Ad Widget .

ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿದ ಇಬ್ಬರು ಅಂದರ್

Ad Widget . Ad Widget .

ಬೆಳ್ತಂಗಡಿ: 10ನೇ ತರಗತಿ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿ ಆಕೆಯ ಗರ್ಭಿಣಿಯನ್ನಾಗಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಗಳನ್ನು ಜೆಸಿಬಿ ಚಾಲಕನಾಗಿದ್ದ ಕಾರ್ಕಳ ತಾಲೂಕಿನ ರವೀಂದ್ರ ಹಾಗೂ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ನಿವಾಸಿ ಯೋಗೀಶ ಎಂದು ತಿಳಿದುಬಂದಿದೆ.

ಆರೋಪಿಗಳು ಬೆಳ್ತಂಗಡಿ ಸವಣಾಲುವಿನ ಕಾಡು ಪ್ರದೇಶವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ್ದರು, ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.

ಲೌಕ್ ಡೌನ್ ಬಳಿಕ ಶಾಲೆಗೆ ತೆರಳಿದ ವೇಳೆ ಲಸಿಕೆ ನೀಡುವ ಸಲುವಾಗಿ ವೈದ್ಯರು ಪರೀಕ್ಷಿಸಿದಾಗ ಅನುಮಾನಗೊಂಡ ವೈದ್ಯರು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಪರೀಕ್ಷೆ ನಡೆಸಿರುವಾಗ ಆಕೆ ಗರ್ಭಿಣಿಯಾಗಿರುವುದು ವೈದ್ಯರು ದೃಢಪಡಿಸಿದ್ದರು. ಬಳಿಕ ಮನೆಯವರಿಗ ಮಾಹಿತಿ ನೀಡಿ ಆಕೆ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

Leave a Comment

Your email address will not be published. Required fields are marked *