September 2021

ಕಾರ್ಕಳ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಕಾರ್ಕಳ: ಇಲ್ಲಿನ ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಆಹಾರ ಅರಸಿ‌ ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಅದನ್ನು ರಕ್ಷಿಸಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬರ ಖಾಸಗಿ ಸ್ಥಳದಲ್ಲಿನ ಬಾವಿಯೊಂದರಲ್ಲಿ ಬಿದ್ದಿದ ಚಿರತೆಯನ್ನು ಹಗ್ಗ ಇಳಿಸಿ ರೆಸ್ಕ್ಯೂ ಕಾರ್ಯ ಕೈಗೊಂಡ ರಕ್ಷಿಸಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಗಾಣಿಗ, ಅಶ್ವಿತ್ ಕೆ, ರಾಘವೇಂದ್ರ ಕೆ ಅರಣ್ಯ ರಕ್ಷಕರಾದ ಸಂದೀಪ್ ಸಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀರ್, ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. https://youtube.com/shorts/HyAusPrD66U?feature=share ಚಿರತೆಯು ನೀರಿನಲ್ಲಿಯೇ […]

ಕಾರ್ಕಳ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ Read More »

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ| 60ಸಾವಿರ ಗಡಿ ದಾಟಿ ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಷೇರು ಮಾರುಕಟ್ಟೆ ಶುಕ್ರವಾರ ಹೊಸ ಇತಿಹಾಸ ಸೃಷ್ಟಿಸಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 338 ಅಂಕಗಳ ಜಿಗಿತದೊಂದಿಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್​ 60 ಸಾವಿರ ಗಡಿ ದಾಟಿದೆ. ಭಾರತೀಯ ಷೇರು ಮಾರುಕಟ್ಟೆ ಇದೇ ಮೊದಲ ಬಾರಿಗೆ 60 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 100 ಅಂಕಗಳ ಜಿಗಿತದೊಂದಿಗೆ ದಾಖಲೆಯ 17,923.35 ನಲ್ಲಿ ವಹಿವಾಟು ನಡೆಸುತ್ತಿದೆ. ಗುರುವಾರ 958 ಪಾಯಿಂಟ್​ಗಳ ಏರಿಕೆ ಕಂಡು ಸೆನ್ಸೆಕ್ಸ್

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ| 60ಸಾವಿರ ಗಡಿ ದಾಟಿ ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್ Read More »

ಉಡುಪಿ: ಮೀನುಗಳು ಸಾವನಪ್ಪಿದ ಪ್ರಕರಣ|ಅಧಿಕಾರಿಗಳಿಂದ ತೆಂಗಿನಕಾಯಿ ಮುಟ್ಟಿಸಿ ಪ್ರಮಾಣ ಮಾಡಿಸಿದ ಗ್ರಾಮಸ್ಥರು.!

ಉಡುಪಿ: ಜಿಲ್ಲೆಯ ಉದ್ಯಾವರ ಬಳಿ, ಪಾಪಾನಾಶಿನಿ ನದಿ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರುವ ಹಿನ್ನಲೆ ಈ ದುಷ್ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳ ಬಳಿ ಗ್ರಾಮಸ್ಥರು ತೆಂಗಿನಕಾಯಿ ಮುಟ್ಟಿಸಿ ಪ್ರಮಾಣ ಮಾಡಿಸಿದ ಘಟನೆ ಸೆ. 24 ರಂದು ನಡೆದಿದೆ. ಇಲ್ಲಿನ ಪಿತ್ರೋಡಿ ಹೊಳೆಯಲ್ಲಿ ರಾಶಿ ರಾಶಿ ಪ್ರಮಾಣದಲ್ಲಿ ಮೀನುಗಳು ಸತ್ತು ಬಿದ್ದಿವೆ. ಇದಕ್ಕೆ ಸ್ಥಳೀಯ ಫಿಶ್‌ ಮೀಲ್‌ ಫ್ಯಾಕ್ಟರಿಯಿಂದ ಹೊರಗೆ ಬರುವ ತ್ಯಾಜ್ಯವೇ ಕಾರಣ. ಆದರೆ ಪ್ರತಿ ಬಾರಿ ಅಧಿಕಾರಿಗಳು ಫ್ಯಾಕ್ಟರಿ ಪರವಾಗಿ

ಉಡುಪಿ: ಮೀನುಗಳು ಸಾವನಪ್ಪಿದ ಪ್ರಕರಣ|ಅಧಿಕಾರಿಗಳಿಂದ ತೆಂಗಿನಕಾಯಿ ಮುಟ್ಟಿಸಿ ಪ್ರಮಾಣ ಮಾಡಿಸಿದ ಗ್ರಾಮಸ್ಥರು.! Read More »

ಸ್ಯಾಂಡಲ್‍ವುಡ್ ನಟ ನಿಖಿಲ್, ರೇವತಿ ದಂಪತಿಗೆ ಗಂಡು ಮಗು

ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ದಂಪತಿಗೆ ಇಂದು ಗಂಡು ಮಗು ಜನನವಾಗಿದೆ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರೇವತಿ ಜನ್ಮ ನಿಡಿದ್ದಾರೆ. ಈ ಹಿನ್ನಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಾಜಿ ಸಿಎಂ ಹೆಚ್‍ಡಿಕೆ ಆಸ್ಪತ್ರೆಗೆ ಭೇಟಿ ನೀಡಿ ತಾಯಿ, ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಕೆಲವು ದಿನಗಳ ಹಿಂದೆ ನಗರದ ಹೆಚ್‍ಎಸ್‍ಆರ್

ಸ್ಯಾಂಡಲ್‍ವುಡ್ ನಟ ನಿಖಿಲ್, ರೇವತಿ ದಂಪತಿಗೆ ಗಂಡು ಮಗು Read More »

ಕಾರ್ಕಳ: ಅಪ್ರಾಪ್ತೆ ಮೇಲೆ ಅತ್ಯಾಚಾರ – ಪ್ರಕರಣ ದಾಖಲು

ಕಾರ್ಕಳ: ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿ ಬೆದರಿಸಿ , ಹಲ್ಲೆ ಮಾಡಿದ ಆರೋಪಿ ವಿರುದ್ದ ಕಾರ್ಕಳ ನಗರ ಠಾಣೆಯಲ್ಲಿ ಸೆ.23ರ ಗುರುವಾರ ಪ್ರಕರಣ ದಾಖಲಾಗಿದೆ. ಕಾರ್ಕಳದ ಬಂಗ್ಲೆಗುಡ್ಡೆಯ ನಿಯಾಜ್ ಪ್ರಕರಣ ಆರೋಪಿ. ಈತ ದೂರುದಾರರು ಬಾಲಕಿ ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಕಾಲ್ ಮಾಡಿದ್ದು ಮಾತನಾಡಿದಾಗ ತಪ್ಪಿ ಕರೆ ಬಂದಿದ್ದಾಗಿ ತಿಳಿಸಿ , ಬಳಿಕ ಪದೇ ಪದೇ ಕರೆ ಮಾಡಿ ಸಲುಗೆ ಬೆಳೆಸಿದ್ದ. ಕಳೆದ ವರ್ಷ ಮೇ. 3೦ ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ

ಕಾರ್ಕಳ: ಅಪ್ರಾಪ್ತೆ ಮೇಲೆ ಅತ್ಯಾಚಾರ – ಪ್ರಕರಣ ದಾಖಲು Read More »

ಮಂಗಳೂರು: ಅಪರೂಪದ ನೇರಳೆ ಏಡಿ ಪತ್ತೆ

ಮಂಗಳೂರು: ಉತ್ತರಕನ್ನಡ ಜಿಲ್ಲೆಯ ಕಾರವಾರ ವಲಯದ ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಪ್ರಭೇದಗಳಲ್ಲಿ ಒಂದಾದ ನೇರಳೆ ಏಡಿ ಪತ್ತೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಬಂಟ್ವಾಳ ಎಸ್‌ವಿಎಸ್‌‌ ಕಾಲೇಜು ಉಪನ್ಯಾಸಕ ಸುಪ್ರೀತ್‌‌ ಕಡಕೋಳ್‌‌ ಅವರ ತಂಡಕ್ಕೆ ಸೆ.11ರಂದು ರಸ್ತೆಬದಿಯಲ್ಲಿ ಏಡಿ ಕಾಣಿಸಿದೆ. ಈ ನೇರಳೆ ಬಣ್ಣದ ಏಡಿಗಳು 2015ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಅಂಬೋಲಿಯಲ್ಲಿ ಮರದ ಪೊಟರೆಯ ನೀರಿನಲ್ಲಿ ಪತ್ತೆಯಾಗಿತ್ತು. ಸಾಗರ ತಾಲೂಕಿನ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ 2017ರಲ್ಲಿ ಕಂಡುಬಂದಿತ್ತು. ನಂತರ

ಮಂಗಳೂರು: ಅಪರೂಪದ ನೇರಳೆ ಏಡಿ ಪತ್ತೆ Read More »

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಪಲ್ಟಿ – ಹಲವರಿಗೆ ಗಾಯ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಹೊಳೆಯ ಬದಿಗೆ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಊರ್ನಡ್ಕ ಎಂಬಲ್ಲಿ ಸೆ.23ರಂದು ನಡೆದಿದೆ. ಚಳ್ಳಕೆರೆಯಿಂದ ಧರ್ಮಸ್ಥಳ ಮಾರ್ಗವಾಗಿ ಗುಂಡ್ಯ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಉದನೆ – ಎಂಜಿರ ಮಧ್ಯದ ಊರ್ನಡ್ಕ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ನಡುವೆ

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಪಲ್ಟಿ – ಹಲವರಿಗೆ ಗಾಯ Read More »

ರೈತ ಚಳುವಳಿಗಾರರನ್ನು ಅಪಹಾಸ್ಯ ಮಾಡಿದ ಯಕ್ಷಗಾನ ಕಲಾವಿದ| ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚಿಸಿದ ದಿನೇಶ್ ಕೋಡಪದವು|

ಮಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ ಅವರೆಲ್ಲರೂ ನಕಲಿಗಳು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಯಕ್ಷಗಾನ ಕಲಾವಿದ ದಿನೇಶ್‌ ಕೋಡಪದವು, ರೈತ ಸಂಘಟನೆಗಳ ಆಕ್ರೋಶದ ಬೆನ್ನಲ್ಲೇ ರೈತರ ಕ್ಷಮೆ ಯಾಚಿಸಿದ್ದಾರೆ. ಯಕ್ಷಗಾನ ರಂಗದಲ್ಲಿ ಮೂವರು ಕಲಾವಿದರು ರೈತರನ್ನು ಅಪಹಾಸ್ಯ ಮಾಡಿ ತುಳುವಿನಲ್ಲಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ವೇದಿಕೆಯಲ್ಲಿ ಸಹ ಕಲಾವಿದರೊಂದಿಗೆ ಹಾಸ್ಯ ಸಂಭಾಷಣೆ ನಡೆಸಿದ್ದ ದಿನೇಶ್‌, “ಹಲವು ತಿಂಗಳುಗಳಿಂದ ಹಸಿರು ಶಾಲು, ಟೊಪಿ ಧರಿಸಿ ದೆಹಲಿ ಗಡಿಗಳಲ್ಲಿ

ರೈತ ಚಳುವಳಿಗಾರರನ್ನು ಅಪಹಾಸ್ಯ ಮಾಡಿದ ಯಕ್ಷಗಾನ ಕಲಾವಿದ| ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚಿಸಿದ ದಿನೇಶ್ ಕೋಡಪದವು| Read More »

ಮೈಸೂರು ಗ್ಯಾಂಗ್ ರೇಪ್| ಕೊನೆಗೂ ಹೇಳಿಕೆ ನೀಡಿದ ಸಂತ್ರಸ್ತೆ|

ಮೈಸೂರು: ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಮೈಸೂರು ಗ್ಯಾಂಗ್‍ರೇಪ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಸಂತ್ರಸ್ತೆ ಗುರುವಾರ(ಸೆ.23)ರಂದು 2ನೇ ಜೆಎಂಎಫ್‍ಸಿ ನ್ಯಾಯಾಧೀಶರ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸೆಕ್ಷನ್ 164 ಅಡಿಯಲ್ಲಿ ಯುವತಿಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ಸುಮಾರು 45 ನಿಮಿಷಗಳ ಕಾಲ ಯುವತಿ ಹೇಳಿಕೆ ನೀಡಿದ್ದಾಳೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಸೆಪ್ಟೆಂಬರ್ 7ರಂದು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮೈಸೂರಿನ ಮೂರನೇ ಜೆಎಮ್​ಎಫ್​ಸಿ ಕೋರ್ಟ್‌ನ ಜಡ್ಜ್ ಆದೇಶ ಹೊರಡಿಸಿದ್ದಾರೆ. ಬಾಲಮಂದಿರದಲ್ಲಿರುವ

ಮೈಸೂರು ಗ್ಯಾಂಗ್ ರೇಪ್| ಕೊನೆಗೂ ಹೇಳಿಕೆ ನೀಡಿದ ಸಂತ್ರಸ್ತೆ| Read More »

ಮಾರಲು ಇನ್ನೇನಿದೆ ಎಂದು ನೋಡ್ತಿದೀರಾ? ಪ್ರಧಾನಿಯನ್ನು ಛೇಡಿಸಿದ ಕಾಂಗ್ರೇಸ್

ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಫೊಟೋಗೆ ಕಮೆಂಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಫೋಟೋ ಶೂಟ್‌ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್‌ ಕಳಪೆಯಾಗಿದೆ!’ ಎಂದು ಛೇಡಿಸಿದೆ. ಟಾರ್ಚ್‌ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್‌ಗಾಗಿಯೇ ಪ್ರತ್ಯೇಕ ಲೈಟಿಂಗ್‌ ವ್ಯವಸ್ಥೆ ಮಾಡಿಕೊಳ್ಳಿ!’ ಎಂದು ಕಾಂಗ್ರೆಸ್‌ ಮೋದಿ ಅವರಿಗೆ ವ್ಯಂಗ್ಯದ ಸಲಹೆ ನೀಡಿದೆ. ‘ಅಂದ ಹಾಗೆ ಮಾರಲು ದೇಶದ ಇನ್ಯಾವ

ಮಾರಲು ಇನ್ನೇನಿದೆ ಎಂದು ನೋಡ್ತಿದೀರಾ? ಪ್ರಧಾನಿಯನ್ನು ಛೇಡಿಸಿದ ಕಾಂಗ್ರೇಸ್ Read More »