Ad Widget .

ರಾಜ್ಯದಲ್ಲಿ ‘ಆಪರೇಷನ್ ಹಸ್ತ’ದ ದಾಳ ಉರುಳಿಸ್ತಿದೆ ಕಾಂಗ್ರೆಸ್| ಆತಂಕ ವ್ಯಕ್ತಪಡಿಸಿದ ಯಡಿಯೂರಪ್ಪ| ಡಿಕೆಶಿ ಕುರಿತು ಅಲರ್ಟ್ ಆಗಿರಲು ಮಾಜಿ ಸಿಎಂ ಸೂಚನೆ|

Ad Widget . Ad Widget .

ಬೆಂಗಳೂರು: ಯಾರು ಕೂಡ ವಿಪಕ್ಷಗಳನ್ನ ಹಗುರವಾಗಿ ತಗೋಬೇಡಿ. ಕಾಂಗ್ರೆಸಿನವರು ಹೊಂಚು ಹಾಕಿ ಕುಳಿತಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರನ್ನು ಸಂಪರ್ಕಿಸುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷವೂ ಬಲಗೊಳ್ಳಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Ad Widget . Ad Widget .

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಈ ಮಾತು ಹೇಳಿದ್ದಾರೆ. ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಬೇಕಿದೆ. ಅದಕ್ಕಾಗಿ ತಳಮಟ್ಟದಿಂದಲೇ ಕೆಲಸ ಆಗಬೇಕಾಗಿದೆ. ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಮತಗಳನ್ನು ಸೆಳೆಯಲು ಅವರ ನಾಯಕರನ್ನು ನಮ್ಮಲ್ಲಿಗೆ ತರಬೇಕಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 141 ಸೀಟನ್ನು ನಾವು ಗೆಲ್ಲಬೇಕಿದೆ. ಇದೇನು ಕಷ್ಟವಲ್ಲ. ಹಾಗೆಂದು ಕೇವಲ ಮೋದಿಯನ್ನು ನಂಬಿ ಕೂತರೆ ಆಗುವುದಿಲ್ಲ. ಎಲ್ಲ ಚುನಾವಣೆಗಳಲ್ಲಿ ಮೋದಿ ಅಲೆ ಕೆಲಸ ಮಾಡಲ್ಲ ಎಂದು ಹೇಳಿದರು.

ಕಳೆದ 15 ದಿನಗಳಲ್ಲಿ ನಮ್ಮ‌ ಶಾಸಕರನ್ನು ಸಂಪರ್ಕಿಸಲು ಡಿಕೆಶಿ ಯತ್ನಿಸುತ್ತಿದ್ದಾರೆ. ಒಂದಿಬ್ಬರು ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಅನ್ನೋದು ಗೊತ್ತು. ಡಿಕೆಶಿ ತಮ್ಮ ಪಕ್ಷವನ್ನು ಬಲಪಡಿಸಲು ಇಂತಹ ಪ್ರಯತ್ನ ಮಾಡಿದ್ದಾರೆ. ಆದರೆ ಯಾರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಹೋಗಲ್ಲ ಎನ್ನುವುದನ್ನು ನಂಬುತ್ತೇನೆ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ. ಬದಲಿಗೆ, ಅನೇಕ ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರ್ತಾರೆ ಎಂದು ಹೇಳಿದರು.

ದಾವಣಗೆರೆಯಲ್ಲಿ ನಡೆದ‌ ಕಾರ್ಯಕಾರಣಿಯ ಬಳಿಕ ಇಂದು ಬೆಂಗಳೂರಿನಲ್ಲಿ ‌ಇದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ‌ ಮಾಜಿ ಸಿ ಎಂ ಯಡಿಯೂರಪ್ಪ ಆಪರೇಶನ್ ಹಸ್ತದ‌ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪಕ್ಷವನ್ನು ಗಟ್ಟಿಗೊಳಿಸಲು ಭಿನ್ನ ಆಯಾಮಗಳನ್ನು ಹುಡುಕುತ್ತಿರುವ ಎರಡೂ ಪಕ್ಷಗಳ ಮುಖಂಡರು ಚುನಾವಣೆಗೆ ಮುನ್ನವೇ ಅಲರ್ಟ್ ಆಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಕ್ರಾಂತಿಗೆ ಕಾರಣವಾಗಬಹುದೇ? ಕಾಲ ಉತ್ತರಿಸಬೇಕಿದೆ.

Leave a Comment

Your email address will not be published. Required fields are marked *