Ad Widget .

ಬಂಟ್ವಾಳ| ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಕರಿಮಣಿ‌ ಸರ ಎಗರಿಸಿದ ಸುಲಿಗೆಕೋರರ ಬಂಧನ|

Ad Widget . Ad Widget .

ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕರಿಮಣಿ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.

Ad Widget . Ad Widget .

ಮಹಿಳೆ ವತ್ಸಲಾ ಎಂಬವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ವಲತ್ತಡ್ಕ ರೋಹಿತ್, ಕುಂಜಿರ್ ಪಂಜದ ದೇವಸ್ಯ ನಿವಾಸಿ ಲೋಹಿತ್ ಪಿ.ಆರ್. ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಲಿಗೆ ಮಾಡಿದ ಚಿನ್ನದ ಕರಿಮಣಿ ಸರವನ್ನು, ಆರೋಪಿಗಳ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧಿನ ಪಡೆದ ಸೊತ್ತುಗಳ ಮೌಲ್ಯ 1.35 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ಡಿ.ವೈ.ಎಸ್.ಪಿ ತಂಡ ಹಾಗೂ ಬಂಟ್ವಾಳ‌ ನಗರ ಠಾಣಾ ಪೊಲೀಸರು ಕಾರ್ಯಚರಣೆ ನಡೆಸಿದರು.

ಅತೀ ಶೀಫ್ರವಾಗಿ ಹಾಗೂ ಕ್ಲಿಷ್ಟಕರವಾದ ಪ್ರಕರಣವನ್ನು ಭೇದಿಸಿದ ತಂಡವನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.

Leave a Comment

Your email address will not be published. Required fields are marked *