Ad Widget .

ಗಂಭೀರ ಚರ್ಚೆವೇಳೆ ಜಾರಿದ ಪಂಚೆ| ಸಿದ್ದು ಪಂಚೆಪ್ರಸಂಗಕ್ಕೆ ಸಾಕ್ಷಿಯಾದ ಸದನ

ಬೆಂಗಳೂರು: ವಿಧಾನಸಭೆ ಕಲಾಪ ಅಂದಮೇಲೆ ಅಲ್ಲಿ ಜನಪ್ರತಿನಿಧಿಗಳು ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿರುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಾಕಷ್ಟು ಗಂಭೀರ ವಿಚಾರಗಳ ಬಗ್ಗೆ ವಾದ ಪ್ರತಿವಾದ ನಡೆಯುತ್ತದೆ. ಆದರೆ ಇಂದು ನಡೆದ ಕಲಾಪವು ಹಾಸ್ಯಪ್ರಸಂಗಕ್ಕೆ ಸಾಕ್ಷಿಯಾಗಿದೆ.

Ad Widget . Ad Widget .

ಕಲಾಪದಲ್ಲಿ ಅತ್ಯಾಚಾರದ ವಿಚಾರವಾಗಿ ಸಿದ್ದರಾಮಯ್ಯ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಅವರ ಪಂಚೆ ಕಳಚಿ ಹೋಗಿತ್ತು. ಕೂಡಲೇ ತಮ್ಮ ಸೀಟಿನಿಂದ ಎದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪಂಚೆ ಕಳಚಿರುವ ಬಗ್ಗೆ ಸಿದ್ದರಾಮಯ್ಯಗೆ ಕಿವಿಯಲ್ಲಿ ಗುಟ್ಟಾಗಿ ಹೇಳಿದರು. ಆದರೆ ಸಿದ್ದರಾಮಯ್ಯ ಮಾತ್ರ ಬಹಿರಂಗವೇ ಈ ವಿಚಾರವನ್ನು ಹೇಳಿದ್ದಾರೆ.

Ad Widget . Ad Widget .

ಹೊಟ್ಟೆ ದಪ್ಪ ಆಗಿ ನನ್ನ ಪಂಚೆ ಕಳಚಿದೆ ಈಶ್ವರಪ್ಪ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಪಂಚೆ ಸರಿಮಾಡಿಕೊಳ್ತಿದ್ದ ವೇಳೆ ಈ ಕಾಮಿಡಿಯಲ್ಲಿ ಮಧ್ಯಪ್ರವೇಶಿಸಿದ ರಮೇಶ್​ ಕುಮಾರ್​ ನಮ್ಮ ಅಧ್ಯಕ್ಷರು ಗುಟ್ಟಾಗಿ ಹೇಳಿದ್ದನ್ನು ನೀವು ಊರೆಲ್ಲ ಹೇಳಿ ಅವರ ಪ್ರಯತ್ನ ವ್ಯರ್ಥ ಮಾಡಿದಿರಲ್ಲ ಎಂದು ನಕ್ಕಿದ್ದಾರೆ.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಮೊದಲೆಲ್ಲ ನನ್ನ ಪಂಚೆ ಕಳಚುತ್ತಿರಲಿಲ್ಲ. ಆದರೆ ಈಗ ಕೊರೊನಾ ಬಂದಮೇಲೆ ಮೂರ್ನಾಲ್ಕು ಕೆಜಿ ದಪ್ಪ ಆಗಿದ್ದೇನೆ. ಹೀಗಾಗಿ ನನಗೆ ಹೊಟ್ಟೆ ಬಂದಿದೆ. ಇದೇ ಕಾರಣಕ್ಕೆ ಪಂಚೆ ನಿಲ್ಲುತ್ತಿಲ್ಲ ಎಂದು ಹೇಳಿದ್ರು. ಇದಕ್ಕಾಗಿಯೇ ನಾನು ಜುಬ್ಬ ಹೊಲಿಸಿಕೊಳ್ತೇನೆ. ಪಂಚೆ ಕಳಚಿ ಹೋದಾಗ ರಕ್ಷಣೆ ಸಿಗುತ್ತದೆ ಎಂದು ಹೇಳಿದ್ರು. ಸಿದ್ದರಾಮಯ್ಯರ ಪಂಚೆ ಪ್ರಸಂಗಕ್ಕೆ ಇಡೀ ಸದನವೇ ಕೆಲ ಕಾಲ ನಗೆಗಡಲಲ್ಲಿ ತೇಲಿತ್ತು.

Leave a Comment

Your email address will not be published. Required fields are marked *