Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸೆ.19 ರಿಂದ ಸೆ.25ರ ವರೆಗಿನ ಮೇಷಾಧಿ ದ್ವಾದಶ ರಾಶಿಗಳ ವಾರಭವಿಷ್ಯ ಇಲ್ಲಿದೆ,

Ad Widget . Ad Widget .

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಭೂ ವ್ಯವಹಾರದಲ್ಲಿ ಹೆಚ್ಚು ಶ್ರಮ ವಹಿಸಿದರೂ ಲಾಭ ಕಡಿಮೆ ಇರುತ್ತದೆ. ಕೊಟ್ಟ ಸಾಲದಲ್ಲಿ ಸ್ವಲ್ಪ ಭಾಗ ವಾಪಸ್ಸು ಬರುತ್ತದೆ. ವಿದೇಶಿ ಹಣ ಬದಲಾವಣೆಯನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ರಾಜಕೀಯ ರಂಗದಲ್ಲಿರುವ ಕೆಲವರಿಗೆ ಸೂಕ್ತ ಸ್ಥಾನಮಾನ ಹತ್ತಿರದಲ್ಲೇ ದೊರೆಯುವ ಸಾಧ್ಯತೆ ಇದೆ. ಮನೆಯ ಜವಾಬ್ದಾರಿಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡವೇ ಬೇಡ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಕಷ್ಟು ತಂತ್ರಗಳನ್ನು ಅನುಸರಿಸುವಿರಿ. ಮನೆ ಕಟ್ಟುವ ವಿಚಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವನ್ನು ಕಾಣಬಹುದು. ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಸ್ಥಾನಗಳಲ್ಲಿ ಸ್ವಲ್ಪ ಗೊಂದಲ ಮತ್ತು ಕಿರಿಕಿರಿ ಇರುತ್ತದೆ.

Ad Widget . Ad Widget .

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರವಾದ ವಾತಾವರಣ ದೊರೆಯಲಿದೆ. ವೈರಿಗಳ ವೈಯಕ್ತಿಕ ಕಿರುಕುಳದಿಂದ ಮುಕ್ತರಾಗುವಿರಿ. ಚಿನ್ನದ ಆಭರಣಗಳನ್ನು ಕೊಳ್ಳಲು ಮುಂದಾಗುವಿರಿ. ಹೆಚ್ಚಿನ ಪರಿಶ್ರಮದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಕಾಣಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸಂಬಂಧ ಗಟ್ಟಿಗೊಳ್ಳುವ ಅವಕಾಶವಿದೆ. ಗೃಹ ಆಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಯೋಗವಿದೆ. ಹಿರಿಯರ ಸಹಕಾರದಿಂದ ಹೊಸ ಆದಾಯದ ಮೂಲಗಳನ್ನು ಶೋಧಿಸುವಿರಿ. ಸಂಗಾತಿಯಿಂದ ನಿಮಗೆ ಉತ್ತಮ ಉಡುಗೊರೆ ದೊರೆಯುತ್ತದೆ. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯದಿಂದ ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಸರಾಗವಾಗಿ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂತೋಷಪಡುವಿರಿ. ಭೂಮಿಯ ವ್ಯವಹಾರ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿರುವ ಮಕ್ಕಳನ್ನು ನೋಡಲು ಹೋಗುವವರು ಸ್ವಲ್ಪದಿನ ಕಾಯಬೇಕಾದ ಪರಿಸ್ಥಿತಿ ಇದೆ .

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ಕುಟುಂಬದಲ್ಲಿನ ಅಶಾಂತಿಯನ್ನು ಕುಳಿತು ಮಾತನಾಡಿ ಪರಿಹರಿಸಿಕೊಳ್ಳುವುದು ಒಳ್ಳೆಯದು. ಕೆಲವು ರಾಜಕಾರಣಿಗಳಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳಿಗೆ ಪರಿಚಿತರ ಮೂಲಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯಾಗಿ ಆದಾಯವೂ ಹೆಚ್ಚುತ್ತದೆ. ವಕೀಲಿ ವೃತ್ತಿಯನ್ನು ಮಾಡುತ್ತಿರುವವರಿಗೆ ಹೆಚ್ಚು ದಾವೆಗಳು ದೊರೆತು ಹೆಸರು ಮತ್ತು ಹಣ ಎರಡೂ ಬರುತ್ತದೆ. ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ನಿಯುಕ್ತಿಗೊಳ್ಳುವ ಸಂಭವವಿದೆ. ಗುಪ್ತವಾಗಿ ಆಸ್ತಿ ಖರೀದಿಯನ್ನು ಮಾಡಲು ಯತ್ನಿಸುತ್ತೀರಿ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿರುವವರಿಗೆ ಉತ್ತಮ ಸೌಕರ್ಯಗಳು ದೊರೆಯುತ್ತವೆ. ವಾಹನ ಮಾರಾಟ ಮಾಡುವವರ ವ್ಯವಹಾರ ಅಭಿವೃದ್ಧಿಯತ್ತ ಸಾಗುತ್ತದೆ. ಕಳೆದುಕೊಂಡಿದ್ದ ವಸ್ತುವೊಂದು ಮತ್ತೆ ದೊರೆತು ಸಂತಸವಾಗುತ್ತದೆ. ಧನದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಬೆನ್ನುನೋವು ಇರುವವರಿಗೆ ಅದರ ಯಾತನೆ ಹೆಚ್ಚಾಗಬಹುದು. ವೈದ್ಯಕೀಯ ರಂಗದಲ್ಲಿರುವವರಿಗೆ ಉತ್ತಮ ಆದಾಯದ ಸೂಚನೆಯಿದೆ. ಹಿರಿಯರು ತಮ್ಮ ಜವಾಬ್ದಾರಿಗಳನ್ನು ಕಿರಿಯರಿಗೆ ವರ್ಗಾಯಿಸಿ ನೆಮ್ಮದಿ ಕಾಣುವರು. ಸಂಗಾತಿಯಿಂದ ಉತ್ತಮ ಸಹಕಾರವನ್ನು ನಿರೀಕ್ಷಿಸಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿಸಿದಷ್ಟು ಆದಾಯ ಬರುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರನ್ನು ಸಾಮಾಜಿಕವಾಗಿ ಜನರು ಗುರುತಿಸಿ ಅಭಿನಂದನೆ ಸಲ್ಲಿಸುವರು. ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದಿರುವುದು ಒಳ್ಳೆಯದು. ವಿದ್ಯಾರ್ಥಿಗಳ ವ್ಯಾಸಂಗದ ಹಾದಿ ಸುಗಮವಾಗಲಿದೆ. ನಿಮ್ಮ ಕೊಂಕು ಮಾತುಗಳು ನಿಮಗೆ ಮುಳುವಾಗುವ ಲಕ್ಷಣಗಳಿವೆ. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು. ಶೀತಬಾಧೆ ಇರುವವರು ಎಚ್ಚರವಹಿಸಿರಿ. ವಿದೇಶಿ ವಸ್ತುಗಳನ್ನು ಮಾರುವವರ ವ್ಯವಹಾರಗಳು ವೃದ್ಧಿಸುತ್ತವೆ. ಖರ್ಚಿಗೆ ಕಡಿವಾಣ ಹಾಕುವುದು ಒಳ್ಳೆಯದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಅನಗತ್ಯ ಮಾತುಕತೆಗಳಲ್ಲಿ ಭಾಗವಹಿಸುವುದು ಬೇಡ. ಯಾರಿಗೋ ನೀತಿ ಹೇಳಲು ಹೋಗಿ ನೀವು ಮುಜುಗರಕ್ಕೀಡಾಗುವ ಸಂದರ್ಭವಿದೆ. ಭೂ ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಸ್ವಲ್ಪ ಎಚ್ಚರ ವಹಿಸಿರಿ. ವೈಯಕ್ತಿಕ ಜೀವನದಲ್ಲಿ ಸಲ್ಪ ಅಭಿವೃದ್ಧಿಯನ್ನು ಕಾಣಬಹುದು. ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವವರು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸಗಟು ವ್ಯಾಪಾರಗಾರರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಬುದ್ಧಿಜೀವಿಗಳಿಗೆ ಭಾಷಣಕ್ಕೆ ವೇದಿಕೆ ದೊರೆತು ಉತ್ತಮ ಪ್ರತಿಕ್ರಿಯೆ ಒದಗುತ್ತದೆ. ಮಧ್ಯವರ್ತಿಗಳಿಗೆ ಉತ್ತಮ ಕಮಿಷನ್ ಹಣ ಬರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಸ್ವಲ್ಪ ಹಣ ಕಾಣೆಯಾಗಿ ಕಷ್ಟನಷ್ಟಗಳನ್ನು ಅನುಭವಿಸುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆಗಾಗಿ ಚಿಂತನೆ ಮಾಡುವಿರಿ. ಸರಿಯಾದ ಉದ್ಯೋಗ ದೊರೆಯುವವರೆಗೆ ಬದಲಾವಣೆಯ ಚಿಂತೆ ಬೇಡ. ಹಣದ ಹರಿವು ಅಷ್ಟು ಪ್ರೋತ್ಸಾಹದಾಯಕವಾಗಿರುವುದಿಲ್ಲ. ನಿಮ್ಮ ಶತ್ರುಗಳನ್ನು ಪತ್ತೆ ಮಾಡಿ ಸರಿಯಾದ ಪಾಠ ಕಲಿಸುವ ಯೋಗವಿದೆ. ಸ್ಥಿರಾಸ್ತಿಯನ್ನು ಕೊಳ್ಳುವ ವಿಷಯದಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ನಿಧಾನವಾಗಿ ಚೇತರಿಕೆ ಕಾಣುತ್ತದೆ. ಸರ್ಕಾರಿ ಮಟ್ಟದ ಕೆಲಸಗಳು ಸರಾಗವಾಗಿ ಆಗುತ್ತವೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ದೊಡ್ಡ ದೊಡ್ಡ ವ್ಯವಹಾರಸ್ಥರ ಸಂಪರ್ಕದಿಂದಾಗಿ ನಿಮ್ಮ ವ್ಯವಹಾರವು ಒಂದು ಸ್ಪಷ್ಟ ತಿರುವನ್ನು ಪಡೆಯುತ್ತದೆ. ನಿಮ್ಮ ಪ್ರಭಾವದಿಂದಾಗಿ ನೆರೆಹೊರೆಯವರ ಸಮಸ್ಯೆಗಳನ್ನು ಪರಿಹರಿಸುವಿರಿ. ಕೋರ್ಟು ಕಚೇರಿ ದಾವೆಯ ವ್ಯವಹಾರಗಳಲ್ಲಿ ನಿಮಗೆ ಅನುಕೂಲಕರ ವಾತಾವರಣವಿರುತ್ತದೆ. ಆದಾಯದಲ್ಲಿ ಕಡಿಮೆ ಇದ್ದರೂ ಖರ್ಚು ಕಡಿಮೆ ಮಾಡಿ ಸರಿದೂಗಿಸುವುದು ಅನಿವಾರ್ಯ. ತಜ್ಞರೊಡನೆ ನಿಮ್ಮ ವ್ಯವಹಾರಗಳ ಬಗ್ಗೆ ಚಿಂತಿಸಿ ಕಾರ್ಯರೂಪಕ್ಕೆ ತರಲು ಯತ್ನಿಸುತ್ತೀರಿ. ಕೃಷಿಕರಿಗೆ ಬೇಕಾದ ಸೌಕರ್ಯ ಮತ್ತು ಸವಲತ್ತುಗಳು ಒದಗುತ್ತವೆ. ಕೆಲವು ರಾಜಕೀಯ ವ್ಯಕ್ತಿಗಳು ಹುದ್ದೆಯ ಬದಲಾವಣೆಯ ಹಂತವನ್ನು ಕಾಣಬಹುದು. ನಿಮ್ಮ ಕಾರ್ಯಕ್ಕೆ ತಾಯಿಯ ಸಹಾಯ ಇರುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವಿದ್ಯಾರ್ಥಿಗಳು ಶ್ರಮವಹಿಸಿ ಮಾಡಿದ ಅಧ್ಯಯನಕ್ಕೆ ಸೂಕ್ತ ಫಲ ದೊರೆಯುತ್ತದೆ. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟದ ಯೋಗವಿದೆ. ಸ್ವಯಂ ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಹೆಚ್ಚಳವನ್ನು ಕಾಣಬಹುದು. ಸಾಲ ಕೊಡುವುದು ಬೇಡ. ಕೊಟ್ಟಲ್ಲಿ ಮೋಸಹೋಗುವ ಸಾಧ್ಯತೆಗಳಿವೆ. ಮನೆಯಲ್ಲಿ ವಸ್ತ್ರಾಭರಣಗಳ ಖರೀದಿ ಬಗ್ಗೆ ಚರ್ಚೆ ನಡೆಯುತ್ತದೆ. ಚಿನ್ನ-ಬೆಳ್ಳಿಯ ವ್ಯಾಪಾರಿಗಳಿಗೆ ವ್ಯವಹಾರ ಕುದುರಿ ಆದಾಯ ಹೆಚ್ಚುತ್ತದೆ. ದವಸಧಾನ್ಯಗಳನ್ನು ಮಾರಾಟ ಮಾಡುವ ವರ್ತಕರಿಗೆ ವ್ಯವಹಾರ ವಿಸ್ತರಣೆ ಇದೆ. ಸಂಗೀತಗಾರರಿಗೆ ಉತ್ತಮ ಶಿಷ್ಯರು ದೊರೆತು ಬಹಳ ಸಂತಸವಾಗುತ್ತದೆ. ಉನ್ನತಾಧಿಕಾರಿಗಳ ನೆರವಿನಿಂದ ಉದ್ಯೋಗದಲ್ಲಿ ಅನುಕೂಲತೆ ಒದಗುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಗೃಹಾಲಂಕಾರ ಸಾಮಗ್ರಿಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಬರುತ್ತದೆ. ಚಿನ್ನಾಭರಣಗಳಿಗೆ ಕುಸುರಿ ಕೆಲಸವನ್ನು ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆಗಳಿವೆ. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಬರಹಗಾರರಿಗೆ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಅವಕಾಶವಿರುತ್ತದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರುವವರಿಗೆ ವಿಪುಲ ಅವಕಾಶವಿರುತ್ತದೆ. ಪ್ರೀತಿಯನ್ನು ನಿಮ್ಮ ಸಂಗಾತಿಯು ತಿರಸ್ಕರಿಸುವ ಲಕ್ಷಣಗಳಿವೆ. ಹೆಣ್ಣುಮಕ್ಕಳಿಗೆ ಹಿರಿಯರಿಂದ ಸೂಕ್ತ ಉಡುಗೊರೆಗಳು ದೊರೆಯಬಹುದು. ಧರ್ಮಕಾರ್ಯಗಳನ್ನು ಮಾಡುವವರಿಗೆ ಜನಬೆಂಬಲ ದೊರೆಯುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಆರ್ಥಿಕ ಸದೃಢತೆಯಿಂದ ಗೃಹ ನಿರ್ಮಾಣ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ಆಶಾಕಿರಣವೊಂದು ಮೂಡಿಬರಲಿದೆ. ಅನಾವಶ್ಯಕ ವ್ಯವಹಾರಗಳಲ್ಲಿ ಅಥವಾ ವಿಚಾರಗಳಲ್ಲಿ ತಲೆ ಹಾಕದಿರುವುದು ಬಹಳ ಉತ್ತಮ. ಮಾತೃವರ್ಗದವರಿಂದ ನಿಮ್ಮ ಕೆಲಸಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿರಿ. ಸಂಗಾತಿಯ ವ್ಯವಹಾರದಲ್ಲಿ ಆದಾಯ ಬರುತ್ತದೆ. ಹೊಸ ರೀತಿಯ ವ್ಯವಹಾರದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಬಹುದು. ನಿಮ್ಮ ವೃತ್ತಿಯಲ್ಲಿ ಹಿತ ಶತ್ರುಗಳು ಕಂಡುಬರುವರು. ಕಬ್ಬಿಣದ ವ್ಯಾಪಾರವನ್ನು ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಕೃಷಿಕರ ಆದಾಯ ಹೆಚ್ಚುವುದು.

ಶುಭಮಸ್ತು

Leave a Comment

Your email address will not be published. Required fields are marked *