September 2021

ಬೆಂಗಳೂರಿನಲ್ಲಿ ತಡರಾತ್ರಿ ನಡೆಯಿತು ಅರೆನಗ್ನ ರೇವ್ ಪಾರ್ಟಿ| ಡ್ರಗ್ಸ್ ನಶೆಯಲ್ಲಿದ್ದ ಹಲವರು ಪೊಲೀಸ್ ವಶಕ್ಕೆ|

ಬೆಂಗಳೂರು: ಆನೇಕಲ್ ಸಮೀಪ ಮಧ್ಯರಾತ್ರಿ ರೇವ್ ಪಾರ್ಟಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಡ್ರಗ್ಸ್ ನಶೆಯಲ್ಲಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆನೇಕಲ್ ಸಮೀಪದ […]

ಬೆಂಗಳೂರಿನಲ್ಲಿ ತಡರಾತ್ರಿ ನಡೆಯಿತು ಅರೆನಗ್ನ ರೇವ್ ಪಾರ್ಟಿ| ಡ್ರಗ್ಸ್ ನಶೆಯಲ್ಲಿದ್ದ ಹಲವರು ಪೊಲೀಸ್ ವಶಕ್ಕೆ| Read More »

ಕರಾವಳಿಯಲ್ಲಿ ‘ಬುತ್ತಿಯೊಳಗೆ ಸಾವು!’ ಉಗ್ರರಿಂದ ವಿಧ್ವಂಸಕ ಕೃತ್ಯಕ್ಕೆ ‌ಸಂಚು| ಭಯಾನಕ ಮಾಹಿತಿ ಹೊರಹಾಕಿದ ಗುಪ್ತಚರ ಇಲಾಖೆ

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಭಯಾನಕ ಮಾಹಿತಿಯನ್ನು ಹೊರಹಾಕಿದೆ. ಹಬ್ಬದ ಸಂದರ್ಭದಲ್ಲಿ ಕರಾವಳಿಯಲ್ಲಿ ಜಾಸ್ತಿ ಜನಸಂದಣಿ ಸೇರುವ ಜಾಗದಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಎಸಗುವ ಬಗ್ಗೆ ಯೋಜನೆ ಹಾಕಿರುವ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತುರಾಯ ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಸಂಶಯಾಸ್ಪದ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ಕೂಡ

ಕರಾವಳಿಯಲ್ಲಿ ‘ಬುತ್ತಿಯೊಳಗೆ ಸಾವು!’ ಉಗ್ರರಿಂದ ವಿಧ್ವಂಸಕ ಕೃತ್ಯಕ್ಕೆ ‌ಸಂಚು| ಭಯಾನಕ ಮಾಹಿತಿ ಹೊರಹಾಕಿದ ಗುಪ್ತಚರ ಇಲಾಖೆ Read More »

ದ.ಕ‌‌ ಗಡಿಭಾಗದ ಮದ್ಯದಂಗಡಿಗಳಲ್ಲಿ ಮದ್ಯ‌ ಮಾರಾಟಕ್ಕೆ ಷರತ್ತುಬದ್ಧ ಅನುಮತಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿನ 19 ಗ್ರಾಮಗಳ ಮದ್ಯದಂಗಡಿಗಳಿಗೆ ಇದೇ ಸೆ.21ರಿಂದ ಮುಂದಿನ ಆದೇಶದವರೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರಗೆ ಕೆಲವು ಷರತ್ತುಗಳನ್ನು ಕಡ್ಡಾಯ ವಾಗಿ ಪಾಲಿಸಿ ವ್ಯವಹಾರ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಮದ್ಯ ಮಾರಾಟ ಮಳಿಗೆಯಲ್ಲಿನ ನೌಕರರು ಹಾಗೂ ಮದ್ಯಖರೀದಿಗೆ ಬರುವ ಗ್ರಾಹಕರುಗಳು ಕಡ್ಡಾಯವಾಗಿ ಮಾಸ್ಕ್

