Ad Widget .

ಸಿನಿಮಾ ಸ್ಟೈಲ್‌ನಲ್ಲಿ ಮುತ್ತು ಕೊಟ್ಟವನನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ತೆಲುಗಿನ ಗೀತಾ-ಗೋವಿಂದಂ ಸಿನಿಮಾ ಮಾದರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಮುತ್ತು ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಬಳ್ಳಾರಿ ಮೂಲದ ಮಧುಸೂದನ್ ರೆಡ್ಡಿ (25) ಬಂಧಿತ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ರೆಡ್ಡಿ, ವಿಜಯನಗರದಲ್ಲಿ ನೆಲೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಪ್ರತಿಷ್ಠಿತ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ಸೆ.13ರ ಬೆಳಗಿನ ಜಾವ ಟಿ. ದಾಸರಹಳ್ಳಿ ಬಳಿ ಬಸ್ ಬಂದಾಗ ಮಲಗಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟು ಬಸ್‌ನಿಂದ ಯುವಕ ಪರಾರಿಯಾಗಿದ್ದ.

ನೊಂದ ಯುವತಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಯಾರೆಲ್ಲ ಹತ್ತಿದ್ದಾರೆ ಎಂಬುದರ ಕುರಿತು ಸಿಸಿ ಕ್ಯಾಮರಾ ಮತ್ತು ಬಸ್ ಟಿಕೆಟ್ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಆಧರಿಸಿ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

Leave a Comment

Your email address will not be published. Required fields are marked *