Ad Widget .

ಕಳವಾಗಿ ಅಮೇರಿಕಾ ಸೇರಿದ್ದ ಅತ್ಯಮೂಲ್ಯ ವಿಗ್ರಹಗಳು ಭಾರತಕ್ಕೆ ಹಸ್ತಾಂತರ| ಮೋದಿ ಕೈಗೆ ದಾಖಲೆ‌ ಸಮೇತ ವರ್ಗಾಯಿಸಿದ ಬಿಡೆನ್

Ad Widget . Ad Widget .

ವಾಷಿಗ್ಟಂನ್: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತಕ್ಕೆ ವಾಪಾಸ್ಸಾಗುತ್ತಿದ್ದು, ಈ ವೇಳೆ‌ ಭಾರತದ ಅತ್ಯಮೂಲ್ಯ ವಸ್ತುಗಳನ್ನು ವಾಪಾಸು ತರುತ್ತಿದ್ದಾರೆ.
ಭಾರತದ ಪರಂಪರೆ, ಇತಿಹಾಸ, ಸಂಸ್ಕೃತಿ ಹೇಳುವ ಐತಿಹಾಸಿಕ, ಪುರಾತನ ಕಲಾಕೃತಿಗಳೊಂದಿಗೆ ಭಾರತಕ್ಕೆ ಮರಳಲಿದ್ದಾರೆ.

Ad Widget . Ad Widget .

ಭಾರತದಿಂದ ಕಳುವಾಗಿ ಅಮೆರಿಕ ಸೇರಿದ್ದ 157 ಕಲಾಕೃತಿ ಮತ್ತು ಪುರಾತನ ವಸ್ತುಗಳನ್ನು ಅಮೆರಿಕ ಪ್ರಧಾನಿ ಮೋದಿಗೆ ಹಸ್ತಾಂತರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಬೆಲೆ ಕಟ್ಟಲಾಗಾದ ಕಲಾಕೃತಿಗಳನ್ನು, ಪುರಾತನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ್ದಾರೆ. ಇದು ಭಾರತದಿಂದ ಶತಮಾನಗಳ ಹಿಂದೆ ಕಳುವಾಗಿ ಅಮೆರಿಕ ವಸ್ತು ಸಂಗ್ರಹಾಲಯ ಸೇರಿದ್ದ ವಸ್ತುಗಳಾಗಿದೆ. ಭಾರತದ ಭವ್ಯ ಪರಂಪರೆ ಸಾರಿ ಹೇಳುವ ಈ ಕಲಾಕೃತಿಗಳೊಂದಿಗೆ ಪ್ರಧಾನಿ ಮೋದಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಭಾರತದ ವಸ್ತುಗಳನ್ನು ಮತ್ತೆ ಭಾರತಕ್ಕೆ ನೀಡಿದ ಅಮೆರಿಕ ನಿರ್ಧಾರವನ್ನು ಮೋದಿ ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಸಾಗಾಣಿಕೆಯನ್ನು ನಿಯಂತ್ರಿಸಲು ಉಭಯ ದೇಶಗಳು ಬದ್ಧವಾಗಿದೆ ಎಂದರು.

10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಮತ್ತು 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಜೊತೆಗೆ 45 ಪ್ರಾಚೀನ ವಸ್ತುಗಳನ್ನು ಅಮೆರಿಕ, ಮೋದಿ ಭೇಟಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.

ಅಮೆರಿಕ ಹಸ್ತಾಂತರಿ ಕಲಾಕೃತಿ ಹಾಗೂ ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು. ಅವುಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

157 ಕಲಾಕೃತಿ ಹಾಗೂ ಪುರಾತನ ವಸ್ತುಗಳಲ್ಲಿ 71 ಸಾಂಸ್ಕೃತಿಕ, ಇನ್ನುಳಿದ 50 ಹಿಂದೂ ಧರ್ಮ, 16 ಬೌದ್ಧ ಧರ್ಮ ಹಾಗೂ 9 ಜೈನ ಧರ್ಮಕ್ಕೆ ಸಂಬಂಧಿಸಿದ ಪ್ರತಿಮೆಗಳನ್ನು ಒಳಗೊಂಡಿದೆ. ಕಂಚಿನ ಕಲಾಕೃತಿ ಸಂಗ್ರಹದಲ್ಲಿ ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರು ಸೇರಿದೆ. ಬ್ರಾಹ್ಮಿ ಮತ್ತು ನಂದಿಕೇಶನ ಪ್ರಸಿದ್ಧ ಭಂಗಿಗಳ ಅಲಂಕೃತ ಪ್ರತಿಮೆಗಳನ್ನು ಹೊಂದಿದೆ. ಈ ಕಲಾಕೃತಿಗಳು ಇನ್ನುಮುಂದೆ ಭಾರತದ ಸಂಗ್ರಹಾಲಯದಲ್ಲಿ ಇರಲಿದೆ.

ಹಿಂದೂ ಧರ್ಮದ ಧಾರ್ಮಿಕ ಶಿಲ್ಪಗಳು ಅದರಲ್ಲೂ ವಿಶೇಷವಾಗಿ ಮೂರು ತಲೆ ಬ್ರಹ್ಮ, ರಥ, ಸೂರ್ಯ, ವಿಷ್ಣು, ಶಿವ, ಗಣೇಶ ಸೇರಿದಂತೆ ಹಲವು ಪುರಾತನ ಶಿಲ್ಪಕಲೆಗಳು ಸೇರಿವೆ. ಬೌದ್ಧ ದರ್ಮದ ಸ್ಥಾಯಿ ಬೋಧಿಸತ್ವ, ತಾರಾ ವಿಗ್ರಹಳು, ಜೈನ ಧರ್ಮದ ತೀರ್ಥಂಕರ ವಿಗ್ರಹ ಸೇರಿದೆ. ಇದರ ಜೊತೆ ಡ್ರಮ್ ಬಾರಿಸುವ ಮಹಿಳೆ ಸೇರಿದಂತೆ ಇತರ ಕಲಾಕೃತಿಗಳು ಇವೆ.

Leave a Comment

Your email address will not be published. Required fields are marked *