Ad Widget .

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ| 60ಸಾವಿರ ಗಡಿ ದಾಟಿ ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಷೇರು ಮಾರುಕಟ್ಟೆ ಶುಕ್ರವಾರ ಹೊಸ ಇತಿಹಾಸ ಸೃಷ್ಟಿಸಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 338 ಅಂಕಗಳ ಜಿಗಿತದೊಂದಿಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್​ 60 ಸಾವಿರ ಗಡಿ ದಾಟಿದೆ. ಭಾರತೀಯ ಷೇರು ಮಾರುಕಟ್ಟೆ ಇದೇ ಮೊದಲ ಬಾರಿಗೆ 60 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 100 ಅಂಕಗಳ ಜಿಗಿತದೊಂದಿಗೆ ದಾಖಲೆಯ 17,923.35 ನಲ್ಲಿ ವಹಿವಾಟು ನಡೆಸುತ್ತಿದೆ. ಗುರುವಾರ 958 ಪಾಯಿಂಟ್​ಗಳ ಏರಿಕೆ ಕಂಡು ಸೆನ್ಸೆಕ್ಸ್ 59,885ಕ್ಕೆ ಏರಿಕೆಯಾಗಿತ್ತು. ಮತ್ತು ನಿಫ್ಟಿ 17.823 ಮಟ್ಟದಲ್ಲಿ 276 ಪಾಯಿಂಟ್​ಗಳ ಏರಿಕೆ ಕಂಡಿತ್ತು.

Ad Widget . Ad Widget . Ad Widget .

ಫೆಬ್ರವರಿ 3 ರಂದು ಷೇರು ಸೆನ್ಸೆಕ್ಸ್​ 50,000 ಗಡಿಯನ್ನ ದಾಟಿತ್ತು. ಇದಾದ ನಂತರ ಅಂದರೆ 8 ತಿಂಗಳೊಳಗೆ 10,000 ಅಂಕಗಳಷ್ಟು ಜಿಗಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಷೇರು ಮಾರುಕಟ್ಟೆ ಕುಸಿಯುವ ಮುನ್ಸೂಚನೆಯನ್ನ ತಜ್ಞರು ನೀಡಿಲ್ಲ. ಏಕೆಂದರೆ ವಿದೇಶಿ ಹೂಡಿಕೆದಾರರ ಖರೀದಿ ಮುಂದುವರಿದಿದೆ.

Leave a Comment

Your email address will not be published. Required fields are marked *