ಕಡಬ: ಮಸಾಜ್ ಸೆಂಟರ್ ಹೆಸರಲ್ಲಿ ಮಾಂಸದಂಧೆ| ಪಾರ್ಲರ್ ಗೆ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್|

Ad Widget ... ..

ಕಡಬ: ಮಸಾಜ್ ಸೆಂಟರ್ ಹೆಸರಿನಲ್ಲಿ ಪಾರ್ಲರ್​​​ ತೆರೆದು ಅಲ್ಲಿಗೆ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅದರ ಮಾಲಕ ಹಾಗೂ ಅಲ್ಲಿನ ಸಿಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯರಿಬ್ಬರು ಕಡಬ ಠಾಣೆಗೆ ದೂರು ನೀಡಿದ ಘಟನೆ ಸೆ 24 ರಂದು ನಡೆದಿದೆ.

Ad Widget

ಕಡಬ ಸಮೀಪದ ಮಸಾಜ್ ಪಾರ್ಲರ್ ನಡೆಸುತ್ತಿರುವ ಕೇರಳದ ವಯನಾಡ್ ನಿವಾಸಿ ಅಬ್ರಾಹಾಂ, ಆತನ ಪಾರ್ಲರ್ ಸಿಬಂದಿ ಕೇರಳ ಮೂಲದ ಅನೀಶ್(25) ಎಂಬವರನ್ನು ಈ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಆರೋಪಿ ಅಬ್ರಾಹಾಂ ಮಸಾಜ್ ಸೆಂಟರ್ ನಡೆಸುತ್ತಿದ್ದ . ಕಳೆದ ಕೆಲವು ಸಮಯಗಳಿ೦ದ ಕಾರ್ಯಾಚರಿಸುತ್ತಿದ್ದ ಈ ಮಸಾಜ್ ಸೆಂಟರ್‌ ನಲ್ಲಿ ಮಸಾಜ್ ಗೆ ಬರುವ ಮಹಿಳೆಯರಿಗೆ ಮತ್ತು ಅಲ್ಲಿ ಕೆಲಸ ಮಾಡಿಕೊಂಡಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊರಿಸಲಾಗಿದೆ.

ಈ ಮಸಾಜ್ ಸೆಂಟರ್ ನಲ್ಲಿ ಕೇರಳ ಮೂಲದ ಹುಡುಗಿಯರನ್ನು ಈತ ಜತೆಗೆ ಇಟ್ಟುಕೊಂಡಿರುವುದಾಗಿಯೂ ಆರೋಪ ಕೇಳಿ ಬಂದಿದೆ. ಇವರ ಮೂಲಕ ಈತ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಸ್ಥಳೀಯರು ಹಾಗೂ ಅಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಆರೋಪಿಸುತ್ತಿದ್ದಾರೆ.

ಶುಕ್ರವಾರ ಮಹಿಳೆಯೋರ್ವರಿಗೆ ಪುನಃ ಕಿರುಕುಳ ನೀಡಲು ಈತ ಆರಂಭಿಸಿದ ಎನ್ನಲಾಗಿದೆ. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿರುವುದಾಗಿ ಠಾಣೆಯಲ್ಲಿ ದೂರು ನೀಡಲು ಬಂದಿದ್ದ ಮಹಿಳೆಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *