Ad Widget .

ಸುಳ್ಯ: ಖಜಾನಾಧಿಕಾರಿಯ ಕಿಸೆಯಿಂದ ಹಣ ಎಗರಿಸಿದ ಮಂಗಳಮುಖಿ

Ad Widget . Ad Widget .

ಸುಳ್ಯ: ಇಲ್ಲಿನ ಬಸ್ ನಿಲ್ದಾಣದಲ್ಲಿ ಖಜಾನಾಧಿಕಾರಿಯ ಕಿಸೆಯಿಂದ ಮಂಗಳಮುಖಿಯೊಬ್ಬಾಕೆ ಹಣವನ್ನು ಕದ್ದೊಯ್ದ ಘಟನೆ ವರದಿಯಾಗಿದೆ.

Ad Widget . Ad Widget .

ಸುಳ್ಯದ ಖಜಾನಾಧಿಕಾರಿಯವರು ಪುತ್ತೂರಿಗೆ ಹೋಗಲೆಂದು ಸುಳ್ಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದರು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ತಂದು ಸುಳ್ಯದಲ್ಲಿರಿಸಿ ಅವರು ಊರಿಗೆ ತೆರಳುವವರಾಗಿದ್ದರು. ಆ ಹೊತ್ತಿಗೆ ಬಸ್ಸಿನೊಳಗೆ ಬಂದ ಮಂಗಳಮುಖಿಯೊಬ್ಬಾಕೆ ಹಣಕ್ಕಾಗಿ ಬೇಡಿಕೆ ಮುಂದಿಟ್ಟಾಗ ಇವರು ಹಣ ಕೊಡಲಿಲ್ಲವೆನ್ನಲಾಗಿದೆ. ಅಲ್ಲಿಂದ ಹೋದಂತೆ ನಟಿಸಿದ ಆಕೆ ಸ್ವಲ್ಪ ಹೊತ್ತಲ್ಲಿ ಹಿಂದಿನಿಂದ ಬಂದು ಖಜಾನಾಧಿಕಾರಿಯವರ ಕಿಸೆಗೆ ಕೈ ಹಾಕಿ ಕಿಸೆಯಲ್ಲಿದ್ದ ಒಂದೂವರೆ ಸಾವಿರ ರೂಪಾಯಿಗಳನ್ನು ಎಳೆದುಕೊಂಡಳು.

ಆಕೆ ಕಿಸೆಗೆ ಕೈ ಹಾಕಿ ಹಣವನ್ನು ಎಳೆಯುವಾಗ ಖಜಾನಾಧಿಕಾರಿಯವರು ಆಕೆಯ ಕೈಯನ್ನು ಹಿಡಿದುಕೊಂಡರು. ಆದರೆ ಆಕೆ ಕೊಸರಿಕೊಂಡು ಕೈಯನ್ನು ಎಳೆದುಕೊಂಡು ಹಣದೊಂದಿಗೆ ಪರಾರಿಯಾದಳು. ಆ ವೇಳೆಗೆ ಬಸ್ಸಲ್ಲಿ ಖಜಾನಾಧಿಕಾರಿ ಒಬ್ಬರೇ ಇದ್ದರು. ಇತರ ಪ್ರಯಾಣಿಕರಾರೂ ಇರಲಿಲ್ಲ.

ಖಜಾನಾಧಿಕಾರಿಯವರು ಪೊಲೀಸರಿಗೆ ವಿಷಯ ತಿಳಿಸಿ ಪೋಲಿಸರು ಬಂದು ಹುಡುಕಾಡಿದರೂ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ ಮಂಗಳಮುಖಿ ಯಾರೆಂದು ಪತ್ತೆ ಮಾಡಲು ಸಾಧ್ಯವಾಗಲಿಲ್ಲವೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *