September 2021

ಬೆಂಗಳೂರು: ಮತ್ತೊಂದು ಭೀಕರ ಅಪಘಾತ| ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಹೊಸೂರು ರಸ್ತೆ ಅತ್ತಿಬೇಲಿ ಸಮೀಪದ ನೆರಳೂರು ಬಳಿ ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಅಂಬ್ಯುಲೆನ್ಸ್ ಹೊಸೂರಿಗೆ ಹೋಗುತ್ತಿದ್ದ ವೇಳೆ ಎದುರಿಗೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […]

ಬೆಂಗಳೂರು: ಮತ್ತೊಂದು ಭೀಕರ ಅಪಘಾತ| ಮೂವರು ಸ್ಥಳದಲ್ಲೇ ಸಾವು Read More »

‘ಮೋದಿ ಕೊಟ್ಟಿರೋ 5.5 ಲಕ್ಷ ಹಣವದು, ನಾನು ವಾಪಾಸ್ ಕೊಡಲ್ಲ’- ಹಠ ಹಿಡಿದು ಕುಳಿತುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಯಾಕೆ ಗೊತ್ತಾ?

ಪಾಟ್ನಾ: ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬ ಬ್ಯಾಂಕ್ ದೋಷದಿಂದ ತನ್ನ ಖಾತೆಗೆ ಜಮೆಯಾದ ₹5.5 ಲಕ್ಷ ಹಣವನ್ನು ಹಿಂದಿರುಗಿಸದೆ ‘ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ’ ಎಂದು ಪಟ್ಟು ಹಿಡಿದಿದ್ದಾನೆ. ಖಗರಿಯಾದ ಗ್ರಾಮೀಣ ಬ್ಯಾಂಕ್‌ನಿಂದ ಹಣವನ್ನು ಮಾನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್‌ಪುರ್ ಗ್ರಾಮದ ರಂಜಿತ್ ದಾಸ್‌ ಎಂಬವರಿಗೆ ತಪ್ಪಾಗಿ ವರ್ಗಾವಣೆ ಮಾಡಲಾಗಿದೆ. ಹಲವು ನೋಟಿಸ್‌ಗಳ ಹೊರತಾಗಿಯೂ ಹಣವನ್ನು ಹಿಂದಿರುಗಿಸದ ದಾಸ್, ಹಣವನ್ನು ಖರ್ಚು ಮಾಡಿದ್ದೇನೆ ಎಂದು ಹೇಳುತ್ತಿದ್ದಾನೆ. ‘ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ

‘ಮೋದಿ ಕೊಟ್ಟಿರೋ 5.5 ಲಕ್ಷ ಹಣವದು, ನಾನು ವಾಪಾಸ್ ಕೊಡಲ್ಲ’- ಹಠ ಹಿಡಿದು ಕುಳಿತುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಯಾಕೆ ಗೊತ್ತಾ? Read More »

ಮೋದಿ‌ ಮತ್ತು ದೀದಿ‌ ಗೆ ವಿಶ್ವದ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ

ನವದೆಹಲಿ: ಜಗತ್ತಿನ ಪ್ರಭಾವಿ ನಾಯಕರ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ಭಾರತದ ಮೂವರು ಪ್ರಮುಖ ಸ್ಖಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದರ್ ಪೂನಾವಾಲಾ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಸಿಎನ್‌ಎನ್ ಪತ್ರಕರ್ತ ಫರೀದ್ ಜಕಾರಿಯಾ ಬರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಕ್ತಿಚಿತ್ರದ ಪ್ರಕಾರ, ಸ್ವಾತಂತ್ರ್ಯದ ನಂತರ ಭಾರತದ ಮೂವರು ಪ್ರಮುಖ ನಾಯಕರು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಜವಾಹರಲಾಲ್ ನೆಹರು,

ಮೋದಿ‌ ಮತ್ತು ದೀದಿ‌ ಗೆ ವಿಶ್ವದ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ Read More »

ಅಪ್ರಾಪ್ತೆಯ ತಲೆಕೆಡಿಸಿ‌ ಲೈಂಗಿಕ ದೌರ್ಜನ್ಯ| ಮೂವರು ಆರೋಪಿಗಳ ಜೊತೆ ಓರ್ವ ಅಪ್ರಾಪ್ತನೂ ಅಂದರ್.

ಕೊಟ್ಟಾಯಂ: ಅಪ್ರಾಪ್ತ ಹುಡುಗಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಭೇಟಿಯಾದ ಯುವಕರು ಕಿರುಕುಳ ನೀಡಿ ಲೈಂಗಿಕ ದೌರ್ಜನ್ಯ ‌ಎಸಗಿರುವ ಪ್ರಕರಣ ಜಿಲ್ಲೆಯ ರಾಮಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ. ಪ್ರಕರಣದ ಕುರಿತಂತೆ ದೂರು ದಾಖಲಾಗಿದ್ದು ಒಬ್ಬ ಅಪ್ರಾಪ್ತ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ‌ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಹುಡುಗಿಯನ್ನು ಮನೆಗೆ ಕರೆಸಿಕೊಂಡ ಯುವಕ, ತನ್ನ ಸ್ನೇಹಿತರ ಜತೆಗೂಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಕಾನೂನಿನ ಅಡಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ

ಅಪ್ರಾಪ್ತೆಯ ತಲೆಕೆಡಿಸಿ‌ ಲೈಂಗಿಕ ದೌರ್ಜನ್ಯ| ಮೂವರು ಆರೋಪಿಗಳ ಜೊತೆ ಓರ್ವ ಅಪ್ರಾಪ್ತನೂ ಅಂದರ್. Read More »

ಅಬ್ಬಾ…! ನಿಫಾ ನೆಗೆಟಿವ್, ನಿಟ್ಟುಸಿರು ಬಿಟ್ಟ ಕರಾವಳಿ

ಮಂಗಳೂರು: ನಿಫಾ ಸೋಂಕಿನ ಭಯದಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್‌ ಬಂದಿದ್ದು ಈ ಹಿನ್ನಲೆಯಲ್ಲಿ ಕರಾವಳಿ ನಿಟ್ಟುಸಿರು ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಈ ಮಾಹಿತಿ ನೀಡಿದ್ದು ಮಂಗಳೂರು ಮತ್ತು ರಾಜ್ಯದ ಜನತೆ ಸದ್ಯಕ್ಕೆ ನಿಫಾ ಆತಂಕದಿಂದ ನಿರಾಳರಾಗಿದ್ದಾರೆ. ಕಾರವಾರ ಮೂಲದ ಈ ವ್ಯಕ್ತಿ ಗೋವಾದ ನಿಫಾ ಟೆಸ್ಟ್ ಕಿಟ್​​ ಲ್ಯಾಬ್​ನಲ್ಲಿ ಕೆಲಸ ಮಾಡ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದ ಇವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿಫಾ ತಗುಲಿರಬಹುದು ಅಂತ ಆತಂಕಗೊಂಡು

ಅಬ್ಬಾ…! ನಿಫಾ ನೆಗೆಟಿವ್, ನಿಟ್ಟುಸಿರು ಬಿಟ್ಟ ಕರಾವಳಿ Read More »

ಮಂಗಳೂರು: ‘ ಇಂಡಿಯಾ ಡಿಟೆಕ್ಟಿವ್ಸ್ ‘ವೆಬ್ ಸರಣಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್…!

ಮಂಗಳೂರು: ವಿಶ್ವದ ಒಟಿಟಿ ದೈತ್ಯ ಕಂಪನಿ ನೆಟ್​ಫ್ಲಿಕ್ಸ್ ಹಲವಾರು ಡಾಕ್ಯುಮೆಂಟರಿ ಹಾಗೂ ವೆಬ್​ ಸಿರೀಸ್ ಗಳನ್ನು ಹೊರತರುತ್ತಿದೆ. ಇದೀಗ ಹೊಸ ವೆಬ್ ಸರಣಿಯ ಮುಖಾಂತರ ಕ್ರೈಂ ಲೋಕದ ನೈಜ ಕಥೆಯನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದೆ. ಕರ್ನಾಟಕದಲ್ಲಿ ನಡೆದ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್, ಇಂಡಿಯಾ ಡಿಟೆಕ್ಟಿವ್ಸ್’ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ಕ್ಕೆ ಬಿಡುಗಡೆಗೊಳ್ಳಲಿದ್ದು, ನೆಟ್​ಫ್ಲಿಕ್ಸ್​ನಲ್ಲಿ ತನ್ನ ಬಳಕೆದಾರರಿಗೆ ವೀಕ್ಷಿಸಲು ಲಭ್ಯವಾಗಲಿದೆ. ಲಂಡನ್ ಮೂಲದ ನೆಟ್‌ಫ್ಲಿಕ್ಸ್

ಮಂಗಳೂರು: ‘ ಇಂಡಿಯಾ ಡಿಟೆಕ್ಟಿವ್ಸ್ ‘ವೆಬ್ ಸರಣಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್…! Read More »

ಬಸ್-ವ್ಯಾಗನರ್ ಮುಖಾಮುಖಿ ಢಿಕ್ಕಿ| ಹೊತ್ತಿ ಉರಿದ‌ ಕಾರು, ಐವರು‌ ದುರ್ಮರಣ

ಜಾರ್ಖಂಡ್: ಬಸ್​ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಈ ಅವಘಡದಲ್ಲಿ ಐವರು ಸಾವನ್ನಪ್ಪಿದ ದಾರುಣ ಘಟನೆ ಜಾರ್ಖಂಡ್​ನ ರಾಮಗರ್ ಜಿಲ್ಲೆಯಲ್ಲಿ ಸಂಭವಿಸಿದೆ. ರಾಜರಪ್ಪ ಪೊಲೀಸ್​ ಠಾಣೆಯ ವ್ಯಾಪಿಯ ಮರಬಂದ ಎಂಬಲ್ಲಿ ಈ ದುರಂತ ವರದಿಯಾಗಿದೆ. ಅಪಘಾತದಲ್ಲಿ ಬಸ್​​ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.ರಾಮಘರ್​ – ಗೋಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್​ ಹಾಗೂ ವಾಗನಾರ್​ ಕಾರು ಬೆಳಗ್ಗೆ 8 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ

ಬಸ್-ವ್ಯಾಗನರ್ ಮುಖಾಮುಖಿ ಢಿಕ್ಕಿ| ಹೊತ್ತಿ ಉರಿದ‌ ಕಾರು, ಐವರು‌ ದುರ್ಮರಣ Read More »

ಪಟಾಕಿ ಸಿಡಿಸುವುದಕ್ಕೆ ನಿಷೇದ ಹೇರುತ್ತೇವೆ, ಮಾರಾಟಗಾರರು ನಷ್ಟ ಮಾಡ್ಕೋಬೇಡಿ – ಕೇಜ್ರಿವಾಲ್

ನವದೆಹಲಿ: ಈ ಬಾರಿ ದೀಪಾವಳಿಗೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ದೆಹಲಿಯಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು. ಆದ್ದರಿಂದ ಈ ಬಾರಿ ಯಾರೂ ಸ್ಟಾಕ್ ತಂದು ನಷ್ಟ ಮಾಡಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಿಂದ ದೀಪಾವಳಿ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ನಿರ್ಧಾರದಿಂದ ಜನರ ಜೀವ ಉಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ವರ್ಷ ವ್ಯಾಪಾರಿಗಳು

ಪಟಾಕಿ ಸಿಡಿಸುವುದಕ್ಕೆ ನಿಷೇದ ಹೇರುತ್ತೇವೆ, ಮಾರಾಟಗಾರರು ನಷ್ಟ ಮಾಡ್ಕೋಬೇಡಿ – ಕೇಜ್ರಿವಾಲ್ Read More »

ಟೂತ್ ಪೇಸ್ಟ್ ಎಂದು ಇಲಿಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ| ಆಮೇಲೇನಾಯ್ತು?

ಟೂತ್​ ಪೇಸ್ಟ್​​ ಎಂದು ತಪ್ಪಾಗಿ ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. 18 ವರ್ಷದ ಅಫ್ಸಾನಾ ಖಾನ್​ ಎಂಬ ಯುವತಿ ಮೃತ ದುರ್ದೈವಿ. ಮುಂಬೈನ ಧಾರವಿ ಪ್ರದೇಶದಲ್ಲಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಈಕೆ ಬೆಳಗ್ಗೆ ಟೂತ್​ ಪೇಸಟ್​ ಎಂದು ಇಲಿ ಪಾಷಾಣವನ್ನು ಹಲ್ಲುಜ್ಜಲು ಬಳಸಿದ ಪರಿಣಾಮ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಎದ್ದ ಅಫ್ಸಾನಾ ಖಾನ್​, ಹಲ್ಲುಜ್ಜಲು ತೆರಳಿದ್ದಾಳೆ. ಈ ವೇಳೆ ಕೈಗೆ ಸಿಕ್ಕ ಇಲಿ ಪಾಷಾಣವನ್ನು ಟೂತ್​ ಪೇಸ್ಟ್​​ ಎಂದು ಭಾವಿಸಿ ಟೂತ್​

ಟೂತ್ ಪೇಸ್ಟ್ ಎಂದು ಇಲಿಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ| ಆಮೇಲೇನಾಯ್ತು? Read More »

ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ…

ಸೆಕ್ಸ್ ಕೇವಲ ಆನಂದವಲ್ಲ. ಲೈಂಗಿಕ ಕ್ರಿಯೆ ಒಂದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಲೈಂಗಿಕತೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ನೀವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ನಿಮಗೆ ಆಗಬಹುದು ಎಂದು ತಿಳಿದಿದೆಯೇ ..? ಮನುಷ್ಯ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ಆಗಾಗ ಭಾಗಿಯಾಗಬೇಕು ಎನ್ನುತ್ತದೆ ವಿಜ್ಞಾನ, ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಆ ಪರಿಣಾಮಗಳು ಯಾವುದು? ತಿಳಿದುಕೊಳ್ಳಿ. ಶಕ್ತಿ

ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ… Read More »