Ad Widget .

ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ| ಸ್ಥಿರತೆಯಲ್ಲಿದ್ದ ತೈಲ ದರ ಮತ್ತೆ ಏರಿಕೆ|

Ad Widget . Ad Widget .

ನವದೆಹಲಿ: ಕಳೆದ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರವನ್ನು ಇಂದು (ಸೆ.28) ಏರಿಕೆ ಮಾಡಲಾಗಿದ್ದು, ಜೊತೆಗೆ ಡೀಸೆಲ್ ದರ ಕೂಡಾ ಮತ್ತೆ ಏರಿಕೆ ಕಂಡಿದೆ.

Ad Widget . Ad Widget .

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20ರಿಂದ 25 ಪೈಸೆ ಹೆಚ್ಚಳ ಮಾಡಿದ್ದರೆ, ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ.

ಮಂಗಳವಾರದ ಇಂಧನ ದರ ಏರಿಕೆಯ ಬಳಿಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.39 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.57 ರೂಪಾಯಿಗೆ ಏರಿಕೆ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.47 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.21 ರೂಪಾಯಿಗೆ ಏರಿಕೆ ಆಗಿದೆ. ಇದೇ ವೇಳೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.87 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.62 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್​ಗೆ 99.15 ರೂಪಾಯಿ ನಿಗದಿ ಆಗಿದ್ದರೆ, ಲೀಟರ್ ಡೀಸೆಲ್ ದರ 94.17 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.92 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.06 ರೂಪಾಯಿ ಇದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 109.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.45 ರೂಪಾಯಿ ಇದೆ.

ಕಳೆದ ಶುಕ್ರವಾರ ಲೀಟರ್ ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಆ ಬಳಿಕ ಒಂದು ದಿನದ ನಂತರ ಭಾನುವಾರ ಮತ್ತೆ ಲೀಟರ್ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಇಂದೂ ಸಹ ಡೀಸೆಲ್ ದರದಲ್ಲಿ 75 ಪೈಸೆ ಹೆಚ್ಚಳವಾಗಿದೆ. ಸತತ ಮೂರು ವಾರಗಳಿಂದ ಸ್ಥಿರತೆಯಲ್ಲಿದ್ದ ಪೆಟ್ರೋಲ್ ದರ ಸಹ ಮತ್ತೆ ಏರಿಕೆಯತ್ತ ಮುಖ ಮಾಡಿದೆ.

Leave a Comment

Your email address will not be published. Required fields are marked *