ಕಾರ್ಕಳ: ಅಪ್ರಾಪ್ತೆ ಮೇಲೆ ಅತ್ಯಾಚಾರ – ಪ್ರಕರಣ ದಾಖಲು

ಕಾರ್ಕಳ: ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿ ಬೆದರಿಸಿ , ಹಲ್ಲೆ ಮಾಡಿದ ಆರೋಪಿ ವಿರುದ್ದ ಕಾರ್ಕಳ ನಗರ ಠಾಣೆಯಲ್ಲಿ ಸೆ.23ರ ಗುರುವಾರ ಪ್ರಕರಣ ದಾಖಲಾಗಿದೆ.

Ad Widget ... ..

ಕಾರ್ಕಳದ ಬಂಗ್ಲೆಗುಡ್ಡೆಯ ನಿಯಾಜ್ ಪ್ರಕರಣ ಆರೋಪಿ. ಈತ ದೂರುದಾರರು ಬಾಲಕಿ ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಕಾಲ್ ಮಾಡಿದ್ದು ಮಾತನಾಡಿದಾಗ ತಪ್ಪಿ ಕರೆ ಬಂದಿದ್ದಾಗಿ ತಿಳಿಸಿ , ಬಳಿಕ ಪದೇ ಪದೇ ಕರೆ ಮಾಡಿ ಸಲುಗೆ ಬೆಳೆಸಿದ್ದ.

Ad Widget

ಕಳೆದ ವರ್ಷ ಮೇ. 3೦ ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ ಇಲ್ಲದ ಸಮಯ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆ ಬಳಿಕವೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಸೆ. ೨೩ ರಂದು ತನ್ನ ಜೊತೆ ಬರಬೇಕೆಂದು ಬಲವಂತ ಮಾಡಿ ಕಾರ್ಕಳ ಬಸ್ ಸ್ಟಾಂಡ್‌ನಿಂದ ಮೋಟಾರ್ ಸೈಕಲಿನಲ್ಲಿ ಪತ್ತೊಂಜಿಕಟ್ಟೆ ಸಾಮಿಲ್ ಬಳಿ ಕರೆದುಕೊಂಡು ಹೋಗಿ ಕೈಯಿಂದ ಕೆನ್ನೆಗೆ ಹೊಡೆದು ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

Leave a Comment

Your email address will not be published. Required fields are marked *