Ad Widget .

ಮತ್ತೊಂದು ಹೆಣ್ಣುಮಗು ಹುಟ್ಟಿತೆಂದು ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ

Ad Widget . Ad Widget .

ತೆಲಂಗಾಣ: ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಗದ್ವಾಲದಲ್ಲಿ ನಡೆದಿದೆ.

Ad Widget . Ad Widget .

ಗದ್ವಾಲ ಜಿಲ್ಲೆಯ ಸಂಸದರ ಕಚೇರಿಯಲ್ಲಿ ಅಟೆಂಡರ್​​ ಆಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್​​ ತನ್ನ ಪತಿ ಪವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಕೋಪಗೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.

2009ರಲ್ಲಿ ಪವಾನಿಯನ್ನು ಮದುವೆಯಾಗಿದ್ದ ವೆಂಕಟೇಶ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ, 6 ಲಕ್ಷ ರೂ. ನಗದು ಹಣ ಪಡೆದುಕೊಂಡಿದ್ದಾನೆ. ಇಷ್ಟಾದರೂ ಹೆಚ್ಚುವರಿ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಪಲ್ಲವಿ ಈಗಾಗಲೇ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸೆ. 22ರಂದು 2ನೇ ಹೆರಿಗೆ ವೇಳೆ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಸೆ.25ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಪಲ್ಲವಿ ಜೊತೆ ಗಂಡ ವೆಂಕಟೇಶ್ ಜಗಳವಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ, ಪ್ರಜ್ಞಾಹೀನಳಾಗಿದ್ದ ಆಕೆಯನ್ನ ಗದ್ವಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಮಹಿಳೆಯ ತಂದೆ ಆಂಜನೇಯ ಪೊಲೀಸ್ ಪ್ರಕರಣ ದಾಖಲು ಮಾಡಿದ್ದಾರೆ.

Leave a Comment

Your email address will not be published. Required fields are marked *