Ad Widget .

ಮನೆ ಅಳಿಯನೇ ಇಲ್ಲಿ ವಿಲನ್| ಹಿಂದಿನ ರಾತ್ರಿ ಅತ್ತೆ ಮನೆಗೆ ಬಂದವನು ಮಾಡಿದ್ದೇನು?

Ad Widget . Ad Widget .

ರಾಯಚೂರು: 6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಸೇರಿ ಮೂವರನ್ನು ಮನೆ ಅಳಿಯನೇ ಬರ್ಬರವಾಘಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್​ನಲ್ಲಿ ಸಂಭವಿಸಿದೆ. ವೈಷ್ಣವಿ(25) ಮತ್ತು ಇವರ ಸಹೋದರಿ ಆರತಿ(16), ತಾಯಿ ಸಂತೋಪಿ(45) ಕೊಲೆಯಾದ ದುರ್ದೈವಿಗಳು.

Ad Widget . Ad Widget .

6 ತಿಂಗಳ ಹಿಂದೆ ಸಾಯಿ ಎಂಬ ಯುವಕನೊಂದಿಗೆ ವೈಷ್ಣವಿ ಮದುವೆ ಆಗಿತ್ತು. ಸೆ.28ರ ರಾತ್ರಿ ಅತ್ತೆ ಸಂತೋಪಿಯ ಮನೆಗೆ ಬಂದ ಅಳಿಯ ಸಾಯಿ, ತನ್ನ ಪತ್ನಿ, ಅತ್ತೆ, ನಾದಿನಿಯನ್ನು ಕೊಂದು ಪರಾರಿಯಾಗಿದ್ದಾನೆ.

ಮದುವೆ ಬಳಿಕ ಸಾಯಿ ಹಾಗೂ ವೈಷ್ಣವಿ ಮಧ್ಯೆ ಕೌಟುಂಬಿಕ ಕಲಹ ಶುರುವಾಗಿತ್ತು. ಪತ್ನಿ ವೈಷ್ಣವಿ ತವರು ಮನೆ ಸೇರಿದ್ದಳು. ಇದೇ ವಿಚಾರಕ್ಕೆ ಅತ್ತೆ ಮನೆಗೆ ಬಂದಿದ್ದ ಸಾಯಿ ಜಗಳ ತೆಗೆದಿದ್ದ. ಕೋಪ ವಿಕೋಪಕ್ಕೆ ತಿರುಗಿದ್ದು, ಪತ್ನಿ, ಅತ್ತೆ, ನಾದಿನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಯಚೂರು ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment

Your email address will not be published. Required fields are marked *