Ad Widget .

ಲಾಕ್ಡೌನ್ ಇಫೆಕ್ಟ್| ಏಳು ತಿಂಗಳ ಗರ್ಭವತಿಯಾದ ಅಪ್ರಾಪ್ತೆ| ಇಬ್ಬರ ವಿರುದ್ದ ಫೋಕ್ಸೋ ದಾಖಲು|

Ad Widget . Ad Widget .

ಬೆಳ್ತಂಗಡಿ: ಹತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಇಬ್ಬರು ಕಾಮುಕರು ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ.
ಶಾಲಾ ತರಗತಿಗಳು ಪ್ರಾರಂಭವಾಗಿದ್ದು, ಇತ್ತೀಚೆಗೆ ಶಾಲೆಗೆ ಇಂಜೆಕ್ಷನ್ ನೀಡಲೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Ad Widget . Ad Widget .

ಪ್ರಕರಣ ಕುರಿತು ಹುಡುಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಮನೆ ಸಮೀಪದಲ್ಲಿ ಜೆಸಿಬಿ ಕಾಮಗಾರಿ ನಡೆಸುತ್ತಿದ್ದ ಅದರ ಚಾಲಕ ರವೀಂದ್ರ ಎಂಬಾತ ಕಳೆದ ಫೆಬ್ರವರಿಯಲ್ಲಿ ಲಾಕ್ಡೌನ್ ಇದ್ದಾಗ ತನ್ನೊಂದಿಗೆ ಸಲುಗೆಯಿಂದ ವರ್ತಿಸಿ, ಎರಡು – ಮೂರು ಬಾರಿ ರಸ್ತೆಯ ಮೋರಿಯಡಿಗೆ ಬಲಾತ್ಕಾರವಾಗಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಇದಲ್ಲದೆ, ಪಕ್ಕದ ಕಾಡಿಗೆ ಒಯ್ದು ದೈಹಿಕ ಸಂಪರ್ಕ ನಡೆಸಿದ್ದಾನೆ. ಇದಲ್ಲದೆ ಈ ಘಟನೆಗೆ ಮುನ್ನ ಸಂಬಂಧಿಕ ಕೊಕ್ರಾಡಿ ನಿವಾಸಿ ಯೋಗೀಶ್ ಎಂಬಾತ 2020ರ ಎಪ್ರಿಲ್ ತಿಂಗಳಲ್ಲಿ ಎರಡು ಬಾರಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ತಿಳಿಸಿದ್ದಾಳೆ. ತನ್ನನ್ನು ಬಲಾತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿಯಾಗಲು ಕಾರಣವಾಗಿರುವ ರವೀಂದ್ರ ಮತ್ತು ಯೋಗೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ

ಇಂಜೆಕ್ಷನ್ ಕೊಡಲೆಂದು ಶಾಲೆಗೆ ಬಂದಿದ್ದ ವೈದ್ಯರು ತನ್ನ ದೇಹಸ್ಥಿತಿಯನ್ನು ಗಮನಿಸಿ ಪರೀಕ್ಷೆ ನಡೆಸುವಂತೆ ತಿಳಿಸಿದ್ದರು. ಸೆ.27ರಂದು ವೈದ್ಯರಲ್ಲಿ ಪರೀಕ್ಷೆ ನಡೆಸಿದಾಗ, ಏಳು ತಿಂಗಳ ಗರ್ಭಿಣಿಯಾಗಿದ್ದಾಗಿ ತಿಳಿಸಿದ್ದಾರೆ. ಬೆಳ್ತಂಗಡಿಯ ವೈದ್ಯರು ಸ್ಕ್ಯಾನಿಂಗ್ ನಡೆಸಿ, ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *