ಮಂಗಳೂರು: ಅಪರಿಚಿತ ದುಷ್ಕರ್ಮಿಯೊಬ್ಬ ಮೂವರು ಮಹಿಳೆಯರ ಮೇಲೆ ತಲ್ವಾರ್ ದಾಳಿ ನಡೆಸಿದ ಘಟನೆ ನಗರದ ಕರಂಗಲಪಾಡಿ ಬಳಿ ಸೆ.20ರಂದು ನಡೆದಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕ್ಷಣ ಮತ್ತು ತರಭೇತಿ ಸಂಸ್ಥೆಯಲ್ಲಿ ಕೆಲಸ ಮಾಡುವ ನಿರ್ಮಲಾ, ರಿನಾ ರಾಯ್, ಗುಣವತಿ ಮೇಲೆ ತಲ್ವಾರ್ ದಾಳಿ ಗೆ ಒಳಗಾದವರು .ಇವರ ಪೈಕಿ ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದ್ದು, ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿದ್ದಾರೆ.
ಬಲ್ಲಮೂಲಗಳಿಂದ ಬಂದ ಮಾಹಿತಿ ಪ್ರಕಾರ ಉಪನ್ಯಾಸಕಿಯೊಬ್ಬರಿಗೆ ಗಿಫ್ಟ್ ಕೊಡಲಿದೆ ಎಂದು ಹೇಳಿಕೊಂಡು ಮಾತು ಆರಂಭಿಸಿದ ಅಪರಿಚಿತ ದುಷ್ಕರ್ಮಿ ಏಕಾಏಕಿ ಚೀಲದಲ್ಲಿದ್ದ ಮಚ್ಚು ತೆಗೆದು ಏಕಾಏಕಿ ಸಿಬಂದಿ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಮಹಿಳೆಯರ ಕಿರುಚಾಟ ಕೇಳಿ ಸಾರ್ವಜನಿಕರು, ಜೈಲಿನ ಸಿಬ್ಬಂದಿಗಳು ಓಡಿ ಬಂದಿದ್ದು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೇಲ್ನೋಟಕ್ಕೆ ಈ ಘಟನೆ ಯಾಕೆ ಸಂಭವಿಸಿದೆ ಎಂದು ತಿಳಿದುಬಂದಿಲ್ಲ. ಯುವಕ ಯಾರು, ಈ ರೀತಿ ಯಾಕೆ ಮಾಡಿದ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.