Ad Widget .

ಕುಕ್ಕೆ: ಸರ್ಪಸಂಸ್ಕಾರ ಸೇರಿದಂತೆ ಎಲ್ಲಾ ಸೇವೆಗಳಿಗೂ ಅವಕಾಶ

Ad Widget . Ad Widget .

ಸುಬ್ರಹ್ಮಣ್ಯ: ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲ ಸೇವೆಗಳನ್ನು ನಿಗದಿತ ಸಂಖ್ಯೆಯಲ್ಲಿ ನಡೆಸಲು ಮತ್ತು ಕೋವಿಡ್‌ ಮುಂಜಾಗ್ರತೆಯೊಂದಿಗೆ ಭಕ್ತರ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Ad Widget . Ad Widget .

ದಿನಕ್ಕೆ 100 ಸರ್ಪ ಸಂಸ್ಕಾರ, 20 ನಾಗಪ್ರತಿಷ್ಠೆ, 4 ಪಂಚಾಮೃತ ಅಭಿಷೇಕಕ್ಕೆ ಅವಕಾಶ ನೀಡಲಾಗಿದೆ. ಪ್ರತಿ ಸೇವೆಯಲ್ಲಿ ಇಬ್ಬರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಶ್ಲೇಷ ಬಲಿ ಸೇವೆಯು ಪ್ರತಿ ದಿನ ನಾಲ್ಕು ಪಾಳಿಗಳಲ್ಲಿ ನಡೆಯಲಿದ್ದು, ಒಂದು ಪಾಳಿಯಲ್ಲಿ 70 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಶ್ಲೇಷ ಬಲಿಯು ಬೆಳಿಗ್ಗೆ 7ರಿಂದ 8.15, 8.30ರಿಂದ 9.45, 10ರಿಂದ 11.15 ಹಾಗೂ ಸಂಜೆ 5ರಿಂದ 6.30ರ ಸಮಯದಲ್ಲಿ ನಡೆಯಲಿದೆ.

2020ರಿಂದ ಮುಂಗಡ ಬುಕ್ಕಿಂಗ್ ಆಗಿರುವ ಸರ್ಪಸಂಸ್ಕಾರ ಸೇವಾ ಭಕ್ತರಿಗೆ ಆದ್ಯತೆ ನೀಡಲಾಗಿದೆ. ಸರ್ಪ ಸಂಸ್ಕಾರ ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಕೋವಿಡ್‌ ತಡೆ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

Leave a Comment

Your email address will not be published. Required fields are marked *