Ad Widget .

ಶಾಲಾ‌ಗ್ರೂಪ್ ನಲ್ಲಿ ಅಶ್ಲೀಲ ದೃಶ್ಯಾವಳಿ| ಪೋಷಕರು, ಮಕ್ಕಳು ಕಂಗಾಲು

ಚೆನ್ನೈ: ತಮಿಳುನಾಡಿನ ಆವಡಿ ಉಪನಗರದ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೊಂದು ವಿಚಿತ್ರ ಪ್ರಕರಣ ತನ್ನ 11 ವರ್ಷದ ಮಗನ ಶಾಲಾ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ಕಂಟೆಂಟ್ ಒಂದನ್ನು ಶೇರ್ ಮಾಡಿದ್ದರಿಂದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿ ಮುನುಸಾಮಿ ಎಂಬುವರನ್ನು ಬಂಧಿಸಲಾಗಿದೆ. ಅವರ ಮಗ ಖಾಸಗಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ. ಆನ್‌ಲೈನ್ ಶಿಕ್ಷಣಕ್ಕಾಗಿ ಮಗುವಿನ ಶಾಲೆಯು ವಾಟ್ಸಾಪ್‌ನಲ್ಲಿ ಒಂದು ಗುಂಪನ್ನು ರಚಿಸಿತ್ತು. ವಾಟ್ಸಾಪ್ ಗುಂಪಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸದಸ್ಯರಾಗಿದ್ದರು.

Ad Widget . Ad Widget .

ಶನಿವಾರ ಸಂಜೆ, ಮುನುಸಾಮಿ ಅವರು ವಾಟ್ಸ್‌ಆಯಪ್ ಗ್ರೂಪ್‌ನಲ್ಲಿ ಲೈಂಗಿಕ ಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಅವರು ಈ ವಿಷಯದಲ್ಲಿ ಶಾಲಾ ಆಡಳಿತಕ್ಕೆ ತಿಳಿಸಿದ್ದಾರೆ. ಶಾಲಾ ಮಂಡಳಿ ದೂರು ನೀಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *