ಮಂಗಳೂರು: ನಗರದ ಹೊರವಲಯದ ಗುರುಪುರ ಬಳಿಯ ಚಿಲಿಂಬಿ ಗುಡ್ಡೆ ಎಂಬಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆಯಾಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ಗಾಂಜಾ ಮಾಫಿಯಾ ಶಂಕೆ ವ್ಯಕ್ತವಾಗಿದೆ.
ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ಒಬ್ಬ ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದು, ಇವರು ಬಳಸಿದ್ದ ಕಾರ್ ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಅನುಮಾನ ಮೂಡಿಸಿದೆ. ಪತ್ತೆಯಾದ ನಾಲ್ವರನ್ನೂ ಬಜ್ಪೆ ಪೋಲಿಸ್ ಠಾಣೆಯ ಪೋಲಿಸರಿಗೆ ಒಪ್ಪಿಸಲಾಗಿದೆ.
ಗಾಂಜಾಮಾಫಿಯಾ ಶಂಕೆ
ಈ ಯುವಕ- ಯುವತಿಯರ ಗಾಂಜಾ ಮಾಫಿಯಾ ನಡೆಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಉನ್ನತ ತನಿಖೆ ನಡೆಸುವಂತೆ ಸಂಘಟನೆಯ ನಾಯಕರು ಆಗ್ರಹಿಸಿದ್ದಾರೆ.