Ad Widget .

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ

Ad Widget . Ad Widget .

ಬೆಂಗಳೂರು: ಪೋಷಕರು ಹೊರಗೆ ಹೋಗಿದ್ದ ಸಮಯದಲ್ಲಿ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಹನ್ನೊಂದು ವರ್ಷದ ಬಾಲಕ ಆಯ ತಪ್ಪಿ ಪಕ್ಕದ ಕ್ಲಬ್ ಹೌಸ್‍ನ 5ನೇ ಮಹಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‍ಆರ್ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಸಾಫ್ಟ್‌ವೇರ್ ಇಂಜಿನಿಯರ್ ಪುತ್ರ ಗಗನ್ ಮೃತಪಟ್ಟ ಬಾಲಕ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗಗನ್ ನಿನ್ನೆ ಸ್ನೇಹಿತರ ಜೊತೆ ಆಟವಾಡುತ್ತಿದ್ದುದನ್ನು ಗಮನಿಸಿದ ಪೋಷಕರು, ಮನೆ ಬಳಿಯೇ ಬಿಟ್ಟು ಕಾರ್ಯನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಹಡಿಯಿಂದ ಪಕ್ಕದ ಕ್ಲಬ್ ಹೌಸ್‍ನ 5ನೇ ಮಹಡಿಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಪೋಷಕರು ಮನೆಗೆ ಬರುವಷ್ಟರಲ್ಲಿ ಮಗನ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದರು. ಘಟನೆ ಸಂಬಂಧ ಆರ್‍ಆರ್ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *