Ad Widget .

ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ| ಕೇಸ್ ಹಾಕಲು‌ ನಿಂತು ಪೇಚಿಗೀಡಾದ ಮಂಗಳೂರು ಪೊಲೀಸ್

Ad Widget . Ad Widget .

ಮಂಗಳೂರು: ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೋಮವಾರ ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ. ಎರಡು ದಿನದಲ್ಲಿ ಬರೋಬ್ಬರಿ ಏಳು ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಆದರೆ ದುರಂತ ಏನೆಂದರೆ ಸಿಕ್ಕಸಿಕ್ಕವರ ವಾಹನವನ್ನು ತಡೆದು ನಿಲ್ಲಿಸಿದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ‌. ನಟರಾಜ್‌ರವರ ಸರ್ಕಾರಿ ಕಾರಿನಲ್ಲೇ ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದಿರುವುದು ಪೊಲೀಸ್ ಇಲಾಖೆಗೆ ತೀವ್ರ ಪೇಚುಗೀಡು ಮಾಡಿದೆ.

Ad Widget . Ad Widget .

ನಂಬರ್ ಪ್ಲೇಟ್ ಸರಿಯಿಲ್ಲದ ಮತ್ತು ಐಎನ್‌ಡಿ ಹೊಂದಿರದ ವಾಹನಗಳನ್ನು ಹಿಡಿಯುತ್ತಿದ್ದ ಎಸಿಪಿ ನಟರಾಜ್ ವಾಹನದ ನಂಬರ್ ಪ್ಲೇಟ್‌ನಲ್ಲಿ ಐಎನ್‌ಡಿ ಇರದಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ವಾಹನದ ಹಿಂದಿನ ನಂಬರ್ ಪ್ಲೇಟ್‌ನಲ್ಲಿ ಐಎನ್‌ಡಿ ಸ್ಟಿಕ್ಕರ್ ಇಲ್ಲದಿರುವುದು ಸಾರ್ವಜನಿಕರು ವಾಹನದ ಫೋಟೋ ತೆಗೆದು ಪೊಲೀಸರ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ.

“ಸಾರ್ವಜನಿಕರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸರ ವಾಹನದಲ್ಲೇ ನಿಯಮ ಬಾಹಿರ ನಂಬರ್ ಪ್ಲೇಟ್ ಇರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಆಟೋ, ಬೈಕ್‌ಗಳಲ್ಲಿ ಪ್ರಯಾಣಿಸುವ ಸಾಮಾನ್ಯರನ್ನು ಹಿಡಿದು ಕೇಸ್ ಹಾಕುವ ಪೊಲೀಸರು, ತಮ್ಮ ವಾಹನದಲ್ಲೇ ಸರಿಯಾಗಿ ನಿಯಮ ಅಳವಡಿಸಿಲ್ಲ. ಪೊಲೀಸರಿಗೆ ಕೇಸ್ ಹಾಕುವವರು ಯಾರು?,” ಅಂತಾ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, “ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರವಾಗಿರುವುದು ಗೊತ್ತಾಗಿದೆ. ತಕ್ಷಣ ಸರಿ ಮಾಡಲು ಸೂಚಿಸಿದ್ದೇನೆ,” ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *