Ad Widget .

ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ

Ad Widget . Ad Widget .

ಬೆಂಗಳೂರು: ಕನ್ನಡ ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್‍ಲೈನ್‍ನಲ್ಲೇ ಎಂಗೇಜ್‍ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

Ad Widget . Ad Widget .

ವೈಜಯಂತಿ ಅಡಿಗ ಪ್ರಿಯಕರ ಸೂರಜ್ ಜೊತೆ ಆನ್‍ಲೈನ್‍ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದೆ

.

ಬಿಗ್‍ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದರು. ಪ್ರಿಯಾಂಕಾ ತಿಮ್ಮೇಶ್ ಹಾಗೂ ವೈಜಯಂತಿ ಅಡಿಗ ಒಂದೇ ದಿನ ಮನೆಗೆ ಎಂಟ್ರಿ ಪಡೆದಿದ್ದರು. ಆದರೆ ವೈಜಯಂತಿಗೆ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚು ದಿನ ಇರೋಕೆ ಸಾಧ್ಯವಾಗಿಲ್ಲ. ಪದೇಪದೇ ಕ್ಯಾಮೆರಾ ಬಳಿ ತೆರಳಿ ನನಗೆ ಇಲ್ಲಿ ಇರೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಕೊನೆಗೆ ವೀಕೆಂಡ್‍ನಲ್ಲಿ ಬಿಗ್‍ಬಾಸ್ ಮನೆಯಿಂದ ಹೊರ ಹೋಗೋಕೆ ವೈಜಯಂತಿಗೆ ಸುದೀಪ್ ಆಫರ್ ನೀಡಿದರು. ಈ ಆಫರ್‍ಅನ್ನು ಸ್ವೀಕರಿಸಿದರು ವೈಜಯಂತಿ ಅಡಿಗ. ಈ ಮೂಲಕ ಬೆರಳೆಣಿಕೆ ದಿನಗಳಲ್ಲಿ ಅವರು ಮನೆಯಿಂದ ಹೊರ ಬಂದರು.

ಬಿಗ್‍ಬಾಸ್ ಫಿನಾಲೆ ದಿನ ಎಲ್ಲಾ ಸ್ಪರ್ಧಿಗಳು ವೇದಿಕೆಗೆ ಬಂದಿದ್ದರು. ಆದರೆ, ವೈಜಯಂತಿ ಅಡಿಗ ಬಂದಿರಲಿಲ್ಲ. ಇನ್‍ಸ್ಟಾಗ್ರಾಮ್‍ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದಾಗಲೂ ವೈಜಯಂತಿ ಬಿಗ್‍ಬಾಸ್ ಬಗ್ಗೆ ಮಾತನಾಡೋಕೆ ನೋ ಎಂದಿದ್ದರು. ಈಗ ಅವರು ತಮ್ಮ ಪ್ರಿಯಕರ ಸೂರಜ್ ಜತೆ ಆನ್‍ಲೈನ್‍ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.

ಈ ಫೋಟೋಗಳನ್ನು ವೈಜಯಂತಿ ಅಡಿಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈಜಯಂತಿ ಕುಟುಂಬ ಕೂಡ ಈ ಎಂಗೇಜ್‍ಮೆಂಟ್‍ನಲ್ಲಿ ಭಾಗಿಯಾಗಿತ್ತು. ಅವರ ಮದುವೆ ಆಗುವ ಹುಡುಗ ಅಮೆರಿಕದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿ ಎಂಬ ನೆನಪು ಸಿನಿಮಾದಲ್ಲಿ ಇವರು ನಟಿಸಿದ್ದರು.

Leave a Comment

Your email address will not be published. Required fields are marked *