Ad Widget .

ಕಡಬ : ಪೊಲೀಸಪ್ಪನ ಪೋಲಿ ಆಟಕ್ಕೆ ಯುವತಿ ಗರ್ಭಿಣಿ…!?

ಕಡಬ: ಪೊಲೀಸಪ್ಪನ ಪೋಲಿಯಾಟಕ್ಕೆ ಯುವತಿ ಗರ್ಭಿಣಿಯಾದ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದ ಯುವತಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದ್ದು ಪ್ರಭಾವ ಬಳಸಿದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರಕ್ಷಣೆ ಮಾಡಬೇಕಾದವರೆ ಸಮಾಜ ಒಪ್ಪದ ಕೆ ಲಸ ಮಾಡಿರುವುದಕ್ಕೆ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Ad Widget . Ad Widget .

ಯುವತಿಯೊಂದಿಗೆ ಸಲುಗೆಯಿಂದ ಇದ್ದಿರುವುದು ಕೆಲ ಗ್ರಾಮಸ್ಥರಿಗೂ ಗೊತ್ತಿತ್ತು ಎನ್ನಲಾಗಿದೆ. ಈತನ ಕೆಟ್ಟ ನಡವಳಿಕೆಯ ವಿಚಾರ ದಕ್ಷ ಅಧಿಕಾರಿಗಳ ಗಮನಕ್ಕೂ ಹಿಂದೆ ಬಂದಿತ್ತು ಎನ್ನಲಾಗಿದೆ. ಆದರೆ ಮತ್ತೆ ಅದೇ ಚಾಳಿ ಮುಂದು ವರೆಸಿದ ಕಾರಣ ಈ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂಬ ಮಾತು ಕೇಳಿ ಬಂದಿದೆ.

Ad Widget . Ad Widget .

ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸುದ್ದಿ ಹರಡಿಸದಂತೆ ಈತ ಕೆಲವರಿಗೆ ಒತ್ತಡವನ್ನು ಹಾಕಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೇಲಾಧಿಕಾರಿಗಳು ಈ ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಸತ್ಯಾಸತ್ಯತೆ ಹೊರ ಬರಲಿದೆ. ಸಿಬ್ಬಂದಿಯ ಕೆಟ್ಟ ನಡವಳಿಕೆಯಿಂದ ಉತ್ತಮ ಕರ್ತವ್ಯನಿರ್ವಹಣೆಯ ಮೂಲಕ ಹೆಸರುವಾಸಿಯಾಗಿದ್ದ ಕಡಬ ಠಾಣೆಯ ಘನತೆಗೆ ಮಸಿ ಬಳಿದಂತಾಗಿದೆ. ಇತರ ಪ್ರಾಮಾಣಿಕ ಸಿಬ್ಬಂದಿಗಳು ಮುಜುಗರ ಪಡುವಂತಾಗಿದೆ.

Leave a Comment

Your email address will not be published. Required fields are marked *