ಕಾರ್ಕಳ: ಇಲ್ಲಿನ ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಅದನ್ನು ರಕ್ಷಿಸಿದ್ದಾರೆ.
ಗ್ರಾಮದ ವ್ಯಕ್ತಿಯೊಬ್ಬರ ಖಾಸಗಿ ಸ್ಥಳದಲ್ಲಿನ ಬಾವಿಯೊಂದರಲ್ಲಿ ಬಿದ್ದಿದ ಚಿರತೆಯನ್ನು ಹಗ್ಗ ಇಳಿಸಿ ರೆಸ್ಕ್ಯೂ ಕಾರ್ಯ ಕೈಗೊಂಡ ರಕ್ಷಿಸಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಗಾಣಿಗ, ಅಶ್ವಿತ್ ಕೆ, ರಾಘವೇಂದ್ರ ಕೆ ಅರಣ್ಯ ರಕ್ಷಕರಾದ ಸಂದೀಪ್ ಸಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀರ್, ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
https://youtube.com/shorts/HyAusPrD66U?feature=share
ಚಿರತೆಯು ನೀರಿನಲ್ಲಿಯೇ ಸುಮಾರು 15 ಗಂಟೆಗಳ ಕಾಲ ನೀರಿನಲ್ಲಿಯೇ ಇದ್ದ ಕಾರಣ ನಿತ್ರಾಣ ಗೊಂಡಿದ್ದರಿಂದ ಮೂಡುಬಿದ್ರೆ ಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಪಿಲಿಕುಳ ನಿಸರ್ಗಧಾಮಕ್ಕೆ ರವಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.