ ಈ ಚರ್ಚಾ ಕಾರ್ಯಕ್ರಮದಲ್ಲಿ ಲಾವಣ್ಯ ಬಲ್ಲಾಳ್ ಅವರು ಭಾಗವಹಿಸಿದ್ದರು, ಈ ಸಂದರ್ಭ ಪೊನ್ ಮೂಲಕ ಕರೆ ಮಾಡಿದ ಸಂದೀಪ್ ಎಂಬ ವ್ಯಕ್ತಿ ಲಾವಣ್ಯ ಬಲ್ಲಾಳ್ ಅವರನ್ನು ತರಾಟೆಗೆ ತೆಗದುಕೊಂಡಿದ್ದು, ನೀನು ಎಸಿ ಕಾರ್ ನಲ್ಲಿ ಕುಳಿತು ಮಾತನಾಡುವುದಲ್ಲ, ನಿನ್ನ ಮಗಳನ್ನು ಕರೆದುಕೊಂಡು ರಸ್ತೆಯಲ್ಲಿ ಸಿಗು , ಸಾರ್ವಜನಿಕವಾಗಿ ನೀನು ಬಂದು ಮಾತನಾಡು ನಿನಗೂ ಹೊಡೆಯುತ್ತೆವೆ ಎಂದು ಬೆದರಿಕೆ ಹಾಕಿದ್ದಾನೆ.

ಈಗಾಗಲೇ ರಾಜ್ಯ ಕಾಂಗ್ರೇಸ್ ನ ವಿವಿಧ ಮುಖಂಡರು ಬೆದರಿಕೆ ಒಡ್ಡಿದ ಘಟನೆಯನ್ನು ಖಂಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *