Ad Widget .

ಸುಳ್ಯ| ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

Ad Widget . Ad Widget .

ಸುಳ್ಯ: ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಪೆರುಂಬಾರು ನಿವಾಸಿ ಜಯರಾಮ ಗೌಡ(52) ಎಂದು ಗುರುತಿಸಲಾಗಿದೆ.

Ad Widget . Ad Widget .

ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ಬಾರದಿದ್ದ ಅವರನ್ನು ಇಂದು ಮುಂಜಾನೆ ಹುಡುಕಾಟ ನಡೆಸಿದ್ದು, ಗೌಡರ ಮೃತದೇಹ ಮನೆಯಿಂದ 1 ಕಿ.ಮೀ ದೂರದ ಕಾರಿಂಜ ಸಿಆರ್ ಸಿ‌ ಕಾಲೊನಿ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ. ರಾತ್ರಿವೇಳೆ ಸಂಚರಿಸುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿರುವುದಾಗಿ ಶಂಕಿಸಲಾಗಿದೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Leave a Comment

Your email address will not be published. Required fields are marked *