ಕಡಬ:ಕಾಲೇಜು ವಿದ್ಯಾರ್ಥಿ ನಾಪತ್ತೆ| ಅಪಹರಣ ಶಂಕೆ, ಪೊಲೀಸ್ ದೂರು- ಸಂಬಂಧಿಕರ ಮನೆಯಲ್ಲಿ ಪತ್ತೆ|

ಕಡಬ: ಇಲ್ಲಿನ ಸಮೀಪದ ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ನಡೆದಿದೆ. ನಿಗೂಢವಾಗಿ ನಾಪತ್ತೆಯಾಗಿರುವ ವಿದ್ಯಾರ್ಥಿ ಕುರಿತು ಅಪಹರಣ ಆಗಿರಬಹುದೆಂದು ಶಂಕಿಸಿ ಕಡಬ ಠಾಣೆಯಲ್ಲಿ ಪ್ರಕರಣ ದ ದಾಖಲಾಗಿತ್ತು. . ದೂರಿನ ಬಳಿಕ ತ‌ನಿಖೆ ನಡೆಸಿದ‌ ಪೊಲೀಸರಿಗೆ ಆತ ಬೆಂಗಳೂರಿನಲ್ಲಿ ‌ತನ್ನ ಸಂಬಂಧಿಕರ ಮನೆಯಲ್ಲಿ ‌ಇರುವುದು ಗೊತ್ತಾಗಿದೆ.

Ad Widget ... ..

ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕಮಗಳೂರು ನಿವಾಸಿ ಅಂಜನ್ ಸಿ.ಎಂ. ಎಂಬಾತನೇ ಕಾಣೆಯಾಗಿರುವ ವಿದ್ಯಾರ್ಥಿ. ಈತ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಲಾಗಿತ್ತು. ಆದರೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅಂಜನ್ ನನ್ನು ಅಪಹರಿಸಿರಬಹುದು ಸಂಶಯ ವ್ಯಕ್ತಪಡಿಸಿ ಹಾಸ್ಟೆಲ್ ಮ್ಯಾನೇಜರ್ ಕಡಬ ಠಾಣೆಗೆ ದೂರು ನೀಡಿದ್ದರು.

Ad Widget

Leave a Comment

Your email address will not be published. Required fields are marked *