ಕೃಷಿಕಾಯ್ದೆ ವಿರೋದಿಸಿ ನಾಳೆ ‘ಭಾರತ್ ಬಂದ್’| ರೈತಪರ ಸಂಘಟನೆಗಳಿಂದ ದೇಶಾದ್ಯಂತ ಹೋರಾಟ| ಬಂದ್ ಹೆಸರಲ್ಲಿ ತೊಂದರೆ ಕೊಡಬೇಡಿ- ಸಿಎಂ ಬೊಮ್ಮಾಯಿ ಮನವಿ
ಬೆಂಗಳೂರು: ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಬಂದ್‌ಗೆ ಕರೆ ಕೊಟ್ಟಿದೆ. ದೇಶಾದ್ಯಂತ ಬಂದ್ ಪ್ರಯುಕ್ತ ಪ್ರತಿಭಟನೆಗಳು ನಡೆಯಲಿರುವ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟಣೆಗಳು ಕರ್ನಾಟಕ ಬಂದ್ ನಡೆಸಲು ಮುಂದಾಗಿದ್ದು ಬಂದ್ ಯಶಸ್ಸಿಗೆ ಎಲ್ಲಾ ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ […]