September 2021

ಮಂಗಳೂರು: ಪತ್ನಿಯ ತಂಗಿಯ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ 10 ವರ್ಷ ಜೈಲು

ಮಂಗಳೂರು: ಪತ್ನಿಯ ತಂಗಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯವು (ಪೆÇಕ್ಸೋ) ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ನವೀನ್ (27) ಶಿಕ್ಷೆಗೊಳಗಾದ ಆರೋಪಿ. ಈತ ತನ್ನದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ 2019ರ ಜೂ.27ರಂದು ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರದ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಳು. ಅನಂತರ ಗರ್ಭಪಾತವಾಗಿತ್ತು. ಬೆಳ್ತಂಗಡಿಯ ಅಂದಿನ ಪೆÇ್ರಬೆಷನರಿ […]

ಮಂಗಳೂರು: ಪತ್ನಿಯ ತಂಗಿಯ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ 10 ವರ್ಷ ಜೈಲು Read More »

ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ? ಜಿಎಸ್ಟಿ ಮಂಡಳಿ ಜೊತೆ ‌ಚರ್ಚೆಗೆ‌ ನಿರ್ಧಾರ

ನವದೆಹಲಿ: ಪೆಟ್ರೋಲ್, ಡೀಸೆಲ್ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‍ಟಿ ಮಂಡಳಿ ಸೆ.17ರಂದು ನಡೆಯಲಿರುವ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದೆ. ಕಳೆದ ಜೂನ್ ತಿಂಗಳಿನಲ್ಲಿ ಕೇರಳ ಹೈಕೋರ್ಟ್ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲೆ ಪ್ರತ್ಯೇಕ ದರವನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜಿಎಸ್‍ಟಿ ಮಂಡಳಿಗೆ ಸೂಚಿಸಿತ್ತು. ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಎಸ್‍ಟಿ ಮಂಡಳಿಯ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ

ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ? ಜಿಎಸ್ಟಿ ಮಂಡಳಿ ಜೊತೆ ‌ಚರ್ಚೆಗೆ‌ ನಿರ್ಧಾರ Read More »

ಪುತ್ತೂರು: ದೇವಸ್ಥಾನ ತೆರವು, ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ – ಶರಣ್ ಪಂಪ್ ವೆಲ್

ಪುತ್ತೂರು: ಮೈಸೂರಿನಲ್ಲಿ ದೇವಸ್ಥಾನ ಧ್ವಂಸಗೊಳಿಸಿರುವುದು ರಾಜ್ಯ ಸರಕಾರದಲ್ಲಿರುವ ಕೆಲವು ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ ಎಂದು ಪುತ್ತೂರಿನಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ. ರಾಜ್ಯ ಸರಕಾರದಲ್ಲಿ ತಾಲೀಬಾನ್ ಪ್ರೇರಿತ ಅಧಿಕಾರಿಗಳಿಂದ ದೇವಸ್ಥಾನ ದ್ವಂಸಗೊಳಿಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರಕಾರ ತಕ್ಷಣವೇ ಅಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಮತ್ತೆ ಮರು ನಿರ್ಮಿಸಬೇಕು, ಇನ್ನು ತೆರವುಗೊಳಿಸಲು ಉದ್ಧೇಶಿಸಿರುವ ದೇವಸ್ಥಾನಗಳ ಪಟ್ಟಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಪುತ್ತೂರು: ದೇವಸ್ಥಾನ ತೆರವು, ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ – ಶರಣ್ ಪಂಪ್ ವೆಲ್ Read More »

ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ 6 ಉಗ್ರರ ಬಂಧನ|ಇಬ್ಬರು ಪಾಕಿಸ್ತಾನದವರು

ನವದೆಹಲಿ: ರಾಜ್ಯದ ವಿವಿಧ ಕಡೆ ಸರಣಿ ಸ್ಪೋಟಕ್ಕೆ ಸಂಚು ರೂಪಿಸಿದ್ದ 6 ಉಗ್ರರನ್ನು ಬಂಧಿಸಲಾಗಿದ್ದು ಇದರಲ್ಲಿ 2 ಮಂದಿ ಪಾಕಿಸ್ತಾನ ಮೂಲದ ಐಎಸ್‍ಐನಿಂದ ತರಬೇತಿ ಪಡೆದ ಉಗ್ರರಾಗಿದ್ದಾರೆ.ಬಂಧಿತ ಉಗ್ರರನ್ನು ಜಾನ್ ಮೊಹಮ್ಮದ್ ಶೇಖ್ ಅಲಿಯಾಸ್ ಸಮೀರ್(47), ಮೂಲ್‍ಚಂದ್(47), ಮೊಹಮ್ಮದ್ ಅಬುಬಕರ್(23) ಹಾಗೂ ಮೊಹಮ್ಮದ್ ಅಮಿರ್ ಜಾವೇದ್(31) ಹಾಗೇ ಪಾಕಿಸ್ತಾನ ಮೂಲದ ಒಸಾಮಾ(22), ಝೀಶನ್ ಖಮರ್(28), ಎಂದು ಗುರುತಿಸಲಾಗಿದೆ. ಇವರುಗಳು ಗಣೇಶ ಚತುರ್ಥಿ, ನವರಾತ್ರಿ ಹಾಗೂ ರಾಮಲೀಲಾ ಹಬ್ಬಗಳ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ 6 ಉಗ್ರರ ಬಂಧನ|ಇಬ್ಬರು ಪಾಕಿಸ್ತಾನದವರು Read More »