ದ.ಕ‌‌ ಗಡಿಭಾಗದ ಮದ್ಯದಂಗಡಿಗಳಲ್ಲಿ ಮದ್ಯ‌ ಮಾರಾಟಕ್ಕೆ ಷರತ್ತುಬದ್ಧ ಅನುಮತಿ Read More »

ಗದಗ| ಗೂಡ್ಸ್ ಲಾರಿಗೆ ಬೈಕ್ ಢಿಕ್ಕಿ| ಮೂವರು ಸ್ಪಾಟೌಟ್|

ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಭೀಕರ ಘಟನೆ ಗದಗ ಜಿಲ್ಲೆಯಲ್ಲಿ ಸಂಭವಿಸಿದೆ. ಬಾಗೇವಾಡಿ ಸಮೀಪದ ಕಣವಿ ದುರ್ಗಮ್ಮ ದೇವಸ್ಥಾನದ ಸಮೀಪ ಸಂಭವಿಸಿದ ದುರ್ಘಟನೆಯಲ್ಲಿ ಕನಕವಾಡ ಗ್ರಾಮದ ನಿವಾಸಿಗಳಾದ ಅಣ್ಣ, ತಂಗಿ ಹಾಗೂ ಪುಟ್ಟ ಮಗು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಮುಂಡರಗಿ ಪಟ್ಟಣದತ್ತ ಮೂವರು ತೆರಳುತ್ತಿದ್ದಾಗ ಮುಂಡರಗಿ ಪಟ್ಟಣದಿಂದ ಶಿರಹಟ್ಟಿ ಪಟ್ಟಣದತ್ತ ಅತೀ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ಹೊಡೆತಕ್ಕೆ ಬೈಕ್ ಸವಾರನ ದೇಹ ಛಿದ್ರಗೊಂಡಿದ್ದು,

ಗದಗ| ಗೂಡ್ಸ್ ಲಾರಿಗೆ ಬೈಕ್ ಢಿಕ್ಕಿ| ಮೂವರು ಸ್ಪಾಟೌಟ್| Read More »

ಮಾದ್ಯಮಗಳ ಮುಂದೆ ಬಿಲ್ಡಪ್ ಬೇಡ, ವೈಯಕ್ತಿಕ ಪ್ರದರ್ಶನ ಬದಿಗಿರಿಸಿ| ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ‌ ಸಿಎಂ

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಅನಧಿಕೃತ ಹೇಳಿಕೆಗಳನ್ನ ನೀಡದಂತೆ ಮತ್ತು ಸರ್ಕಾರಿ ಕಾರ್ಯಕ್ರಮಗಳು ವೈಯಕ್ತಿಕ ಪ್ರದರ್ಶನಗಳಂತೆ ತೋರ್ಪಡಿಸಿಕೊಳ್ಳಬಾರದು ಎಂದು ಹೇಳಿದೆ. ಸರ್ಕಾರಿ ಅಧಿಕಾರಿಗಳು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ/ಪತ್ರಿಕಾ ಪ್ರಕಟಣೆ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಹಾಗೆಯೇ, ಸಾಮಾಜಿಕ ಮಾಧ್ಯಮಗಳ ಮೂಲಕ ಇಲಾಖೆಯ/ಸರ್ಕಾರದ ಸಾಧನೆಗಳನ್ನು, ವೈಯಕ್ತಿಕ ಸಾಧನೆಗಳೆಂಬಂತೆ ಪ್ರದರ್ಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕಾದ

ಮಾದ್ಯಮಗಳ ಮುಂದೆ ಬಿಲ್ಡಪ್ ಬೇಡ, ವೈಯಕ್ತಿಕ ಪ್ರದರ್ಶನ ಬದಿಗಿರಿಸಿ| ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ‌ ಸಿಎಂ Read More »

ಬಂಟ್ವಾಳ| ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಕರಿಮಣಿ‌ ಸರ ಎಗರಿಸಿದ ಸುಲಿಗೆಕೋರರ ಬಂಧನ|

ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕರಿಮಣಿ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ. ಮಹಿಳೆ ವತ್ಸಲಾ ಎಂಬವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ವಲತ್ತಡ್ಕ ರೋಹಿತ್, ಕುಂಜಿರ್ ಪಂಜದ ದೇವಸ್ಯ ನಿವಾಸಿ ಲೋಹಿತ್ ಪಿ.ಆರ್.

ಬಂಟ್ವಾಳ| ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಕರಿಮಣಿ‌ ಸರ ಎಗರಿಸಿದ ಸುಲಿಗೆಕೋರರ ಬಂಧನ| Read More »

ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ

ಬೆಂಗಳೂರು: ಕನ್ನಡ ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ವೈಜಯಂತಿ ಅಡಿಗ ಪ್ರಿಯಕರ ಸೂರಜ್ ಜೊತೆ ಆನ್‍ಲೈನ್‍ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದೆ . ಬಿಗ್‍ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದರು. ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಅಡಿಗ ಒಂದೇ ದಿನ ಮನೆಗೆ ಎಂಟ್ರಿ ಪಡೆದಿದ್ದರು. ಆದರೆ ವೈಜಯಂತಿಗೆ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚು

ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸೆ.19 ರಿಂದ ಸೆ.25ರ ವರೆಗಿನ ಮೇಷಾಧಿ ದ್ವಾದಶ ರಾಶಿಗಳ ವಾರಭವಿಷ್ಯ ಇಲ್ಲಿದೆ, ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಭೂ ವ್ಯವಹಾರದಲ್ಲಿ ಹೆಚ್ಚು ಶ್ರಮ ವಹಿಸಿದರೂ ಲಾಭ ಕಡಿಮೆ ಇರುತ್ತದೆ. ಕೊಟ್ಟ ಸಾಲದಲ್ಲಿ ಸ್ವಲ್ಪ ಭಾಗ ವಾಪಸ್ಸು ಬರುತ್ತದೆ. ವಿದೇಶಿ ಹಣ ಬದಲಾವಣೆಯನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ರಾಜಕೀಯ ರಂಗದಲ್ಲಿರುವ ಕೆಲವರಿಗೆ ಸೂಕ್ತ ಸ್ಥಾನಮಾನ ಹತ್ತಿರದಲ್ಲೇ ದೊರೆಯುವ ಸಾಧ್ಯತೆ ಇದೆ. ಮನೆಯ ಜವಾಬ್ದಾರಿಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡವೇ ಬೇಡ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆರ್ಥಿಕ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸಿಎಂ ಗೆ ಕೊಲೆ ಬೆದರಿಕೆ| ಹಿಂದೂ ಮಹಾಸಭಾ ಮುಖಂಡರ ವಿರುದ್ದ ಕೇಸ್|

ಮಂಗಳೂರು: ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ಡಾ. ಲೋಹಿತ್ ಕುಮಾರ್ ಸುವರ್ಣ ಕೇಸು ದಾಖಲಿಸಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ”ನಾವು ಗಾಂಧೀಜಿಯನ್ನೆ ಬಿಟ್ಟಿಲ್ಲ, ನೀವು ಯಾವ ಲೆಕ್ಕ

ಸಿಎಂ ಗೆ ಕೊಲೆ ಬೆದರಿಕೆ| ಹಿಂದೂ ಮಹಾಸಭಾ ಮುಖಂಡರ ವಿರುದ್ದ ಕೇಸ್| Read More »

ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸೋದಕ್ಕಾಗಲ್ಲ, ಅಂತಹ ಪರಿಸ್ಥಿತಿ ಇದೆ – ಯಡಿಯೂರಪ್ಪ

ಬೆಂಗಳೂರು: ಇಂದಿನ ಪರಿಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಕಷ್ಟ ಎಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದ್ಯದ ಸ್ಥಿತಿಯಲ್ಲಿ ಇಂಧನ ದರ ಇಳಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಧನ ದರ ಇಳಿಕೆ ಮಾಡುವ ಸ್ಥಿತಿಯಲ್ಲಿ ನಮ್ಮ ಸರ್ಕಾರ ಇಲ್ಲ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ

ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸೋದಕ್ಕಾಗಲ್ಲ, ಅಂತಹ ಪರಿಸ್ಥಿತಿ ಇದೆ – ಯಡಿಯೂರಪ್ಪ Read More »