Ad Widget .

ಸೆಕ್ಸೀ ಸಾಂಪ್ರದಾಯಿಕ ಉಡುಗೆ ಧರಿಸಿದ ಬಾಲಿವುಡ್ ಬೆಡಗಿ| ನೋರಾ ಫತೇಹಿ ಡ್ರೆಸ್ ನೋಡಿ ನೆಟ್ಟಿಗರು ಕಿಡಿ

Ad Widget . Ad Widget .

ಮುಂಬೈ: ಬಾಲಿವುಡ್‌ನ ಹಲವು ಹಿಟ್ ಹಾಡುಗಳಲ್ಲಿ ಬಳಕುವ ಬಳ್ಳಿಯಂತೆ ಸೊಂಟ ಬಳುಕಿಸಿರುವ ಚೆಲುವೆ ನೋರಾ ಫತೇಹಿ ಆಗಾಗ ಸ್ಟೈಲಿಶ್ ಉಡುಪುಗಳನ್ನು ತೊಟ್ಟು ಕ್ಯಾಮರಾ ಕಣ್ಣುಗಳ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

Ad Widget . Ad Widget .

ಇತ್ತೀಚೆಗಷ್ಟೇ ಬೋಲ್ಡ್ ಔಟ್‌ಫಿಟ್ ತೊಟ್ಟು ಕ್ಯಾಮರಾ ಮುಂದೆ ಬಂದಿದ್ದ ನಟಿ ನೋರಾ ಫತೇಹಿಯನ್ನ ಕಂಡು ನೆಟ್ಟಿಗರು ಛೀಮಾರಿ ಹಾಕಿದ್ದರು. ಇದೀಗ ಮತ್ತೊಮ್ಮೆ ನಟಿ ನೋರಾ ಫತೇಹಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಎದೆಸೀಳು ಕಾಣುವ ಸಾಂಪ್ರದಾಯಿಕ ಉಡುಗೆಯನ್ನು ನಟಿ ನೋರಾ ಫತೇಹಿ ತೊಟ್ಟಿದ್ದಾರೆ.

ಮೊನ್ನೆಮೊನ್ನೆಯಷ್ಟೇ ಫೋಟೋಶೂಟ್‌ವೊಂದರಲ್ಲಿ ನಟಿ ನೋರಾ ಫತೇಹಿ ಕಾಣಿಸಿಕೊಂಡಿದ್ದರು. ಫೋಟೋಶೂಟ್‌ನಲ್ಲಿ ಫ್ಯಾಶನ್ ಡಿಸೈಸರ್ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಡಿಸೈನ್ ಮಾಡಿದ್ದ ಉಡುಪನ್ನು ನೋರಾ ಫತೇಹಿ ತೊಟ್ಟಿದ್ದರು. ಫೋಟೋಶೂಟ್‌ನಲ್ಲಿ ಕ್ಲಿಕ್ ಆದ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನೋರಾ ಫತೇಹಿ ಹಂಚಿಕೊಂಡಿದ್ದರು.

ನೋರಾ ಫತೇಹಿ ತೊಟ್ಟಿದ್ದ ಸಾಂಪ್ರದಾಯಿಕ ಉಡುಗೆಯ ನೆಕ್‌ಲೈನ್ ತೀರಾ ಡೀಪ್ ಆಗಿದೆ. ಎದೆಸೀಳು ಕಾಣುವ ಉಡುಪು ಧರಿಸಿದ್ದ ನೋರಾ ಫತೇಹಿ ಅವರ ಫೋಟೋಗಳನ್ನು ಕಂಡು ನೆಟ್ಟಿಗರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.

ನೋರಾ ಫತೇಹಿ ಅವರ ಬೋಲ್ಡ್ ಅವತಾರ ನೋಡಿದ ಕೆಲ ನೆಟ್ಟಿಗರು ಕೆಂಡ ಕಾರಿದ್ದಾರೆ. ‘’ಟೇಲರ್‌ಗೆ ನೋರಾ ಫತೇಹಿ ಪೂರ್ತಿ ಬಟ್ಟೆ ಕೊಡಬೇಕಿತ್ತು’’, ‘’ನೋರಾ ದಯವಿಟ್ಟು ಈ ತರಹದ ಉಡುಪುಗಳನ್ನು ಧರಿಸಬೇಡಿ’’, ‘’ಬಟ್ಟೆ ಹಾಕಿಕೊಂಡಿರೋದಾದರೂ ಯಾಕೆ?’’, ‘’ಈ ತರಹ ಬಟ್ಟೆ ಧರಿಸುವ ಅವಶ್ಯಕತೆ ಏನಿದೆ?’’, ‘’ಮಾನ ಮಾರ್ಯಾದೆ ಎಂಬ ಪದದ ಅರ್ಥ ಗೊತ್ತಿದ್ಯಾ?’’ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕೆನಡಾದಲ್ಲಿ ಹುಟ್ಟಿ ಬೆಳೆದ ನೋರಾ ಫತೇಹಿ ಹಿಂದಿಯ ‘ಮಿಸ್ಟರ್ ಎಕ್ಸ್’, ‘ರಾಕಿ ಹ್ಯಾಂಡ್ಸಮ್’, ‘ಸತ್ಯಮೇವ ಜಯತೆ’, ‘ಸ್ತ್ರೀ’ ಮುಂತಾದ ಸಿನಿಮಾಗಳ ಐಟಂ ಸಾಂಗ್‌ಗಳಲ್ಲಿ ನೋರಾ ಫತೇಹಿ ಡ್ಯಾನ್ಸ್ ಮಾಡಿದ್ದಾರೆ. ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’, ‘ಸತ್ಯಮೇವ ಜಯತೆ 2’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ‘ಟೆಂಪರ್’, ‘ಬಾಹುಬಲಿ: ದಿ ಬಿಗಿನ್ನಿಂಗ್’, ‘ಕಿಕ್ 2’, ‘ಶೇರ್’, ‘ಲೋಫರ್’ ಮುಂತಾದ ಚಿತ್ರಗಳಲ್ಲಿ ಐಟಂ ಗರ್ಲ್ ಆಗಿ ಸ್ಪೆಷಲ್ ಹಾಡುಗಳಿಗೆ ನೋರಾ ಫತೇಹಿ ಹೆಜ್ಜೆ ಹಾಕಿದ್ದರು.

Leave a Comment

Your email address will not be published. Required fields are marked *