Ad Widget .

17 ಕಾರುಗಳ ಗಾಜು ಒಡೆದು ಪುಂಡಾಟ| 5 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅರೆಸ್ಟ್ |

Ad Widget . Ad Widget .

ಬೆಂಗಳೂರು: ಎರಡು ದಿನಗಳ ಹಿಂದೆ ಮನೆ ಮುಂದೆ ನಿಲ್ಲಿಸಿದ್ದ 17ಕ್ಕೂ ಹೆಚ್ಚು ಕಾರುಗಳ ಗಾಜನ್ನು ಒಡೆದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 5 ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಆರ್.ಆರ್. ನಗರ ಹಾಗೂ ಕೆಂಗೇರಿಗಳಲ್ಲಿ ಎರಡು ದಿನಗಳ ಹಿಂದೆ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಮನೆಗಳ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ದೊಣ್ಣೆಯಿಂದ ಒಡೆದು ಪುಡಿ ಪುಡಿ ಮಾಡಿ ತೆರಳಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಆರ್. ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಇದೀಗ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ರೋಹಿನ್ ಸೈನಿ, ಸಕ್ಕಂ ಭಾರದ್ವಾಜ್, ಮಾಯಾಂ ವೈ ಆರ್, ಅದ್ನಾನ್ ಪಹಾದ್, ಜಯಸ್ ಬಂಧಿತರು. ಐವರೂ ಅಂತರಾಜ್ಯದವರಾಗಿದ್ದಾರೆ. ರೋಹಿನ್ ಸೈನಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಕಂಠಪೂರ್ತಿ ಕುಡಿದಿದ್ದರು. ಕುಡಿದ ಅಮಲಿನಲ್ಲಿ ಬೈಕ್ ನಲ್ಲಿ ತೆರಳಿ ಕಾರಿನ ಗಾಜುಗಳನ್ನು ಒಡೆದು ಪುಂಡಾಟ ಮೆರೆದಿದ್ದರು.

Leave a Comment

Your email address will not be published. Required fields are marked *