Ad Widget .

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ?

ತುಮಕೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣಕ್ಕೆ ಮರುಜೀವ ಬಂದಿದ್ದು ಶಾಕಿಂಗ್ ತಿರುವು ಪಡೆದುಕೊಂಡಿದೆ‌. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಲಾಡ್ಜ್ ಒಂದರ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವೊಂದು ಸಿಕ್ಕಿಬಿದ್ದಿದೆ.

Ad Widget . Ad Widget .

ರಸ್ತೆಯಲ್ಲಿ ಬಿಸಾಕಿದ್ದ ರಾಶಿ ರಾಶಿ ಕಾಂಡೋಮ್ ಗಳ ಮೂಲ ಹುಡುಕಲು ಖಚಿತ ಮಾಹಿತಿ ಆಧಾರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿದ್ದಾರೆ.

Ad Widget . Ad Widget .

ಲಾಡ್ಜ್ ನ ರೂಮ್ ಒಂದರ ಮಿರರ್ ಕೆಳಭಾಗದಲ್ಲಿ ಇದ್ದ ಸ್ಟ್ಯಾಂಡ್ ನ್ನು ಒಡೆದಾಗ ಪೊಲೀಸರೇ ಶಾಕ್ ಆಗಿದ್ದು, ಸ್ಟ್ಯಾಂಡ್ ರೂಪದಲ್ಲಿ ಸುರಂಗಮಾರ್ಗವನ್ನೇ ಕೊರೆದಿರುವುದು ಪತ್ತೆಯಾಗಿದೆ. ಲಾಡ್ಜ್ ನ ಸುರಂಗದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಯುವತಿಯರು ಹಾಗೂ ಓರ್ವ ಪುರುಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ಯುವತಿ ಪರಾರಿಯಾಗಿದ್ದಾಳೆ.

ಲಾಡ್ಜ್ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಲಾಡ್ಜ್ ನಲ್ಲಿ ಸುರಂಗ ಕೊರೆದು ಯುವತಿಯರನ್ನು ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಪೊಲೀಸರು ದಾಳಿಗೆ ಮುಂದಾದ ಸಮಯದಲ್ಲಿ ಯುವತಿಯರನ್ನು ಹಾಗೂ ಪುರುಷರನ್ನು ಈ ಸುರಂಗದಲ್ಲಿ ಬಚ್ಚಿಡಲಾಗುತ್ತಿತ್ತು ಎಂಬ ವಿಚಾರ ಬಯಲಾಗಿದೆ.

Leave a Comment

Your email address will not be published. Required fields are marked *