Ad Widget .

ಕೋವಿಡ್ ಹಿನ್ನಲೆ| ವಾಹನ ದಾಖಲೆ ಸಿಂಧುತ್ವ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ|

Ad Widget . Ad Widget .

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ದಾಖಲೆಗಳಾದ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಇತರ ಪರವಾನಗಿಗಳ ಸಿಂಧುತ್ವವನ್ನು 2021ರ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.

Ad Widget . Ad Widget .

ಈ ಆದೇಶವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, ನಾಗರಿಕರು, ಸಾಗಾಣಿಕೆದಾರರು ಮತ್ತು ಇತರ ಸಂಘಟನೆಗಳು ತೊಂದರೆಗಳನ್ನ ಎದುರಿಸದಂತೆ ಜಾರಿಗೆ ತರುವಂತೆ ವಿನಂತಿಸಿದೆ.

ಮೋಟಾರು ವಾಹನ ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ಕ್ಕೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನ ವಿಸ್ತರಿಸುವ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಹಿಂದೆ ಮಾರ್ಚ್ 30, 2020, ಜೂನ್ 9, 2020, ಆಗಸ್ಟ್ 24, 2020, ಡಿಸೆಂಬರ್ 27, 2020, ಮತ್ತು ಜೂನ್ 17, 2021 ರಂದು ಸಲಹೆಗಳನ್ನು ನೀಡಿತ್ತು.

ಇನ್ನು ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಸೆಪ್ಟೆಂಬರ್ 30ರಂದು ಮುಕ್ತಾಯಗೊಳ್ಳುವ ಇತರ ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳ ಸಿಂಧುತ್ವವನ್ನ ದೆಹಲಿ ಸರ್ಕಾರ ನವೆಂಬರ್ 30 ರವರೆಗೆ ವಿಸ್ತರಿಸಿದೆ.

Leave a Comment

Your email address will not be published. Required fields are marked *