ಉಡುಪಿ: ಮನನೊಂದು ಆತ್ಮಹತ್ಯೆಗೆ ಶರಣಾದ ಬಿಜೆಪಿ ನಾಯಕಿ

ಉಡುಪಿ: ಮನನೊಂದ ಬಿಜೆಪಿ ಸ್ಥಳೀಯ ನಾಯಕಿಯೊಬ್ಬರು ತಮ್ಮ ವಾಸದ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕುಕ್ಕಿಕಟ್ಟೆಯಲ್ಲಿ ಇಂದು ನಡೆದಿದೆ. ಮೃತ ಮಹಿಳೆಯನ್ನು ಆಶಾ ಶೆಟ್ಟಿ (48) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಜಿಲ್ಲಾ ಮಹಿಳಾ ಮೊರ್ಚಾದ ಕಾರ್ಯಕಾರಿಣಿ ಸದಸ್ಯೆ, ಹಾಗೂ ತುಳು ಕೂಟ, ಭಜನಾ ಮಂಡಳಿ, ಚಂಡೆ ಬಳಗ ಇವುಗಳಲ್ಲಿ ಸಕ್ರಿಯರಾಗಿದ್ದರೆಂದು ತಿಳಿದುಬಂದಿದೆ. ಮೃತರ ಬಳಿ ಮರಣಪತ್ರ ಲಭ್ಯವಾಗಿದ್ದು, ಪತ್ರದಲ್ಲಿ ನೇತ್ರದಾನ ಮಾಡುವಂತೆ ಹಾಗೂ ಇನ್ನಿತರ ವಿಷಯಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.ಹೀಗಾಗಿ ಶವವನ್ನು ಮಣಿಪಾಲ

ಉಡುಪಿ: ಮನನೊಂದು ಆತ್ಮಹತ್ಯೆಗೆ ಶರಣಾದ ಬಿಜೆಪಿ ನಾಯಕಿ Read More »

ಇಂಜಿನಿಯರ್ ಪದಕ್ಕೆ ಬೇರೆಯದ್ದೇ‌ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ‌ ಶಿಲ್ಪಿ

ಸೆ.15 ಇಂಜಿನಿಯರ್ಸ್ ಡೇ, ಕರ್ನಾಟಕದ ಮೊದಲ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಪ್ರಯುಕ್ತ ಎಲ್ಲೆಡೆ ಇಂಜಿನಿಯರ್ ದಿನವೆಂದು ಆಚರಿಸಲಾಗುತ್ತದೆ. ‘ಭಾರತ ರತ್ನ’ ಮತ್ತು ‘ಸರ್’ ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ.ಸರ್ ಎಂ ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಆಗಿ ಉಳಿದಿರಲಿಲ್ಲ. ಅವರೊಬ್ಬ ಮಹಾನ್ ಮೇಧಾವಿ ಮತ್ತು ಉತ್ತಮ ಆಡಳಿತಗಾರರು. ಯಾವುದೇ ಕೆಲಸವಾಗಲಿ ಅದನ್ನು ಹೇಗೆ ಮಾಡಬೇಕು ಮತ್ತು ಹೇಗೆ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಆ ಕಾರಣದಿಂದಲೇ ಅವರು ಅಷ್ಟೆಲ್ಲ ಸಾಧನೆ ಮಾಡಲು

ಇಂಜಿನಿಯರ್ ಪದಕ್ಕೆ ಬೇರೆಯದ್ದೇ‌ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ‌ ಶಿಲ್ಪಿ Read More »

