ಸುಳ್ಯ: ಇಲ್ಲಿನ ಕೋಲ್ಚಾರ್ ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳನ್ನು ತಾಲಿಬಾನಿಗಳು ಎಂದು ಹೇಳಿದ ಎಸ್ ಡಿಎಂಸಿ ಅಧ್ಯಕ್ಷರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾದ ಘಟನೆ ನಡೆದಿದೆ. ಎಸ್ ಡಿಎಂಸಿ ಅಧ್ಯಕ್ಷರನ್ನು ಸುದರ್ಶನ ಪಾತಿಕಲ್ಲು ಎಂದು ಗುರುತಿಸಲಾಗಿದೆ.
ಸುದರ್ಶನ್ ಶಾಲೆಗೆ ಬಂದ ವೇಳೆ ಮೈದಾನದಲ್ಲಿ ಆಟವಾಡುತಿದ್ದ ವಿದ್ಯಾರ್ಥಿಗಳಲ್ಲಿ ಒಂದು ಸಮುದಾಯದ ಮಕ್ಕಳನ್ನು ಟಾರ್ಗೆಟ್ ಮಾಡಿ ತಾಲಿಬಾನಿಗಳು ಇಲ್ಲಿ ಆಟ ಆಡುವುದು ಯಾಕೆ ಎಂದು ಏರುಧ್ವನಿಯಲ್ಲಿ ಹೇಳಿದ್ದಾರೆ. ಅದಲ್ಲದೆ ಆಟ ಆಡಲು ಬಿಡದೆ ನಿಂದಿಸಿ ಬೆದರಿಸಿರುವ ಘಟನೆ ಕೂಡ ನಡೆದಿದ್ದು. ಈ ಕುರಿತು ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದರ್ಶನ್ ಏರುಧ್ವನಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಕ್ಕಳು ತಮ್ಮಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅದಲ್ಲದೆ ಈಗ ಈ ಪರಿಸರದಲ್ಲಿ ಆಕ್ರೋಶ ಭುಗಿಲೆದ್ದ ಕಾರಣ ಭಯದ ವಾತಾವರಣ ಸೃಷ್ಟಿಯಾಗಿ ಎಲ್ಲರೂ ಕೂಡ ಗಲಾಟೆಯಾಗಬಹುದೆಂದು ಭಯಭೀತಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಪೋಷಕರಿಗೆ ಶಾಲೆಗೆ ಕಲಿಸಲು ಭಯವಾಗುತ್ತಿದ್ದು ಪೋಷಕರು ಸುಳ್ಯ ಪೊಲೀಸ್ ಠಾಣಾಧಿಕಾರಿಗಳಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೊತೆಗೆ ಘಟನೆ ಕುರಿತು ಸುಳ್ಯ ವೃತ್ತ ನಿರೀಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದಾರೆ. ಮಕ್ಕಳ ಪೊಷಕರು ಎಸ್ ಡಿಎಂಸಿ ಅಧ್ಯಕ್ಷರನ್ನು ಬದಲಿಸದೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಅಥವಾ ನಮ್ಮಮಕ್ಕಳ ಟಿಸಿ ಕೊಡಿ ನಾವು ಬೇರೆ ಶಾಲೆಗೆ ಮಕ್ಕಳನ್ನು ಕಳುಹಿಸುತ್ತೇವೆ ಎಂಬ ತೀರ್ಮಾನಕ್ಕೆ ಬಂದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಕುರಿತಂತೆ ದೂರು ದಾಖಲಿಸಿಕೊಂಡಿರುವ ಪೋಲಿಸ್ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
sullianews, sudarshan pathikallu