September 2021

ಕಡಬ| ಪೊಲೀಸ್ ‌ವಾಹನ ಹಾಗೂ ಖಾಸಗಿ ಬೊಲೆರೋ ಡಿಕ್ಕಿ| ಎಸ್ ಐ ರುಕ್ಮನಾಯ್ಕ್ ಅಪಾಯದಿಂದ ಪಾರು

ಕಡಬ: ಎಸ್ ಐ ಸಹಿತ ಪೊಲೀಸರು ಪ್ರಯಾಣಿಸುತ್ತಿದ್ದ ಜೀಪು ಹಾಗೂ ಖಾಸಗಿ ಬೊಲೆರೋ ಮಧ್ಯೆ ಕಡಬ ಸಮೀಪದ ಕಳಾರ ಎಂಬಲ್ಲಿ ಸೆ.4ರಂದು ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ . ಅಪಘಾತದಲ್ಲಿ ಎರಡು ವಾಹನಗಳು ನುಜ್ಜುಗುಜ್ಜಾಗಿದ್ದು ಕಡಬ ಠಾಣಾ ಎಸ್ ಐ ರುಕ್ಮನಾಯ್ಕ್ ಸಹಿತ ಪೊಲೀಸರು ಹಾಗೂ ಇನ್ನೊಂದು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಡಬ ಎಸ್.ಐ. ರುಕ್ಮ ನಾಯ್ಕ್ ಪೊಲೀಸ್ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಸಹಿತ ಕಡಬದ ಪೊಲೀಸ್‌ ಜೀಪಿನ ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು […]

ಕಡಬ| ಪೊಲೀಸ್ ‌ವಾಹನ ಹಾಗೂ ಖಾಸಗಿ ಬೊಲೆರೋ ಡಿಕ್ಕಿ| ಎಸ್ ಐ ರುಕ್ಮನಾಯ್ಕ್ ಅಪಾಯದಿಂದ ಪಾರು Read More »

ಪ್ಯಾರಾಲಂಪಿಕ್: ಶೂಟಿಂಗ್ ನಲ್ಲಿ ಒಂದು ಚಿನ್ನ,‌ ಒಂದು‌ ಬೆಳ್ಳಿ ಗೆದ್ದ ಭಾರತ

ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ ಶೂಟಿಂಗ್ ಪಿ4 ಮಿಕ್ಸೆಡ್ 50 ಮೀ ಪಿಸ್ತೂಲ್ ಎಸ್ ಎಚ್ 1 ನಲ್ಲಿ ಮನೀಶ್ ನರ್ವಾಲ್ ಚಿನ್ನ, ಸಿಂಗ್ ರಾಜ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಮಿಶ್ರ 50 ಮೀ ಪಿಸ್ತೂಲ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಮತ್ತು ಸಿಂಗ್ ರಾಜ್ ಅಡಾನಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ನರ್ವಾಲ್ ಪ್ಯಾರಾಲಿಂಪಿಕ್ ದಾಖಲೆಯನ್ನು 218.2 ಹೊಡೆದರೆ, ಸಿಂಗ್ ರಾಜ್ ಈ

ಪ್ಯಾರಾಲಂಪಿಕ್: ಶೂಟಿಂಗ್ ನಲ್ಲಿ ಒಂದು ಚಿನ್ನ,‌ ಒಂದು‌ ಬೆಳ್ಳಿ ಗೆದ್ದ ಭಾರತ Read More »

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ

ನವದೆಹಲಿ: ವಿಧಾನಸಭೆಯಿಂದ ಚಾಂದಿನಿ ಚೌಕದಲ್ಲಿರುವ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗವೊಂದು ದೆಹಲಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಸುರಂಗ ಮಾರ್ಗವು ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸುರಂಗವನ್ನು ಬಳಸುತ್ತಿದ್ದರು ಎಂದು ಮಾಹಿತಿ ಹಂಚಿಕೊಂಡರು. ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೆ. ಅದಲ್ಲದೆ ನಾನು ಅದರ ಇತಿಹಾಸವನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ Read More »

