September 2021

“ಸಿದ್ದರಾಮಯ್ಯ ಓರ್ವ ಭಯೋತ್ಪಾದಕ”- ಸಿದ್ದು ತಾಲಿಬಾನ್ ಹೇಳಿಕೆಗೆ ನಳಿನ್ ತಿರುಗೇಟು

ಮಂಗಳೂರು: ಆರೆಸ್ಸೆಸ್ ತಾಲಿಬಾನ್ ಇದ್ದಂತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಇದ್ದಂತೆ ಎಂದು ಪರೋಕ್ಷವಾಗಿ ಕರಾವಳಿಯಲ್ಲಿ ನಡೆದಿರುವ ಕೊಲೆಗಳನ್ನು ಉಲ್ಲೇಖಿಸಿ, ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯರೇ ಒಬ್ಬ ಭಯೋತ್ಪಾದಕ ಇದ್ದಂತೆ. ಕಾಂಗ್ರೆಸ್ ನಲ್ಲಿಯೇ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾಲಿಬಾನ್ ರೀತಿಯ ಸಂಸ್ಕೃತಿ ಅವರದ್ದೇ. ಕಳೆದ ಬಾರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು […]

“ಸಿದ್ದರಾಮಯ್ಯ ಓರ್ವ ಭಯೋತ್ಪಾದಕ”- ಸಿದ್ದು ತಾಲಿಬಾನ್ ಹೇಳಿಕೆಗೆ ನಳಿನ್ ತಿರುಗೇಟು Read More »

ಕಡಬ| ಸಂತ್ರಸ್ತೆಯ ಮೇಲೆ ಅತ್ಯಾಚಾರ ಪ್ರಕರಣ| ಆರೋಪಿ ಪೊಲೀಸ್ ಸಸ್ಪೆಂಡ್

ಕಡಬ: ಅತ್ಯಾಚಾರ ಆರೋಪ ಹೊತ್ತಿರುವ ಕಡಬ ಠಾಣಾ ಪೊಲೀಸ್‌ ಸಿಬಂದಿ ಶಿವರಾಜ್‌ ಬಂಧನಕ್ಕೆ ಒಳಗಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಶಿವರಾಜ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು. ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಗಂಭೀರತೆಯ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ಆಗಮಿಸಿರುವ ಐಜಿಪಿಯವರು ಆರೋಪಿ ಶಿವರಾಜ್‌ನನ್ನು ಹಾಗೂ ಆತನ ಜತೆ ಹೆಚ್ಚು ನಿಕಟವಾಗಿದ್ದ ಪೊಲೀಸ್‌ ಸಿಬಂದಿಯನ್ನೂ

ಕಡಬ| ಸಂತ್ರಸ್ತೆಯ ಮೇಲೆ ಅತ್ಯಾಚಾರ ಪ್ರಕರಣ| ಆರೋಪಿ ಪೊಲೀಸ್ ಸಸ್ಪೆಂಡ್ Read More »

ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ| ಕೇಸ್ ಹಾಕಲು‌ ನಿಂತು ಪೇಚಿಗೀಡಾದ ಮಂಗಳೂರು ಪೊಲೀಸ್

ಮಂಗಳೂರು: ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೋಮವಾರ ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ. ಎರಡು ದಿನದಲ್ಲಿ ಬರೋಬ್ಬರಿ ಏಳು ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಆದರೆ ದುರಂತ ಏನೆಂದರೆ ಸಿಕ್ಕಸಿಕ್ಕವರ ವಾಹನವನ್ನು ತಡೆದು ನಿಲ್ಲಿಸಿದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ‌. ನಟರಾಜ್‌ರವರ ಸರ್ಕಾರಿ ಕಾರಿನಲ್ಲೇ ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದಿರುವುದು ಪೊಲೀಸ್

ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ| ಕೇಸ್ ಹಾಕಲು‌ ನಿಂತು ಪೇಚಿಗೀಡಾದ ಮಂಗಳೂರು ಪೊಲೀಸ್ Read More »

