Ad Widget .

ವಿವಾಹಿತ ಮಹಿಳೆ ಜೊತೆಗೆ ಪಲ್ಲಂಗ ಹಂಚಿಕೊಂಡ ಪ್ರಿಯಕರ| ಇವರಿಬ್ಬರ ಕಾಮದಾಟ ನೋಡಲಾರದೆ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

Ad Widget . Ad Widget .

ಜಾರ್ಖಂಡ್: ಮದುವೆಯಾದರೂ ಅನ್ಯವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ನಗ್ನಗೊಳಿಸಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿರುವ ಘಟನೆ ಜಾರ್ಖಂಡ್ ನ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಈ ಇಬ್ಬರ ಪ್ರಕರಣ ನೋಡಲಾರದೆ ಗ್ರಾಮಸ್ಥರು ಈ ಕೃತ್ಯ ಎಸಗಿದ್ದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು 50-60 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget .

ಡುಮ್ಕಾ ಜಿಲ್ಲೆಯ ಬಡ್ತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ನಗ್ನಗೊಳಿಸಿ ಇಡೀ ಊರು ತುಂಬಾ ಮೆರವಣಿಗೆ ಮಾಡಿಸಿದ್ದರು ಎಂದು ವರದಿ ಹೇಳಿದೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರು ದಿನಗೂಲಿ ಕೆಲಸ ಮಾಡುತ್ತಿದ್ದು, ಒಂದೇ ಗ್ರಾಮದವರಾಗಿದ್ದರು. ಈ ವ್ಯಕ್ತಿ ಮಂಗಳವಾರ ಮಹಿಳೆಯನ್ನು ಭೇಟಿಯಾಗಲು ಬಂದಾಗ ಗ್ರಾಮಸ್ಥರೆಲ್ಲಾ ಸೇರಿ ಹಿಡಿದು, ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಂತರ ಇಬ್ಬರನ್ನೂ ನಗ್ನಗೊಳಿಸಿ ಒಂದು ಕಿಲೋ ಮೀಟರ್ ವರೆಗೆ ಮೆರವಣಿಗೆ ಮಾಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೂಡಲೇ ಘಟನೆ ಬಗ್ಗೆ ಮಾಹಿತಿ ದೊರೆತಾಗ, ಸ್ಥಳಕ್ಕೆ ಭೇಟಿ ನೀಡಿ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *