September 2021

ಗಣೇಶ ಹಬ್ಬಕ್ಕೆ ‘ಲಂಕೆ’ ಬಿಡುಗಡೆ| ಬ್ರೇಕ್ ನ ನಿರೀಕ್ಷೆಯಲ್ಲಿ ಲೂಸ್ ಮಾದ ಯೋಗಿ

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರ ಗಣೇಶ ಹಬ್ಬದ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಸೆಪ್ಟೆಂಬರ್ 10ಕ್ಕೆ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಿದೆ. ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಚಿತ್ರವನ್ನು ಆರಂಭದಲ್ಲಿ ಜುಲೈ 19ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಕೊರೋನಾ ಅಬ್ಬರ ಹಿನ್ನಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ನೀಡಿದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ನಂತರ ಬಿಡುಗಡೆ ದಿನಾಂಕವನ್ನು ಆಗಸ್ಟ್ 20ಕ್ಕೆ ಮುಂದೂಡಲಾಯಿತು. ಅಂದ ಸಹ ಚಿತ್ರ ಬಿಡುಗಡೆಯಾಗಲಿಲ್ಲ. […]

ಗಣೇಶ ಹಬ್ಬಕ್ಕೆ ‘ಲಂಕೆ’ ಬಿಡುಗಡೆ| ಬ್ರೇಕ್ ನ ನಿರೀಕ್ಷೆಯಲ್ಲಿ ಲೂಸ್ ಮಾದ ಯೋಗಿ Read More »

ಪುತ್ತೂರು: ಠಾಣೆ ಮೆಟ್ಟಿಲೇರಿಸಿದ ಯುವಕ- ಯುವತಿಯ ಲವ್| ಪ್ರೀತಿ ಅರಸಿ ಬಂದಾತನಿಗೆ ಪೊಲೀಸ್ ಡ್ರಿಲ್|

ಪುತ್ತೂರು: ಇನ್ಸ್ಟ್ರಾಗ್ರಾಂ ಮೂಲಕ ಪರಿಚಯವಾದ ಯುವತಿಯೋರ್ವಳನ್ನು ಭೇಟಿಯಾಗಲು ಬಂದಾತ ಆಕೆಯ ಜೊತೆಗೆ ಠಾಣೆ ಮೆಟ್ಟಿಲೇರಿದ ಘಟನೆ ಪುತ್ತೂರಲ್ಲಿ ನಡೆದಿದೆ.ರಾಯಚೂರು ಮೂಲದ ಯುವಕನೋರ್ವ ಪುತ್ತೂರಿನ ಯುವತಿಯೋರ್ವಳನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಸಂಪರ್ಕ ಮಾಡಲು ತನ್ನ ಸ್ನೇಹಿತನ ಜೊತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಇದನ್ನು ಗಮನಿಸಿದ ತಂಡವೊಂದು ಅವರನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ತುಸು ಗೊಂದಲ ಉಂಟಾಯಿತು. ಅನುಮಾನಗೊಂಡ ಆ ತಂಡದ ಕೆಲವರು ಯುವಕ ಮತ್ತು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇನ್ಟ್ರಾಗ್ರಾಂ ಮೂಲಕ ಯುವಕ

ಪುತ್ತೂರು: ಠಾಣೆ ಮೆಟ್ಟಿಲೇರಿಸಿದ ಯುವಕ- ಯುವತಿಯ ಲವ್| ಪ್ರೀತಿ ಅರಸಿ ಬಂದಾತನಿಗೆ ಪೊಲೀಸ್ ಡ್ರಿಲ್| Read More »

ಬದುಕನ್ನು ಬರ್ಬಾದ್ ಆಗಿಸಿದ ಕೌನ್ ಬನೇಗಾ ಕರೋಡ್ ಪತಿ| ಐದು ಕೋಟಿ ಗೆದ್ದಾತ ದಿವಾಳಿ

KBC ಸೀಸನ್ 5ರಲ್ಲಿ ಭಾಗವಹಿಸಿ ಬರೋಬ್ಬರಿ 5 ಕೋಟಿ ರೂಪಾಯಿ ಗೆದ್ದ ಸುಶೀಲ್ ಕುಮಾರ್ ಭಾರೀ ಸುದ್ದಿಯಾಗಿದ್ದರು. 2011ರಲ್ಲಿ ಅಮಿತಾಭ್ ಬಚ್ಚನ್ ಬಿಹಾರದ ಸುಶೀಲ್ ಕುಮಾರ್ ಅವರಿಗೆ 5 ಕೋಟಿಯ ಚೆಕ್ ನೀಡಿದ್ದರು. ಎಲ್ಲರಿಗೂ ಕೆಬಿಸಿ ನಂತರ ಅದೃಷ್ಟ ಖುಲಾಯಿಸುತ್ತಾದರೂ ಸುಶೀಲ್ ಕುಮಾರ್ ದುರಾದೃಷ್ಟ ಶುರುವಾಗಿದ್ದೇ ಕೆಬಿಸಿ ಗೆದ್ದ ಮೇಲೆ. ನನ್ನ ಜೀವನದ ಅತ್ಯಂತ ಕೆಟ್ಟ ಭಾಗ ಕೆಬಿಸಿ ಗೆದ್ದ ಮೇಲೆ ಪ್ರಾರಂಭವಾಯ್ತು ಎಂದಿದ್ದಾರೆ ಸುಶೀಲ್.2015-2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ನನಗೆ ಏನು ಮಾಡಬೇಕೆಂದು

ಬದುಕನ್ನು ಬರ್ಬಾದ್ ಆಗಿಸಿದ ಕೌನ್ ಬನೇಗಾ ಕರೋಡ್ ಪತಿ| ಐದು ಕೋಟಿ ಗೆದ್ದಾತ ದಿವಾಳಿ Read More »

ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ| ವೈರಲ್ ಆದ ಸುದ್ದಿಯ ಅಸಲಿಯತ್ತೇನು?

ಚಾಮರಾಜನಗರ : ಇಂದು ರಾಜ್ಯಾದ್ಯಂತ ವಿಶೇಷ ಕೊರೋನಾ ಲಸಿಕಾ ಉತ್ಸವ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳ ಮುಂದೆ ಲಸಿಕೆ ಪಡೆಯಲು ಜನರು ಮುಗಿಬಿದ್ದಿದ್ದಾರೆ. ಮತ್ತೊಂದೆಡೆ ಕೊರೋನಾ ಲಸಿಕೆ ಪಡೆಯದಿದ್ದರೇ, ನೋ ರೇಷನ್, ನೋ ಪೆನ್ಷನ್ ಎಂಬುದಾಗಿ ಆದೇಶಿಸಲಾಗಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಅಸಲಿಗೆ ಈ ಸುದ್ದಿಯ ನಿಖರತೆ ಏನು ಎಂದು ಸ್ವತಃ ಡಿಸಿ ಎಂ.ಆರ್ ರವಿ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಹೇಳಿದ್ದೇನು?… ಇಲ್ಲಿದೆ ಮಾಹಿತಿ. ಚಾಮರಾಜನಗರ ಜಿಲ್ಲಾಧಿಕಾರಿಗಳು ಈ ಕುರಿತು

ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ| ವೈರಲ್ ಆದ ಸುದ್ದಿಯ ಅಸಲಿಯತ್ತೇನು? Read More »

ಸ್ಕೂಟಿಯಿಂದ ಜಾರಿಬಿದ್ದು ಮಹಿಳೆ ಸಾವು

ಕಾರವಾರ: ಸೊಸೆಯ ಜೊತೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಅತ್ತೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಆರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ‌ನಡೆದಿದ್ದು ಅತ್ತೆ-ಸೊಸೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ನಗರದ ಬಾಡಾದ ನಂದನಗದ್ದಾ ನಿವಾಸಿ ಶಾಲಿನಿ ನಾಯ್ಕ ಮೃತಪಟ್ಟ ಮಹಿಳೆ. 73 ವರ್ಷದ ಈಕೆ ತನ್ನ ಸೊಸೆ ವೈಶಾಲಿ ನಾಯ್ಕ ಜೊತೆ ಸ್ಕೂಟಿ ಹಿಂಬದಿ ಕುಳಿತು ಅರ್ಗಾದ ನೌಕಾನೆಲೆ ಬಳಿ ಕೆಲ ಸಾಮಗ್ರಿ ತರಲು ತೆರಳಿದ್ದರು ಎನ್ನಲಾಗಿದೆ. ಅಂಗಡಿಯಿಂದ ಸಾಮಗ್ರಿ

ಸ್ಕೂಟಿಯಿಂದ ಜಾರಿಬಿದ್ದು ಮಹಿಳೆ ಸಾವು Read More »

ಅಡುಗೆ ಮನೆಗೆ ಮತ್ತೆ ಗ್ಯಾಸ್ ಬೆಲೆ ಏರಿಕೆ ಬಿಸಿ| ಸಿಲಿಂಡರ್ ಬೆಲೆ 25 ರೂ. ಹೆಚ್ಚಳ

ಬೆಂಗಳೂರು: ಪೆಟ್ರೋಲಿಯಂ ಕಂಪೆನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದು, ಸಾಮಾನ್ಯ ಜನರಿಗೆ ಕೊರೊನಾ ಸಂದರ್ಭದಲ್ಲಿ ಮತ್ತೊ ಹೊಡೆತ ನೀಡಿದೆ.ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂ. 50 ಪೈಸೆಯಾಗಿದೆ. ಹೊಸ ದರ ಇಂದೇ ಜಾರಿಗೆ ಬರಲಿದೆ. ಇನ್ನು 19 ಕೆಜಿ ಕಮರ್ಷಿಯಲ್ ಸಿಲೆಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದ್ದು ಅದಕ್ಕೆ ಗ್ರಾಹಕರು ಸಾವಿರದ 693 ರೂಪಾಯಿಯಷ್ಟು ದೆಹಲಿಯಲ್ಲಿ ದರವಿದೆ.ಕಳೆದ 15

