Ad Widget .

ಸ್ತನಪಾನಕ್ಕಾಗಿ ಹಠ ಹಿಡಿಯುತ್ತಿದ್ದ ಕಂದಮ್ಮ| ಪಾಪಿ ತಾಯಿಯಿಂದ ನಡೆಯಿತು ಘನಘೋರ ಕೃತ್ಯ|

ಛತ್ತೀಸ್ ಘಡ್: ನಿರಂತರ ಸ್ತನ್ಯಪಾನಕ್ಕಾಗಿ ಹಠ ಹಿಡಿಯುತ್ತಿದ್ದ ಮಗುವಿನ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗುವನ್ನು ಹೊಡೆದು ಹತ್ಯೆ ಮಾಡಿರುವ ಘನಘೋರ ಕೃತ್ಯವೊಂದು ಛತ್ತೀಸ್ ಘಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget .

ಬಾಲ್ಕೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಲ್ಲಾ ಕೇಂದ್ರದಿಂದ 10 ಕಿಮೀ ದೂರದಲ್ಲಿರುವ ಸೆಕ್ಟರ್ -5 ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಮಗುವನ್ನು ಹತ್ಯೆಗೈದ ಮಹಿಳೆ 2014ರಿಂದಲೂ ಮಾನಸಿಕ ರೋಗದಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಸಿದ್ದಾರೆ.

ಹಾಲಿಗಾಗಿ ಮಗು ನಿರಂತರವಾಗಿ ಹಠ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತ ಮಹಿಳೆ ಮಗುವಿನ ತಲೆಯನ್ನು ನೆಲಕ್ಕೆ ಚಚ್ಚಿದ್ದಾಳೆ. ಇದರಿಂದ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ

Leave a Comment

Your email address will not be published. Required fields are marked *