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ

ಬಳ್ಪ: ಆದರ್ಶ ಗ್ರಾಮ ಬಳ್ಪದ ಎಡೋಣಿ-ಪಾದೆ ಬಳಿಯಲ್ಲಿ ಉದ್ಘಾಟನೆಗೊಂಡ ನೂತನ ಜಿಯೋ ಟವರ್‌ ಮೂಲಕ ಮೊಬೈಲ್ ಸಿಗ್ನಲ್‌ ಲಭ್ಯವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈಗ ನಿರಾಸೆಯಾಗಿದೆ. ಉದ್ಘಾಟನೆಗೊಂಡ ಜಿಯೋ ಟವರ್‌ ಮೂಲಕ ಬಳ್ಪ ಪೇಟೆಯಲ್ಲಿಯೇ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲ ಮಾತ್ರವಲ್ಲ ತೀರಾ ಗ್ರಾಮೀಣ ಪ್ರದೇಶ ಎಂದು ಗುರುತಿಸಲಾಗಿದ್ದ ಎಡೋಣಿ-ಪಾದೆ ಪರಿಸರಿಂದ ಸ್ವಲ್ಪ ದೂರದಲ್ಲಿಯೇ ಇರುವ ಮಲ್ಕಜೆ, ಏರಣಗುಡ್ಡೆ ಪ್ರದೇಶದಲ್ಲಿ ಸಿಗ್ನಲ್‌ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದಾರೆ. ಎಡೋಣಿಯಿಂದ ಸ್ವಲ್ಪ ದೂರವರೆಗೆ ಸಿಗ್ನಲ್‌ ಲಭ್ಯವಾಗುತ್ತದೆ, ಈ ಹಿಂದೆಯೇ

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ Read More »

ಅಂತರಾಷ್ಟ್ರೀಯ. ವಿಮಾನ ಹಾರಾಟ ನಿಷೇಧ ಅ.31 ವರೆಗೆ ಮುಂದೂಡಿಕೆ

ನವದೆಹಲಿ: ಭಾರತದಿಂದ ಹೊರಡುವ ಮತ್ತು ಬರುವ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಅಕ್ಟೋಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ತಿಳಿಸಿದ್ದಾರೆ. ಈ ವಿಸ್ತರಣೆಯು ಅಂತರರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಅನ್ವಯಿಸುವುದಿಲ್ಲ, ವಿಶೇಷವಾಗಿ DGCA ಅನುಮೋದಿಸಿದೆ. ಸಲಹೆಯ ಪ್ರಕಾರ, ಸಂದರ್ಭಕ್ಕೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರ ಆಯ್ದ ಮಾರ್ಗಗಳಲ್ಲಿ, ವಿನಾಯಿತಿಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು. ಕೊರೊನಾದಿಂದಾಗಿ 2020ರ ಮಾರ್ಚ್ 23 ರಿಂದ ಡಿಜಿಸಿಎ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ವಂದೇ

ಅಂತರಾಷ್ಟ್ರೀಯ. ವಿಮಾನ ಹಾರಾಟ ನಿಷೇಧ ಅ.31 ವರೆಗೆ ಮುಂದೂಡಿಕೆ Read More »

ಇದು ಹೃದಯಗಳ ವಿಷಯ| ನಿಮ್ಮ ಹೃದಯ ಜೋಪಾನ

ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೇನೆ ಜೀವನ. ಈ ಹೃದಯ ಎಲ್ಲಾ ಭಾವನೆಗಳಿಗೂ ಮೂಲ. ಆದ್ದರಿಂದಲೇ ಹೃದಯವಂತರು, ಹೃದಯಹೀನರು ಎಂಬ ಪದಗಳು ಹುಟ್ಟಿಕೊಂಡಿರೋದು. ಇನ್ನು ಹೃದಯಗಳ ಕೊಡು ಕೊಳ್ಳುವಿಕೆಯಂತು ಮತ್ತೊಂದು ಗಾಢ ಸಂಬಂಧ ಬೆಸೆಯಲು ಕಾರಣವಾಗಿವೆ. ಇಂಥ ಅಮೂಲ್ಯ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದೇ ಎಲ್ಲರು ಬಯಸೋದು. ಇಂಥ ಹೃದಯಕ್ಕೂ ಒಂದು ದಿನವಿದೆ ಎಂದು ನಿಮಗೆ ಗೊತ್ತೇ? ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಲು ವಿಶ್ವಮಟ್ಟದಲ್ಲಿ ನಡೆಯುವ ವಿಶ್ವ

ಇದು ಹೃದಯಗಳ ವಿಷಯ| ನಿಮ್ಮ ಹೃದಯ ಜೋಪಾನ Read More »

ಸೆಕ್ಸೀ ಸಾಂಪ್ರದಾಯಿಕ ಉಡುಗೆ ಧರಿಸಿದ ಬಾಲಿವುಡ್ ಬೆಡಗಿ| ನೋರಾ ಫತೇಹಿ ಡ್ರೆಸ್ ನೋಡಿ ನೆಟ್ಟಿಗರು ಕಿಡಿ

ಮುಂಬೈ: ಬಾಲಿವುಡ್‌ನ ಹಲವು ಹಿಟ್ ಹಾಡುಗಳಲ್ಲಿ ಬಳಕುವ ಬಳ್ಳಿಯಂತೆ ಸೊಂಟ ಬಳುಕಿಸಿರುವ ಚೆಲುವೆ ನೋರಾ ಫತೇಹಿ ಆಗಾಗ ಸ್ಟೈಲಿಶ್ ಉಡುಪುಗಳನ್ನು ತೊಟ್ಟು ಕ್ಯಾಮರಾ ಕಣ್ಣುಗಳ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಬೋಲ್ಡ್ ಔಟ್‌ಫಿಟ್ ತೊಟ್ಟು ಕ್ಯಾಮರಾ ಮುಂದೆ ಬಂದಿದ್ದ ನಟಿ ನೋರಾ ಫತೇಹಿಯನ್ನ ಕಂಡು ನೆಟ್ಟಿಗರು ಛೀಮಾರಿ ಹಾಕಿದ್ದರು. ಇದೀಗ ಮತ್ತೊಮ್ಮೆ ನಟಿ ನೋರಾ ಫತೇಹಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಎದೆಸೀಳು ಕಾಣುವ ಸಾಂಪ್ರದಾಯಿಕ ಉಡುಗೆಯನ್ನು ನಟಿ ನೋರಾ ಫತೇಹಿ ತೊಟ್ಟಿದ್ದಾರೆ. ಮೊನ್ನೆಮೊನ್ನೆಯಷ್ಟೇ ಫೋಟೋಶೂಟ್‌ವೊಂದರಲ್ಲಿ ನಟಿ ನೋರಾ

ಸೆಕ್ಸೀ ಸಾಂಪ್ರದಾಯಿಕ ಉಡುಗೆ ಧರಿಸಿದ ಬಾಲಿವುಡ್ ಬೆಡಗಿ| ನೋರಾ ಫತೇಹಿ ಡ್ರೆಸ್ ನೋಡಿ ನೆಟ್ಟಿಗರು ಕಿಡಿ Read More »

ದಟ್ಟ ಅರಣ್ಯದೊಳಗೆ ಸುಟ್ಟ ಕಾರು, ಜೊತೆಗೊಂದು ಮೃತದೇಹ| ತನಿಖೆ ಕೈಗೊಂಡ ಪೊಲೀಸರು|

ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಕಾರು ಸುಟ್ಟು ಹೋಗಿರುವ ಶಂಕೆ ಇದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿಯ ಸನಿಹದ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರು ಸುಟ್ಟು ಕರಕಲಾಗಿ ಪತ್ತೆಯಾಗಿದೆ. ಕಾರಿನೊಳಗೆ ಮೃತದೇಹ ಸಹ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ದಟ್ಟ ಅರಣ್ಯದೊಳಗೆ ಸುಟ್ಟ ಕಾರು, ಜೊತೆಗೊಂದು ಮೃತದೇಹ| ತನಿಖೆ ಕೈಗೊಂಡ ಪೊಲೀಸರು| Read More »

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳ್ತಂಗಡಿ : ದ. ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.28ರಂದು ನಡೆದಿದೆ. ಹುಣಸೆಕಟ್ಟೆ ನಿವಾಸಿ ಸಂಜೀವ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರಿಯಾದ ದೀಕ್ಷಿತ ಶೆಟ್ಟಿ(23.ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನನೊಂದು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಬಂಟ್ವಾಳ: ಟೀಂ ವೈಎಸ್ ಕೆ ವತಿಯಿಂದ ಆಯೋಜಿಸಲಾದ ‘ನಂದಕಿಶೋರ’ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯ ಬಹುಮಾನವನ್ನು ಸಂಘದ ಪದಾಧಿಕಾರಿಗಳು ವಿತರಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರಿನ ರಕ್ಷಣ್, ದ್ವಿತೀಯ ಬಹುಮಾನವನ್ನು ಮಂಗಳೂರಿನ ಬ್ರಹ್ಮೀ, ತೃತೀಯ ಬಹುಮಾನವನ್ನು ಮಂಗಳೂರಿನಲ್ಲಿ ನೆಲೆಸಿರುವ ಶೌರ್ಯ ಕೊಲ್ಯ‌ರವರಿಗೆ ವಿಜೇತರ ಮನೆಗಳಿಗೆ ಸಂಘದ ಸದಸ್ಯರು ತೆರಳಿ ವಿತರಿಸಿದರು

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ Read More »