ಅಡುಗೆ ಮನೆಗೆ ಮತ್ತೆ ಗ್ಯಾಸ್ ಬೆಲೆ ಏರಿಕೆ ಬಿಸಿ| ಸಿಲಿಂಡರ್ ಬೆಲೆ 25 ರೂ. ಹೆಚ್ಚಳ Read More »

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು

ಬೆಳ್ತಂಗಡಿ: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಇಂದು ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್( 26) ಮೃತಪಟ್ಟವರು. ಆಸಿದ್ ಅವರು ಕೂಲಿ ಕಾರ್ಮಿಕರಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆ ಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರು ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು ಅವಿವಾಹಿತರಾಗಿದ್ದರು.

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು Read More »

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್|

ಚಿಕ್ಕಬಳ್ಳಾಪುರ: ನಾಟಿ ಕೋಳಿಯೊಂದನ್ನು ಹಿಡಿದು ಕೆಎಸ್​ಆರ್​ಟಿಸಿ ಬಸ್​ ಹತ್ತಿದ ಪ್ರಯಾಣಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅರೆ! ಅದರಲ್ಲೇನು ವಿಶೇಷ ಅಂತೀರಾ? ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಶ್ರಾವಣ ಮಾಸದ ಪ್ರಯುಕ್ತ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ವಾಪಸ್​ ಮನೆಗೆ ಹೋಗಲೆಂದು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದರು. ಸೋಮೇಶ್ವರಕ್ಕೆ ಒಂದು ಟಿಕೆಟ್​ ಕೊಡಿ ಎಂದು ಪ್ರಯಾಣಿಕ ಕೇಳಿದ್ರೆ, ಬಸ್‌ ಕಂಡಕ್ಟರ್ ಕೊಟ್ಟದ್ದು ಒಂದೂವರೆ ಟಿಕೆಟ್​! ಪ್ರಯಾಣಿಕನಿಗೆ ಒಂದು ಟಿಕೆಟ್(10 ರೂ.), ಅವರ ಜತೆ ಇದ್ದ ನಾಟಿಕೋಳಿಗೂ

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್| Read More »

ಪೊಲೀಸ್ ಠಾಣೆಯಲ್ಲಿ ‘ಸೆಕ್ಸ್’ ನಡೆಸಲು ಒತ್ತಾಯ| ಗಂಭೀರ ಆರೋಪ ಮಾಡಿದ ಅಪಹರಣ ಪ್ರಕರಣದ ಆರೋಪಿಗಳು|

ಜಮ್ ಶೆಡ್ ಪುರ : ಜಾರ್ಖಂಡ್ ನ ಜಮ್ ಶೆಡ್ ಪುರದ ಇಬ್ಬರು ಪುರುಷರನ್ನು ನಗರ ಪೊಲೀಸ್ ಠಾಣೆಯಲ್ಲಿ ‘ಬೆತ್ತಲೆಗೊಳಿಸಲಾಗಿದೆ’ ಮತ್ತು ಪೊಲೀಸರು ಪರಸ್ಪರ ಲೈಂಗಿಕ ಸಂಭೋಗ ನಡೆಸುವಂತೆ ಕೇಳಿದ್ದಾರೆ ಮತ್ತು ಅವರು ನಿರಾಕರಿಸಿದಾಗ, ಅವರನ್ನು ಹೊಡೆದು ಆಫ್ಘಾನಿಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ’ ಎಂದು ಆರೋಪಿಸಲಾದ ಘಟನೆ ಇಲ್ಲಿ ನಡೆದಿದೆ. ಎರಡು ದಿನಗಳ ಮೊದಲು ದಾಖಲಾದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 26 ರಂದು ವಿಚಾರಣೆ ಯ ಸಮಯದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಅರ್ಜೂ ಮತ್ತು

ಪೊಲೀಸ್ ಠಾಣೆಯಲ್ಲಿ ‘ಸೆಕ್ಸ್’ ನಡೆಸಲು ಒತ್ತಾಯ| ಗಂಭೀರ ಆರೋಪ ಮಾಡಿದ ಅಪಹರಣ ಪ್ರಕರಣದ ಆರೋಪಿಗಳು| Read More »

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ

ಮಂಗಳೂರು: ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ವಿದ್ಯಮಾನಗಳನ್ನು ಗಮನಿಸಿ, ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ, ಚಾಲ್ತಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ Read More »