Ad Widget .

ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿ

Ad Widget . Ad Widget .

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ನಡೆದ ಭಾಬಾನಿಪುರ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್ ಹಿಂದೆ ಹಾಕುವ ಮೂಲಕ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಅದ್ಭುತ ಗೆಲುವು ದಾಖಲಿಸಿದ್ದಾರೆ.

Ad Widget . Ad Widget .

ಡಿಲಿಮಿಟೇಶನ್ ನಂತರ 2011ರಲ್ಲಿ ರೂಪುಗೊಂಡ ಭಬಾನಿಪುರ ಕ್ಷೇತ್ರವು ಪ್ರಾರಂಭದಿಂದಲೂ ತೃಣಮೂಲ ಕಾಂಗ್ರೆಸ್ (ಟಿ.ಎಂ.ಸಿ.) ಭದ್ರಕೋಟೆಯಾಗಿದೆ. ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸವು ಈ ಕ್ಷೇತ್ರದ ಅಡಿಯಲ್ಲಿ ಬರುತ್ತದೆ.

ಫಲಿತಾಂಶಗಳು ಪ್ರಕಟವಾದ ನಂತರ ಸಂಭವನೀಯ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೋರಿ ತಿಬ್ರೂವಾಲ್ ಕಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಉಪ ಚುನಾವಣೆ ಫಲಿತಾಂಶ ಘೋಷಣೆಯ ನಂತರ ಯಾವುದೇ ರೀತಿಯ ಹಿಂಸಾಚಾರವನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋಲ್ಕತ್ತಾ ಪೊಲೀಸರಿಗೆ ಕಠಿಣ ಆದೇಶಗಳನ್ನು ಪ್ರಿಯಾಂಕಾ ಟಿಬ್ರೂವಾಲ್ ಪತ್ರದಲ್ಲಿ ಕೋರಿದ್ದಾರೆ

Leave a Comment

Your email address will not be published. Required fields are marked *