7 ಕೋಟಿ‌ ಮೌಲ್ಯದ ಅಕ್ರಮ ಅಡಿಕೆ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಬೆಳಗಾವಿ: ಜಿಎಸ್‌ಟಿ ಪಾವತಿಸಿದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಂದಾಜು ₹ 7 ಕೋಟಿ ಮೌಲ್ಯದ ಅಡಿಕೆಯನ್ನು 7 ಲಾರಿಗಳ ಸಮೇತ ವಶ‍ಪಡಿಸಿಕೊಳ್ಳಲಾಗಿದೆ. ಡಿಜಿಜಿಐ (ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ) ಮಂಗಳೂರು ವಲಯ ಘಟಕದಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಕೇಂದ್ರ ಜಿಎಸ್‌ಟಿ ವಿಭಾಗದ ಅಧಿಕಾರಿಗಳ ತಂಡವು ವಾಹನಗಳನ್ನು ಹುಬ್ಬಳ್ಳಿ-ನವಲಗುಂದ ರಸ್ತೆಯಲ್ಲಿ ತಡೆದು ಪರಿಶೀಲನೆ ನಡೆಸಿದೆ. ಸಮರ್ಪಕ ಜಿಎಸ್‌ಟಿ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ಸಾಗಿಸುತ್ತಿದ್ದುದ್ದನ್ನು ಪತ್ತೆ ಹಚ್ಚಲಾಗಿದೆ. ‘ಅಡಿಕೆ ಸಾಗಣೆಯಲ್ಲಿ ತೆರಿಗೆ ವಂಚಿಸುವವರ ಮೇಲೆ ನಿಗಾ ವಹಿಸಲಾಗಿದೆ. ಸರ್ಕಾರಕ್ಕೆ

7 ಕೋಟಿ‌ ಮೌಲ್ಯದ ಅಕ್ರಮ ಅಡಿಕೆ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು Read More »

ಭೀಕರ ಅಪಘಾತ| ಪ್ಲೈ ಓವರ್ ನಿಂದ ಬಿದ್ದು ಯುವತಿಯರಿಬ್ಬರ ದಾರುಣ ಸಾವು

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿಂದ ಬಿದ್ದು ಯುವತಿಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಕಾರು ಫ್ಲೈ ಓವರ್ ಗೆ ಡಿಕ್ಕಿ ಹೊಡೆದು ತುತ್ತ ತುದಿಯಲ್ಲಿ ನಿಂತಿದೆ, ಆದರೆ ಪರಿಣಾಮ ಯುವತಿಯರಿಬ್ಬರು ಫ್ಲೈ ಓವರ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿಂದ

ಭೀಕರ ಅಪಘಾತ| ಪ್ಲೈ ಓವರ್ ನಿಂದ ಬಿದ್ದು ಯುವತಿಯರಿಬ್ಬರ ದಾರುಣ ಸಾವು Read More »

ದ.ಕ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ರೆಡಿ ಮಾಡಿದ ಜಿಲ್ಲಾಡಳಿತ| ಲಿಸ್ಟ್ ನಲ್ಲಿವೆ ಬರೋಬ್ಬರಿ 902 ಶ್ರದ್ಧಾ ಕೇಂದ್ರಗಳು

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಆಡಳಿತ ಮುಂದಾಗಿದ್ದು, ಪ್ರತೀ ಜಿಲ್ಲೆಗಳಲ್ಲೂ ಜಿಲ್ಲಾಡಳಿತಗಳು ಪಟ್ಟಿ ರೆಡಿಮಾಡಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿ ತಯಾರಿಸಿದ್ದು ಪಟ್ಟಿಯಲ್ಲಿ 902 ಶ್ರದ್ಧಾ ಕೇಂದ್ರಗಳಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ ಒಟ್ಟು 902 ಅನಧಿಕೃತ ಕಟ್ಟಡಗಳಿದ್ದು, ಇದರಲ್ಲಿ ದೇವಸ್ಥಾನಗಳದ್ದೇ ಅಗ್ರಪಾಲಾಗಿದೆ. ಈ ಪಟ್ಟಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ನಗರದ ಶಕ್ತಿನಗರದ ಶ್ರೀವೈದ್ಯನಾಥ ದೇವಸ್ಥಾನವೂ

ದ.ಕ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ರೆಡಿ ಮಾಡಿದ ಜಿಲ್ಲಾಡಳಿತ| ಲಿಸ್ಟ್ ನಲ್ಲಿವೆ ಬರೋಬ್ಬರಿ 902 ಶ್ರದ್ಧಾ ಕೇಂದ್ರಗಳು Read More »

ಸಂಸದ ಪ್ರತಾಪ್ ಸಿಂಹ ವಿರುದ್ದ ಡಿಸಿ ಗೆ ದೂರು ನೀಡಿದ ಕಾಂಗ್ರೆಸ್

ಮೈಸೂರು: ಸಂಸದ ಪ್ರತಾಪ ಸಿಂಹ ಅವರು ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೋಮುಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಈ ಸಂಬಂಧ ಪಕ್ಷದ ಮುಖಂಡರ ನಿಯೋಗವು ಮಂಗಳವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ನಂತರ, ಮನವಿ ಪತ್ರ ಸಲ್ಲಿಸಿತು. ‘ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಹಾಗೂ ಇರ್ವಿನ್ ರಸ್ತೆಯಲ್ಲಿರುವ ಮಸೀದಿಯನ್ನು ಒಡೆದು ಹಾಕಬೇಕು ಎಂದು

ಸಂಸದ ಪ್ರತಾಪ್ ಸಿಂಹ ವಿರುದ್ದ ಡಿಸಿ ಗೆ ದೂರು ನೀಡಿದ ಕಾಂಗ್ರೆಸ್ Read More »