Ad Widget .

ಕೇಸ್ ಹಿಂಪಡೆಯಲೊಪ್ಪದ‌ ಪತ್ನಿಯ ಮೂಗು‌ ಕತ್ತರಿಸಿದ ಪತಿರಾಯ! ಕೋಪದಲ್ಲಿ ತುಂಡಾಗಿದ್ದು ಮತ್ತೆ ಬಂದೀತೇ?

Ad Widget . Ad Widget .

ಭೋಪಾಲ್: ಮೂಗು ಮನುಷ್ಯನ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ಅಂತಹ‌ ಮೂಗು ಇಲ್ಲವಾದರೆ ಆ ದೃಶ್ಯ ಊಹಿಸಲೂ ಆಗದು. ಆದರೆ ಕೋಪದಲ್ಲೊಬ್ಬ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವುದೇ? ಇಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಕಚ್ಚಿದ ಪತಿ ಕ್ರೌರ್ಯ ಮೆರೆದಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ಆಲೌಟ್ ಆಂಜುಮನ್ ಕಾಲೋನಿಯಯಲ್ಲಿರುವ ಪತ್ನಿ ಟೀನಾ ತವರು ಮನೆಗೆ ಬಂದಿದ್ದ ಜುಜ್ಜೈನಿಯ ದಿನೇಶ್ ಇಂತಹ ಕೃತ್ಯವಸೆಗಿದ್ದಾನೆ. ಕೋರ್ಟ್ ನಲ್ಲಿ ಇರುವ ಡೈವೋರ್ಸ್ ಮತ್ತು ಪರಿಹಾರ ಕೇಸ್ ವಾಪಸ್ ಪಡೆಯಲು ಬಲವಂತ ಮಾಡಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿ ಪತ್ನಿಯ ಮೂಗು ಕಚ್ಚಿ ಪರಾರಿಯಾಗಿದ್ದಾನೆ.

ಮಹಿಳೆ ಮತ್ತು ಆಕೆಯ ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಗಾಯಗೊಂಡ ಟೀನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2008 ರಲ್ಲಿ ಟೀನಾ -ದಿನೇಶ್ ಮದುವೆಯಾಗಿದ್ದು, ಕೆಲಸ ಮಾಡದೆ ಮದ್ಯಪಾನ ಮಾಡಿ ಜಗಳವಾಡುತ್ತಿದ್ದ ದಿನೇಶ್ ನಿಂದ ದೂರವಾದ ಪತ್ನಿ ಟೀನಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ತವರುಮನೆಯಲ್ಲಿ ವಾಸಿಸುತ್ತಿದ್ದಳು. 2019 ರಲ್ಲಿ ಡೈವೋರ್ಸ್ ಮತ್ತು ಪರಿಹಾರಕ್ಕಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು. ಈ ಕೇಸ್ ಹಿಂಪಡೆಯುವಂತೆ ದಿನೇಶ್ ಒತ್ತಡ ಹಾಕುತ್ತಿದ್ದ. ಪತ್ನಿ ಒಪ್ಪದಿದ್ದಾಗ ಆಕೆಯ ತವರು ಮನೆಗೆ ಬಂದು ಮೂಗು ಕಚ್ಚಿದ್ದಾನೆ ಎನ್ನಲಾಗಿದೆ.

Leave a Comment

Your email address will not be published. Required fields are marked *