Ad Widget .

ಪುತ್ತೂರು:ವಿದ್ಯಾರ್ಥಿನಿಯ ಮೈಮುಟ್ಟಿದ ಅಪ್ರಾಪ್ತ ಯುವಕ| ಆರೋಪಿಯ ಸೆರೆಗೈದ‌ ಪೊಲೀಸರು|

Ad Widget . Ad Widget .

ಪುತ್ತೂರು : ಯುವಕನೊಬ್ಬ ಪುತ್ತೂರು ನಗರದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿ ಮೈಮುಟ್ಟಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಆರೋಪಿತನನ್ನು ಬಂಧಿಸಿದ ಘಟನೆ ಸೆ.29 ರಂದು ನಡೆದಿದೆ.

Ad Widget . Ad Widget .

ಪುತ್ತೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದಾನೆಂದು ಯುವತಿ ಆರೋಪಿದ್ದಾಳೆ.

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಕಣ್ಣೀರಿಡುತ್ತಾ ಕೂತಿದ್ದಾಗ ಇತರ ವಿದ್ಯಾರ್ಥಿಗಳು ಆಕೆಯಲ್ಲಿ ಈ ಬಗ್ಗೆ ವಿಚಾರಿಸಿದ್ದು ಆಕೆ ಕಿರುಕುಳ ನೀಡಿರುವ ಬಗ್ಗೆ ತಿಳಿಸಿದ್ದಾಳೆ. ಬಳಿಕ ಯುವಕನ ಪೋಟೋವನ್ನು ತನ್ನ ಇನ್ಸ್ಟಾಂ ಗ್ರಾಮ್ ನಿಂದ ತೆಗೆದು ಕಿರುಕುಳ ನೀಡಿದ ವ್ಯಕ್ತಿಯನ್ನು ಸಹಪಾಠಿಗಳಿಗೆ ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೋಟೋದ ಆಧಾರದಲ್ಲಿ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾನೆ ಎಂದು ಹೇಳಲಾದ ಯುವಕನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಆ ಯುವಕನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಯುವಕ ಮತ್ತು ಯುವತಿ ಅಪ್ರಾಪ್ತರು ಎಂದು ತಿಳಿದುಬಂದಿದೆ. ಯುವಕನನ್ನು ಮಹಿಳಾ ಠಾಣೆಗೆ ಹಸ್ತಾಂತರಿಸಲಾಗಿದೆ‌ ಎಂದು ತಿಳಿದುಬಂದಿದೆ

Leave a Comment

Your email address will not be published. Required fields are marked *