Ad Widget .

ನವ ಮಂಗಳೂರು ಬಂದರಿನಲ್ಲಿ ಸಹಾಯಕ ‌ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ

Ad Widget . Ad Widget .

ಮಂಗಳೂರು: ನವ ಮಂಗಳೂರು ಬಂದರು ಮಂಡಳಿ (NMPT)ಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬೇರೆ ಇಲಾಖೆಗಳಲ್ಲಿ ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್​ 16 ಕಡೆಯ ದಿನವಾಗಿದೆ. ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Ad Widget . Ad Widget .

ಹುದ್ದೆ ವಿವರ:
ಸಹಾಯಕ ಕಾರ್ಯದರ್ಶಿ ಗ್ರೇಡ್​ 2 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಸಂಸ್ಥೆಯಲ್ಲಿ ಮೂರು ವರ್ಷದ ಸೇವಾ ಅನುಭವವನ್ನು ಹೊಂದಿರಬೇಕು.
ಸಹಾಯಕ ಕಾರ್ಯದರ್ಶಿ 3 ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಅನುಭವ ಸರ್ಕಾರಿ ಕಚೇರಿಯಲ್ಲಿ ನಿರ್ವಹಣೆ ಮಾಡಿದ ಮೂರು ವರ್ಷದ ಸೇವಾ ಅನುಭವ ಮಾಸಿಕ 40 ಸಾವಿರದಿಂದ 1, 40, 000 ರೂ ವರೆಗೆ

ಆಯ್ಕೆ ವಿಧಾನ : ಸರ್ಕಾರಿ ಹುದ್ದೆಯಲ್ಲಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು Deputation (ನಿಯೋಜನೆ) ಪದ್ಧತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು

ವಿಶೇಷ ಸೂಚನೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿ ಗಳು ಸರ್ಕಾರದ ನಿಯಮಗಳ ಸಂಪೂರ್ಣ ಅರಿವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ವಿಧಾನ:
ಅರ್ಜಿಯನ್ನು ಅಂಚೆ ಕಚೇರಿ, ಸ್ಪೀಡ್​ ಪೋಸ್ಟ್​ ಮೂಲಕ ನವ ಮಂಗಳೂರು ಬಂದರು ಕಚೇರಿಗೆ ಕಳುಹಿಸಬೇಕು. ಅಭ್ಯರ್ಥಿಗಳು ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಅರ್ಜಿಯ ಕಳುಹಿಸುವ ಲಕೋಟೆ ಮೇಲೆ ಸಹಾಯಕರ ಕಾರ್ಯದರ್ಶಿ ಹುದ್ದೆಗೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ವಯೋಮಿತಿ ಗರಿಷ್ಠ 35ಕ್ಕಿಂತ ಹೆಚ್ಚಿರಬಾರದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

The Secretary,
New Mangalore Port Trust,
Panamburu
Mangaluru-575010

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ : ಅಕ್ಟೋಬರ್ 16 ಆಗಿದೆ.

ಅಭ್ಯರ್ಥಿಗಳು ನವ ಮಂಗಳೂರು ಬಂದರು ಮಂಡಳಿಯ ಅಧಿಕೃತ ವೆಬ್​ ತಾಣದಲ್ಲಿ ನೀಡಲಾದ ಅರ್ಜಿಯಲ್ಲಿ ಮಾತ್ರ ತಮ್ಮ ಸಂಪೂರ್ಣ ವಿವರವನ್ನು ಭರ್ತಿ ಮಾಡಬೇಕು. ಇದರ ಜೊತೆಗೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಬೇಕು. ಅಭ್ಯರ್ಥಿಯ ಸಂಪೂರ್ಣ ವಿವರ ಭರ್ತಿಯಾಗದಿದ್ದಲ್ಲಿ ಅದನ್ನು ತಿರಸ್ಕರಿಸಲಾಗುವುದು. ಆಕ್ಟೋಬರ್​ 16ರೊಳಗೆ ಅಭ್ಯರ್ಥಿಯ ಅರ್ಜಿಗಳು ಮೇಲ್ಕಂಡ ವಿಳಾಸಕ್ಕೆ ತಲುಪುವಂತೆ ನೋಡಿಕೊಳ್ಳಬೇಕು

ಅಭ್ಯರ್ಥಿ ಅರ್ಜಿಯಲ್ಲಿ ಕಳುಹಿಸುವ ತಮ್ಮ ಶೈಕ್ಷಣಿಕ ಮಾಹಿತಿಯ ದಾಖಲೆ ಮತ್ತು ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವ ಕುರಿತು ದಾಖಲೆಗಳನ್ನು ಡೈಪ್ಯೂಟಿ ಎಚ್​ಒಡಿ ಗಿಂತ ಮೇಲಾಧಿಕಾರಿಗಳಿಂದ ಪರಿಶೀಲಿಸಿ ಅವರ ಸಹಿ ಪಡೆದಿರಬೇಕು. ಎನ್ಒಸಿ ಪತ್ರದ ಜೊತೆಗೆ ಲಕೋಟೆಯಲ್ಲಿ ಎರಡು ಪಾಸ್​ಪೋರ್ಟ್​​​ ಸೈಜ್ ಫೋಟೋ ಕಳುಹಿಸಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್​ ಸೂಚನೆಗಳನ್ನು ಗಮನವಿಟ್ಟು ಪಾಲಿಸುವುದು ಅವಶ್ಯ.

Leave a Comment

Your email address will not be published. Required fields are marked *