ಪುತ್ತೂರು:ವೀಕೆಂಡ್ ‌ಕರ್ಪ್ಯೂ ವಿರುದ್ದ ಸೆಟೆದು ನಿಂತರೆ ಕಠಿಣ ಕ್ರಮ – ಎಸಿ ಖಡಕ್ ಆದೇಶ

ಪುತ್ತೂರು: ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದ್ದು, ಈ ವೇಳೆ ಅಂಗಡಿ ಮುಂಗಟ್ಟು ತೆರೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮಿಷನರ್ ಅವರು ಉಪ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂನಿಂದ ವ್ಯಾಪಾರ ವ್ಯವಹಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವುದರಿಂದ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ಪುತ್ತೂರು ವರ್ತಕರ ಸಂಘ ಸೇರಿದಂತೆ ಹಲವು

ಪುತ್ತೂರು:ವೀಕೆಂಡ್ ‌ಕರ್ಪ್ಯೂ ವಿರುದ್ದ ಸೆಟೆದು ನಿಂತರೆ ಕಠಿಣ ಕ್ರಮ – ಎಸಿ ಖಡಕ್ ಆದೇಶ Read More »

ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ – ಸಚಿವರು ಭಾಗಿ

ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ಸೆ. 3ರ ಶುಕ್ರವಾರದಂದು ಅಳಿವೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ಸಚಿವರು ಈ ಸಂದರ್ಭದಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಾಂತ್ರಿಕತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನೀರು ಕುಡಿದು ಸಂಭ್ರಮಿಸಿದರು.

ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ – ಸಚಿವರು ಭಾಗಿ Read More »

ದ.ಕದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲು ಶಾಸಕ ಕಾಮತ್, ಸಚಿವ ಕೋಟರಿಂದ ಸಿಎಂಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾಗಿದೆ. ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವುದರಿಂದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ಸಹಕಾರಿಯಾಗಲಿದೆ. ಕೈಗಾರಿಕೋದ್ಯಮ, ವೃತ್ತಿಪರ ನೌಕರರು, ದಿನಕೂಲಿ ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಇನ್ನಿತರ ವರ್ಗದ ಜನರು ಕೆಲಸ

ದ.ಕದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲು ಶಾಸಕ ಕಾಮತ್, ಸಚಿವ ಕೋಟರಿಂದ ಸಿಎಂಗೆ ಮನವಿ Read More »

ಸುಳ್ಯ| ಮಕ್ಕಳೊಂದಿಗೆ ಯುವಕನ ಜೊತೆ ಮಹಿಳೆ ಪರಾರಿ

ಸುಳ್ಯ. ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಪರಿಚಿತ ಯುವಕನೊಬ್ಬನೊಂದಿಗೆ ಪರಾರಿಯಾಗಿರುವ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ. ಜಯನಗರದ ಕೊಯಿಂಗೋಡಿ ಸಮೀಪದ ವಿವಾಹಿತ ಮಹಿಳೆಯೋರ್ವಳು ಆಕೆಯ ಮನೆಗೆ ಆಗಾಗ ಬರುತ್ತಿದ್ದ ಪುತ್ತೂರು ಮೂಲದ ಪ್ರದೀಪ್ ಎಂಬ ಯುವಕನೊಂದಿಗೆ ತೆರಳಿರುವುದಾಗಿ ಹೇಳಲಾಗಿದೆ. ಈ ಕುರಿತಂತೆ ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ನಡುವೆ ನಾಪತ್ತೆಯಾಗಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದು, ಸಂಘದಿಂದ ಸುಮಾರು 1 ಲಕ್ಷ ರೂ.ಗಳಷ್ಟು ಸಾಲ ತೆಗೆದಿದ್ದು, ಆಕೆ ಪರಾರಿಯಾಗಿರುವ

ಸುಳ್ಯ| ಮಕ್ಕಳೊಂದಿಗೆ ಯುವಕನ ಜೊತೆ ಮಹಿಳೆ ಪರಾರಿ Read More »

ಮೊಬೈಲ್ ಕೊಡಿಸಲಿಲ್ಲವೆಂದು ತಂದೆಯನ್ನೇ ಕೊಂದ ಭೂಪ

ತಂದೆ ಮೊಬೈಲ್ ನೀಡಲಿಲ್ಲ ಎಂಬ ಕಾರಣಕ್ಕೆ ಮಗ, ತಂದೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ ಸಂಬಂಧಿಸಿದ ಆಘಾತಕಾರಿ ಘಟನೆ ನಡೆದಿದೆ. ಅರ್ಜುನ್ ಸರ್ಕಾರ್ ಎಂಬಾತ ತನ್ನ ಪತ್ನಿ ಹಾಗೂ ಮಗನ ಜೊತೆ ಇಚ್ಚಾಪೂರ್ ನಲ್ಲಿ ವಾಸವಾಗಿದ್ದ. ಕೆಲಸದ ಮೇಲೆ ಹೊರಗೆ ಹೋಗಿದ್ದ ಅರ್ಜುನ್ ಪತ್ನಿ ಡಾಲಿ, ಮನೆಗೆ ಬಂದಾಗ ಅರ್ಜುನ್ ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿದ್ದ ಎನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ವೈದ್ಯರು, ಅರ್ಜುನ್ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.

ಮೊಬೈಲ್ ಕೊಡಿಸಲಿಲ್ಲವೆಂದು ತಂದೆಯನ್ನೇ ಕೊಂದ ಭೂಪ Read More »

ಇಡಾ ಚಂಡಮಾರುತಕ್ಕೆ ಅಮೇರಿಕಾ ತತ್ತರ| 41 ಮಂದಿ ಬಲಿ

ಇಡಾ ಚಂಡಮಾರುತವು ಉಂಟು ಮಾಡಿದ ಪ್ರವಾಹ ಪರಿಸ್ಥಿತಿಯಲ್ಲಿ ನ್ಯೂಯಾರ್ಕ್​ನಲ್ಲಿ ರಾತ್ರೋರಾತ್ರಿ ಕನಿಷ್ಟ 41 ಮಂದಿಯನ್ನು ಬಲಿ ಪಡೆದಿದೆ. ಹ್ಯುರಿಕೇನ್​ ಇಡಾ ಚಂಡಮಾರುತದ ಬಳಿಕ ನ್ಯೂಯಾರ್ಕ್​ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯೂಯಾರ್ಕ್​ನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಿದೆ. ನ್ಯೂಯಾರ್ಕ್​ ನಗರದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು ಕಟ್ಟಡಗಳು, ಎಲೆಕ್ಟ್ರಿಕ್​ ಕಂಬಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ

ಇಡಾ ಚಂಡಮಾರುತಕ್ಕೆ ಅಮೇರಿಕಾ ತತ್ತರ| 41 ಮಂದಿ ಬಲಿ Read More »

ಬಂಟ್ವಾಳ : ಸ್ಕೂಟರ್,ಜೀಪ್ ಢಿಕ್ಕಿ- ಸವಾರ ಸಾವು

ಬಂಟ್ವಾಳ: ಜೀಪ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತ ಪಟ್ಟ ಘಟನೆ ನಾವೂರದಲ್ಲಿ ನಡೆದಿದೆ.ನಾವೂರ ನಿವಾಸಿ ಅಬ್ಬಾಸ್ (60) ಮೃತಪಟ್ಟ ವ್ಯಕ್ತಿ. ತಾಲೂಕಿನ ಮಣಿಹಳ್ಳ ಸಮೀಪದ ನಾವೂರ ಮಸೀದಿ ಎದುರಿನಲ್ಲಿ ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯವಾಗಿದ್ದ ಸ್ಕೂಟರ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ : ಸ್ಕೂಟರ್,ಜೀಪ್ ಢಿಕ್ಕಿ- ಸವಾರ ಸಾವು Read More »